ಫೆ.5 : ಕುದ್ರೋಳಿಯಲ್ಲಿ “ಶೂದ್ರ ಶಿವ” ನಾಟಕ

ಮಂಗಳೂರಿನ ರುದ್ರ ಥೇಟರ್ ಅರ್ಪಿಸುವ “ಶೂದ್ರಶಿವ” ಕನ್ನಡ ನಾಟಕ ಫೆ.5ರ ಭಾನುವಾರ ಸಂಜೆ 5.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಈ ನಾಟಕ ಸಿದ್ದಗೊಂಡಿದೆ.

ಲೇಖಕ ಬಾಬು ಶಿವ ಪೂಜಾರಿ ಅವರ ‘ಶ್ರೀ ನಾರಾಯಣ ಗುರು ವಿಜಯ ದರ್ಶನ” ಪುಸ್ತಕವನ್ನು ಪ್ರೇರಣಾ ಪಠ್ಯವಾಗಿಟ್ಟುಕೊಂಡು ಜೊತೆಗೆ ನಾರಾಯಣ ಗುರುಗಳ ಬಗ್ಗೆ ಇತರ ಲೇಖಕರ ಸಾಹಿತ್ಯ ವನ್ನು ಅಭ್ಯಸಿಸಿ ಶೂದ್ರಶಿವ ನಾಟಕವನ್ನು ಪ್ರಸ್ತುತಿಪಡಿಸಲಾಗಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಚಳವಳಿಯ ಐತಿಹಾಸಿಕ ಹಿನ್ನೆಲೆಯನ್ನು ರಂಗ ಪ್ರಯೋಗಕ್ಕೆ ರುದ್ರ ಥೇಟರ್ ಅಳವಡಿಸಿದ್ದು , ಮೊದಲ ಪ್ರದರ್ಶನ ಭಾನುವಾರ ಸಂಜೆ ಕುದ್ರೋಳಿಯಲ್ಲಿ ನಡೆಯಲಿದೆ. ರುದ್ರ ಥೇಟರ್ ರಂಗ ತಂಡವು 21 ಕಲಾವಿದರ ತಂಡವಾಗಿದ್ದು , ಈ ಕಲಾವಿದರಿಗೆ 70 ದಿನಗಳ ತರಬೇತಿ ಮೂಲಕ ಶೂದ್ರ ಶಿವ ನಾಟಕವನ್ನು ಸಿದ್ದಪಡಿಸಲಾಗಿದೆ ಎಂದು ರುದ್ರ ಥೇಟರ್ ನ ಮಾರ್ಗದರ್ಶಕರಾಗಿರುವ ಪದ್ಮರಾಜ್ ಆರ್ . ಅವರು ತಿಳಿಸಿದ್ದಾರೆ.