ಜ್ಞಾನ ವಿಸ್ತರಣೆ ಉಪನ್ಯಾಸ ಕಾರ್ಯಕ್ರಮ
ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಎಲ್ಲರೂ ಅಪ್ಲೈಡ್ ಸೈನ್ಸ್ ಕಡೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಉಜಿರೆಯ ಶ್ರೀ ಧ .ಮ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಎಸ್ ಎನ್ ಕಾಕತ್ಕರ್ ಹೇಳಿದರು.
ಮೂಲ ವಿಜ್ಞಾನಗಳ ಜನಪ್ರಿಯತೆ ಅಂಗವಾಗಿ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಬೆಳ್ತಂಗಡಿಯ ಎಸ್ ಡಿ ಎಂ ಹೈಸ್ಕೂಲ್ನಲ್ಲಿ ಲ್ಯಾಬ್ ಇನ್ ಕ್ಯಾಬ್ (ಜ್ಞಾನ ವಿಸ್ತಾರ) ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರೇವತಿ ಎಸ್ ಹಾಗೂ ಪ್ರೊ ಎಸ್ ಎನ್ ಕಾಕತ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಫಲನ, ವಕ್ರೀಭವನ, ಮಸೂರಗಳು, ಬಹು ಪ್ರತಿಫಲನ, ಪೂರ್ಣಂತರಿಕ ಪ್ರತಿಫಲನದಂತಹ ಬೆಳಕಿಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಾಯಿತು. ಅಲೆಗಳ ಚಲನೆ, ವಿದ್ಯುತ್ ಉತ್ಪಾದನೆ, ದ್ರವಗಳ ಮೇಲ್ಮೈಸಳೆತ, ದೂರದರ್ಶಕದ ಪ್ರಯೋಗಗಳನ್ನು ಸಹ ಪ್ರದರ್ಶಿಸಲಾಯಿತು.
ಶಾಲೆಯ 50 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದು ಇದನ್ನು ಬಹಳ ಆಸಕ್ತಿದಾಯಕವೆಂದು ಕಂಡುಕೊಂಡರು ಮತ್ತು ಮೂಲ ವಿಜ್ಞಾನದ ಕಡೆಗೆ ಒಲವು ತೋರಿಸಿದರು. ಈ ಸಂದರ್ಭದಲ್ಲಿ ರೇವತಿ ಎಸ್, ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಶಬ್ಧ ಮತ್ತು ಬೆಳಕು ಎಂಬ ವಿಷಯದ ಕುರಿತು ಜ್ಞಾನ ವಿಸ್ತರಣೆ ಉಪನ್ಯಾಸ ನೀಡಿದರು.