ದ.ಕ.ಜಿಲ್ಲೆಯ ‌ಕೊನೆಯ ಜಾತ್ರೆ ಶಿಶಿಲ ” ಕೊರೊಂತಾಯನ ” ಪ್ರಾರಂಭ.

ದ.ಕ.ಜಿಲ್ಲೆಯ ಕೊನೆಯ ಜಾತ್ರೆ ಶಿಶಿಲ ಜಾತ್ರೆ. ಇಲ್ಲಿಯ ಕಪಿಲಾ ನದಿಯಲ್ಲಿರುವ ದೇವರ ಮೀನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸಿತ್ತಾರೆ. ಸರ್ವ ರೋಗ ಪರಿಹಾರಕ್ಕಾಗಿ ಇಲ್ಲಿಯ ದೇವರ ಮೀನಿಗೆ‌ ಆಹಾರ ಸಮರ್ಪಿಸುತ್ತಾರೆ. ಸ್ವಯಂಭೂ ಶಿವ ಇಲ್ಲಿಯ ಆರಾದ್ಯ ದೇವರು. ಮತ್ಸ್ಯ ವಿಶ್ಣುವಿನ ಅವತಾರ . ಆದುದರಿಂದ ಇದು ಹರಿ ಹರ ಸಂಗಮ ಪುಣ್ಯಕ್ಷೇತ್ರ.
ಮುಂದಿನ ಒಂಬತ್ತು ದಿನ ಜಾತ್ರಾ‌ ಕಾರ್ಯಕ್ರಮ ಜರಗಲಿದೆ.

ಮೆ.19 ರಂದು ಶ್ರೀ ದೇವರ ಮಹಾರಥೊಸ್ಯವ ಜರಗಲಿದೆ. ಧ್ವಜಾರೋಹಣ ದಿನ ಊರಿನ ಭಕ್ತಾದಿಗಳು ಉಪವಾಸ ಮಾಡುವುದು ಇಲ್ಲಿನ ಪದ್ದತಿ. ಹಾಗೆಂದು ಇಲ್ಲಿಯ ದೇವರ ಮೀನು ಪ್ರತೀ ದಿನ ಆಹಾರ‌ ಹಾಕುತ್ತಿದ್ದಾಗ ಕುಣಿದು ಕುಪ್ಪಳಿಸುತ್ತಿರುವುದನ್ನು ನೋಡಬಹುದು. ಆದರೆ ಶ್ರೀ ದೇವರ ಧ್ವಜಾರೋಹಣ ದಂದು ಇಲ್ಲಿಯ ಮತ್ಸ್ಯಸಂಕುಲ‌ ಆಹಾರ ಸ್ವೀಕರಿಸುವುದಿಲ್ಲ.ಇದು ಇಲ್ಲಿಯ ವಿಶಿಷ್ಠವಾದ ನಂಬಿಕೆ. ಅಂದು ನೀರಿಗೆ ಹಾಕಿದ ಆಹಾರ ಹಾಗೆಯೆ ಉಳಿದುದನ್ನು ನೋಡಬಹುದು. ತನ್ನೊಡೆಯನ‌ ಧ್ವಜಾರೋಹಣದಿಂದ ಸಂತೋಷಭರಿತ ಮೀನುಗಳು ಇಡೀದಿನ ಆಹಾರ ಸ್ವೀಕರಿಸದಿರುವದು ಅನಾದಿಕಾಲದಿಂದ ಬಂದಿರುವ ಇಲ್ಲಿಯ ನಂಬಿಕೆ

Related Posts

Leave a Reply

Your email address will not be published.