ಶಿರೂರು: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಮೃತ್ಯು

ಶಿರೂರಿನ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿ ಮೃತಪಟ್ಟ ಘಟನೆ ಅಳ್ವೆಗದ್ದೆಯಲ್ಲಿ ನಡೆದಿದೆ.

ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ. ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು.

ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಪಾಲಾಗಿದ್ದಾರೆ. ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾgರು ಶೋಧ ನಡೆಸಿದ್ದರೂ ಪತ್ತೆಯಾಗಿಲ್ಲ. ಇಂದು ಬೆಳಗಿನ ಜಾವ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ, ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ತಹಶೀಲ್ದಾರರು ಹಾಗೂ ಸ್ಥಳೀಯ ಮೀನುಗಾರರು ಹಾಜರಿದ್ದರು.

Related Posts

Leave a Reply

Your email address will not be published.