ಸೋಮೇಶ್ವರ : ಮೀನಿನ ಬಲೆಗೆ ಬೆಂಕಿ
ಉಳ್ಳಾಲ: ಮೀನಿನ ಬಲೆಗೆ ಆಕಸ್ಮಿಕ ಬೆಂಕಿ ಬಿದ್ದು ರೂ.15 ಲಕ್ಷ ಸೊತ್ತುಗಳು ಹಾನಿಯಾಗಿರುವ ಘಟನೆ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಜರಗಲಿದೆ.
ಇಂದು ಮದ್ಯಾಹ್ನದ ವೇಳೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ ಬಳಿಯ ನಾಡ ದೋಣಿಗಳ ಶೆಡ್ ಹತ್ತಿರ ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಬಲೆಗೆ ಬೆಂಕಿ ತಗುಲಿದ್ದು ಬಲೆಗಳು ಸುಟ್ಟು ಕರಕಲಾಗಿವೆ. ಕಿಡಿಗೇಡಿಗಳ ಕೃತ್ಯದಿಂದ ಘಟನೆ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಾಡ ದೋಣಿ ಮೀನುಗಾರರಾದ ಹೇಮಂತ್ ಉಚ್ಚಿಲ,ಸಂತೋಷ್ ಉಚ್ಚಿಲ,ಸಾಧನ ಉಚ್ಚಿಲ,ಶೇಖರ್ ಸೋಮೇಶ್ವರ,ಯೋಗೀಶ್ ಸೋಮೇಶ್ವರ ಅವರ ಮೀನಿನ ಬಲೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.ಕಳೆದ ಮಾರ್ಚ್ ತಿಂಗಳಲ್ಲೂ ಇದೇ ಪ್ರದೇಶದಲ್ಲಿ ಎರಡು ನಾಡ ದೋಣಿ ಮತ್ತು ಅದರಲ್ಲಿದ್ದ ಮೀನಿನ ಬಲೆಗಳು ಬೆಂಕಿ ಆಕಸ್ಮಿಕದಿಂದ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು.
ಸ್ಥಳಕ್ಕೆ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ ಭೇಟಿ ನೀಡಿ ಬಡ ಮೀನುಗಾರರಿಗೆ ಶೀಘ್ರವೆ ಸೂಕ್ತ ಪರಿಹಾರ ತೆಗೆಸಿ ಕೊಡುವಂತೆ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ