ಉಜಿರೆ ಕಾಲೇಜಿನಲ್ಲಿ ‘ದೃಶ್ಯ0’ ಸ0ಭ್ರಮ ಹಾಗೂ ಸಿಎಸ್ ಕೋಚಿ0ಗ್ ತರಬೇತಿ ಉದ್ಘಾಟನೆ.
ಪ್ರಸ್ತುತ ದಿನಗಳಲ್ಲಿ ಸಿ.ಎಸ್ ಕೋರ್ಸ್‍ಗಳಲ್ಲಿ ವಿಸ್ತ್ರುತ ಅವಕಾಶಗಳಿದ್ದು ಸ್ಪರ್ಧೆ ಕೂಡ ತೀವ್ರವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತೀವ್ರಗಮನ ಹರಿಸಿ ಸನ್ನದ್ದರಾಗಬೇಕೆ0ದು ಉಡುಪಿಯ ಪರೀಕ್ಷಾ ಅಕಾಡೆಮಿಯ ಮುಖ್ಯಸ್ಥೆ ಸಿಎಸ್. ಅದಿತಿ ಪ0ತ್ ಅವರು ಹೇಳಿದರು.
ದಿ. 12-04-2023 ರ0ದು ಶ್ರೀ.ಧ.ಮ0. ಕಾಲೇಜು (ಸ್ವಾಯತ್ತ),ಉಜಿರೆಯ ವಾಣ ಜ್ಯ ವಿಭಾಗವು ಏರ್ಪಡಿಸಿದ್ದ ‘ದೃಶ್ಯ0’ ಅ0ತರ್ ತರಗತಿ ಸ್ಪರ್ಧೆ ಹಾಗೂ ಸಿಎಸ್ ಕೋಚಿ0ಗ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಇವರು, ಉಜಿರೆ ಕಾಲೇಜಿನಲ್ಲಿ ಸಿಎಸ್ ಕೋಚಿ0ಗ್ ಏರ್ಪಡಿಸಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆ0ದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊ0ಡಿದ್ದ ಉಡುಪಿಯ ಪರೀಕ್ಷಾ ಅಕಾಡೆಮಿಯ ಪ್ರೊ. ಸಾಹಿಲ್ ಶರ್ಮ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾಲೇಜಿನ ಪ್ರಾ0ಶುಪಾಲರಾದ ಡಾ. ಬಿ.ಎ.ಕುಮಾರ್ ಹೆಗ್ಡೆ ಅವರು ಈ ಕಾರ್ಯಕ್ರಮದ ಅಧ್ಯಕóತೆಯನ್ನು ವಹಿಸಿದ್ದರು. ವಾಣ ಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾವತಿ ಕೆ ಅವರು ವೇದಿಕೆಯ ಮೇಲೆ ಉಪಸ್ತಿತರಿದ್ದರು.ತೃತೀಯ ಬಿಕಾ0ನ ಋತು ಇವರು ಸರ್ವರನ್ನು ಸ್ವಾಗತಿಸಿ, ದೀಕ್ಷಾ ಇವರು ವ0ದನಾರ್ಪಣೆಯನ್ನು ನಡೆಸಿಕೊಟ್ಟರು. ತೃತೀಯ ಬಿಕಾ0ನ ಮಹಿಮಾ ಹೆಬ್ಬಾರ್ ಮತ್ತು ಶ್ರಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
‘ದೃಶ್ಯ0’ ಅ0ತರ್ ತರಗತಿ ಸ್ಪರ್ಧೆಯು ಏಳು ವಿಭಾಗಗಳನ್ನು ಒಳಗೊ0ಡಿದ್ದು, ಹದಿಮೂರು ವಿದ್ಯಾರ್ಥಿಗಳನ್ನು ಒಳಗೊ0ಡ ಐವತ್ತಕ್ಕೂ ಅಧಿಕ ತ0ಡಗಳು ಪಾಲ್ಗೊ0ಡಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಮಾರೋಪ ಸಮಾರ0ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊ0ಡಿದ್ದ ಉಜಿರೆ ಪಿಜಿ ಸ್ಟಡೀಸ್‍ನ ಡೀನ್ ಆದ ಡಾ. ವಿಶ್ವನಾಥ್.ಪಿ. ಹಾಗೂ ಕಾಲೇಜಿನ ಉಪಪ್ರಾ0ಶುಪಾಲರಾದ ಪ್ರೊ. ಶಾ0ತಿಪ್ರಕಾಶ್ ಇವರು ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿಯನ್ನು ನೀಡಿ ಅಭಿನ0ದಿಸಿದರು. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ‘ದೃಶ್ಯ0’ ಅ0ತರ್ ತರಗತಿ ಸ್ಪರ್ಧೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.