ಮಂಗಳೂರು : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಕಾರ್ಯಕ್ರಮ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಕಾರ್ಯಕ್ರಮ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನಲ್ಲಿ ನಡೆಯಿತು.

ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಸಂಯೋಜಕರು ತೇಜಸ್ ರಾಜ್, ಜಿಲ್ಲಾ ಕಾಂಗ್ರೆಸ್ ಆಸಾಂಘಟಿತ ಸಮಿತಿ ಅಧ್ಯಕ್ಷರಾದ ಬಿ ಎಂ ಅಬ್ಬಾಸ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮನಂದ ಪೂಜಾರಿ, ಸಿ ಎಂ ಮುಸ್ತಫಾ, ಸತೀಶ್ ಪೆಂಗಲ್, ಜೇಮ್ಸ್ ಶಿವಬಾಗ್, ಇಮ್ರಾನ್ ಎ ಆರ್, ಯಶವಂತ್ ಪ್ರಭು, ಗೀತಾ ಅತ್ತಾವರ, ಲಕ್ಷ್ಮಣ್ ಶೆಟ್ಟಿ, ಸೋಹನ್ ಡಿ ಸೋಜಾ, ನಝೀರ್ ಬಜಾಲ್ ಮೊದಲದವರು ಉಪಸ್ಥಿತರಿದ್ದರು.