ವಿಶಾಲಾಕ್ಷಿ ಶಿವಾನಂದ್ ಪಾಟೀಲ್‍ಗೆ ಟಿಕೆಟ್ ಘೋಷಣೆ ವಿಚಾರ : ಸಿಂಧಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

ಸಿಂದಗಿಯಲ್ಲಿ ದಿವಂಗತ ಶಿವಾನಂದ್ ಪಾಟೀಲ್ ಸೋಮಜಾಳ ಶ್ರದ್ದಂಜಲಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯೆಂದು ವಿಶಾಲಾಕ್ಷಿ ಶಿವಾನಂದ್ ಪಾಟೀಲ್ ಎಂದು ಘೋಷಣೆ ಮಾಡಿದ್ದು ಕೆಲವು ಜೆಡಿಎಸ್ ಕಾರ್ಯಕರ್ತರ ಅಸಮಾಧಾನ ಉಂಟಾಗಿದೆ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.
ಅವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ವಿಶಾಲಾಕ್ಷಿ ಶಿವಾನಂದ್ ಪಾಟೀಲ ಇವರು ಹಳೆ ಕಾರ್ಯಕರ್ತರನ್ನು ಮರೆತು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಇವರು ಪಕ್ಷ ಗೆಲ್ಲಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಸಿಂದಗಿ ಮುಂಬರುವ ವಿಧಾನಸಭಾ ಚುನಾವಣೆ ಜೆಡಿಎಸ್ ಪಕ್ಷದ ಟಿಕೆಟ್ ಅಲ್ಪಸಂಖ್ಯಾತರ ಸಮುದಾಯಕ್ಕೆ ಕೊಡಬೇಕು ಮುಸ್ಲಿಂ ಸಮುದಾಯದ 30 ರಿಂದ 35 ಸಾವಿರ ಮತಗಳಿದ್ದು ಅಲ್ಪಸಂಖ್ಯಾತರ ಸಮುದಾಯಕ್ಕೆ ಜೆಡಿಎಸ್ ಪಕ್ಷದ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದರು.
ನಾನಾಗೌಡ ಪಾಟೀಲ ಪ್ರಭುಗೌಡ ಕುಳಗೇರಿ, ಮಲ್ಲನಗೌಡ ಪಾಟೀಲ ಮತ್ತಿತರರು ಇದ್ದರು.
