ಅತಿರುದ್ರ ಮಹಾಯಾಗದ ಸಂಪನ್ನದಿವಸ : ನಡೆಯಲಿರುವ ಕಾರ್ಯಕ್ರಮಗಳ ಮುನ್ನೋಟ
ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹನ್ನೊಂದು ದಿನಗಳನ್ನು ಪೂರೈಸಿ, ಇದೀಗ ಸಂಪನ್ನಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಕಳೆದ 11 ದಿನಗಳಲ್ಲಿ ಹಲವು ಗಣ್ಯಾತಿ ಗಣ್ಯರು ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ ಮತ್ತು ಯಾಗದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಲೆಂದೇ ದೂರದೂರಿನಿಂದ ಭಕ್ತಾದಿಗಳು ಆಗಮಿಸುತ್ತಿರುವುದು, ಯಾಗದ ಕಳೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರೊಂದಿಗೆ ಭಕ್ತಿಯ ಸ್ವರೂಪವಾಗಿ ನಾನಾ ರೀತಿಯ ಸೇವೆಗಳನ್ನು ಭಕ್ತರು ಶ್ರೀ ರುದ್ರನಿಗೆ ನೀಡುತ್ತಿರುವುದು ವಿಶೇಷವಾಗಿದೆ. ಪರಶಿವನಿಗೆ ಭಕ್ತಿ ಮತ್ತು ಪ್ರೀತಿಯಿಂದ ಏನನ್ನೂ ನೀಡಬಹುದು ಎಂಬುದಕ್ಕೆ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಸಾಕ್ಷಿಯಾಗಿದೆ.
ಅತಿರುದ್ರ ಮಹಾಯಾಗದ ಸಮಾಪ್ತಿಯ ದಿನವಾದ ಮಾರ್ಚ್ 05, 2023 ರ ಭಾನುವಾರದಂದು ಅತಿರುದ್ರ ಯಾಗಮಂಟಪದಲ್ಲಿ, ಬೆಳಗ್ಗೆ 06:30 ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, ಬೆಳಗ್ಗೆ 11:30 ಕ್ಕೆ ಜಗದ್ಗುರುಗಳ ಸಾನಿಧ್ಯದಲ್ಲಿ ಪೂರ್ಣಾಹುತಿ, ಮಧ್ಯಾಹ್ನ 12:00 ಕ್ಕೆ ಜಗದ್ಗುರುಗಳಿಂದ ಶ್ರೀ ದೇವರಿಗೆ ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಫಲಮಂತ್ರಾಕ್ಷತೆ ಮತ್ತು ಮಧ್ಯಾಹ್ನ 12:30 ಕ್ಕೆ ಪಲ್ಲಪೂಜೆ, ಮಹಾಸಂತರ್ಪಣೆ ನೆರವೇರಲಿವೆ.
ಮಧ್ಯಾಹ್ನ 2 ರಿಂದ, ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆ ಮತ್ತು ಪ್ರೊ ಪವನ್ ಕಿರಣ್ ಕೆರೆ ವಿರಚಿತ ಸುಶಾಸನ ಸಮಿತಿ ಪ್ರಸ್ತುತಿಯಲ್ಲಿ “ಕಾಶ್ಮೀರ ವಿಜಯ” ತಾಳಮದ್ದಲೆ, ಸಂಜೆ 5 ರಿಂದ ಸಮಾರೋಪ ಸಮಾರಂಭ ಮತ್ತು ರಾತ್ರಿ 8:30 ರಿಂದ, ಅಜಯ್ ವಾರಿಯರ್ ಮತ್ತು ಮನೋಜಮ್ ಅವರಿಂದ “ಭಕ್ತಿ ಸಂಗೀತ ರಸಮಂಜರಿ”