ಅನ್ಯಜಾತಿಯ ಯುವಕನೊಂದಿಗೆ ಮಗಳು ಪರಾರಿ ,ಕುಟುಂಬದ ಮೂವರು ಆತ್ಮಹತ್ಯೆ

ಶಿಡ್ಲಘಟ್ಟ : ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯ ಹಂಡಿಗನಾಳ ಗ್ರಾಮದಲ್ಲಿ ಮಗಳು ಅನ್ಯಜಾತಿ ಯುವಕನೊಂದಿಗೆ ಪರಾರಿಯಾದ ಕಾರಣ ಮನನೊಂದು ಒಂದೇ ಕುಟುಂಬದ ಮೂವರು ವಿಷಪೂರಿತ ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರು ಶ್ರೀರಾಮಪ್ಪ,ಸರೋಜ ಹಾಗೂ ಮನೋಜ್ ಎಂದು ತಿಳಿದುಬಂದಿದೆ.ಅರ್ಚನಾ ಎಂಬಾಕೆ ಹಂಡಿಗನಾಳ ಗ್ರಾಮದ ಚಾಲಕ ನಾರಾಯಣಸ್ವಾಮಿ ಎಂಬಾತನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ಆಕೆಯ ತಂದೆ, ತಾಯಿ ಮತ್ತು ಸಹೋದರ ಡೆತ್ನೋಟ್ ಬರೆದಿಟ್ಟು ವಿಷಪೂರಿತ ಗುಳಿಗೆಗಳನ್ನು ಸೇವಿಸಿ ಸಾವಿನ ದಾರಿ ಹಿಡಿದಿದ್ದಾರೆ. ಮಗಳೇ ತಮ್ಮ ಸಾವಿಗೆ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ,ಸಿಪಿಐ ನಂದನ್ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸತೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

Related Posts

Leave a Reply

Your email address will not be published.