ಗಲ್ಫ್ ರಾಷ್ಟ್ರಗಳಲ್ಲಿ ಸದ್ದು ಮಾಡಲಿರುವ ರಾಪಟ ತುಳು ಸಿನಿಮಾ
ತುಳುವಿನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಾಪಟ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದ್ದು, ಬಹರೈನ್‍ನಲ್ಲಿ ಸೆಫ್ಟರಂಬರ್ 15ರಂದು ಪ್ರೀಮಿಯರ್ ಶೋ ನಡೆಯಲಿದೆ.
ಆ ಪ್ರಯುಕ್ತ ಟಿಕೆಟ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.ಬೊಳ್ಳಿ ಮೂವೀಸ್ ಹಾಗೂ ಅವಿಕ ಪ್ರೋಡಕ್ಷನ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಸಿನಿಮಾ ರಾಪಟ. ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ತೆರೆ ಕಾಣಲು ಚಿತ್ರತಂಡ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅಂತೆಯೇ ಬಹರೈನ್‍ನಲ್ಲಿ ಸೆಫ್ಟಂಬರ್ 15ರಂದು ರಾಪಟ ಸಿನಿಮಾದ ಪ್ರೀಮೊಯರ್ ಶೋ ನಡೆಯಲಿದ್ದು, ಆಪ್ರಯುಕ್ತ ಟಿಕೆಟ್ ಬಿಡುಗಡೆ ಸಮಾರಂಭ ನಡೆಯಿತು. ತುಳು ಸಿನಿಮಾ ರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರೀಮಿಯರ್ ಶೋದ ಟಿಕೆಟ್‍ನ್ನು ಬಹರೈನ್‍ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಪಟ ಸಿನಿಮಾದ ಕಲಾವಿದರು ಪಾಲ್ಗೊಂಡಿದ್ದರು.