ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಫೆ. 22 ರಂದು ಅತಿರುದ್ರ ಮಹಾಯಾಗ ಸಂಕಲ್ಪ

ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, 2023 ರ ಬುಧವಾರ ಬೆಳಿಗ್ಗೆ 06:30 ಕ್ಕೆ ‘ಅತಿರುದ್ರ ಮಹಾಯಾಗ’ದ ಮಹಾಸಂಕಲ್ಪದಿಂದ ಮೊದಲ್ಗೊಂಡು, 121 ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಪ್ರಾರಂಭಗೊಳ್ಳಲಿದೆ. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಮಹಾಪೂಜೆ ನೆರವೇರಲಿದೆ.

ಮಧ್ಯಾಹ್ನ 12:00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ, ಸಂಜೆ 05:30 ಕ್ಕೆ ಕು. ಅಕ್ಷಯ ಗೋಖಲೆಯವರಿಂದ ಧಾರ್ಮಿಕ ಉಪನ್ಯಾಸ, ಸಂಜೆ 06:30 ರಿಂದ ಜಂಸಾಲೆ ರಾಘವೇಂದ್ರ ಆಚಾರ್ಯ ರವರ ಸಾರಥ್ಯದಲ್ಲಿ “ಯಕ್ಷಗಾನ ವೈಭವ” ಕಾರ್ಯಕ್ರಮಗಳು ನಡೆಯಲಿವೆ.

Related Posts

Leave a Reply

Your email address will not be published.