ಕುಪ್ಪೆಪದವಿನಲ್ಲಿ ಡಾ. ವೈ ಭರತ್ ಶೆಟ್ಟಿ ಮತಪ್ರಚಾರ
ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರ ಸಭೆ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರ ನೇತೃತ್ವದಲ್ಲಿ ಕುಪ್ಪೆಪದವಿನಲ್ಲಿ ಮತಪ್ರಚಾರ ನಡೆಸಿದರು ನಡೆಯಿತು.
ಮತದಾನ ಪೂರ್ವದ ಮತದಾರರನ್ನು ಸಂಪರ್ಕಿಸುವ ಮಹಾ ಅಭಿಯಾನದ ಅಂಗವಾಗಿ ಕ್ಷೇತ್ರದಾದ್ಯಂತ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ. ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಶಾಸಕರು ಶುಭಕೋರಿದರು.
ಮುತ್ತೂರು ಗ್ರಾಮದ ಕೊಳವೂರು ಶಕ್ತಿ ಕೇಂದ್ರದ ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬೂತ್ ಸಂಖ್ಯೆ ೧೯೬ ರಲ್ಲಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮಹಾಅಭಿಯಾನದ ಅಂಗವಾಗಿ ಕಾರ್ಯಕರ್ತ ಬಂಧುಗಳೊಂದಿಗೆ ಸಭೆ ನಡೆಸಿದರು
ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.