ಭಾರತದ ಎರಡನೆಯ ಆಸ್ತಿವಂತ ಸಿಬಿಸಿಐ|| #v4news

ಇತ್ತೀಚೆಗೆ ಸೋನಿಯಾ ಗಾಂಧಿಯವರು ಕೊಟ್ಟ ಪ್ರಮಾಣಪತ್ರದಲ್ಲಿ ಒಂದಷ್ಟು ಹೂಡಿಕೆ, ಆಭರಣ, ಉಳಿತಾಯ ನನ್ನದೇ ಇದ್ದರೂ ಭಾರತದಲ್ಲಿ ನನಗೆ ಸ್ವಂತ ಮನೆಯಾಗಲಿ, ಸ್ವಂತ ಕಾರು ಇಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಟೆಲಿಯಲ್ಲಿ ಅವರ ಹಿರಿಯರಿಂದ ಬಂದ ಒಂದು ಮನೆ ಇದೆಯಂತೆ. ಇನ್ನೊಂದು ವಿಷಯವೆಂದರೆ ಭಾರತದಲ್ಲಿ ಭಾರತ ಸರಕಾರದ ಬಳಿಕ ಅತಿ ಹೆಚ್ಚು ಆಸ್ತಿ ಹೊಂದಿರುವ ಸಿಬಿಸಿಐಗೆ ರೋಮ್ ಸಾಮ್ರಾಜ್ಯದ ಒಡೆತನದ ಮುದ್ರೆ ಇದೆ.

ಈಗ ಎಲ್ಲ ಕಡೆ ಆಸ್ತಿ ಹೊಂದಿರುವವರು ಮತ್ತು ಆಸ್ತಿ ಇಲ್ಲದೆ ಬರೇ ಅಸ್ತಿಪಂಜರ ಆಗಿರುವವರು ಇದ್ದೇ ಇದ್ದಾರೆ. ದಾಸರು ಹೇಳುವಂತೆ ಯಾರು ಯಾರೋ ಹಿಂದೆ ಈ ಆಸ್ತಿ ತಮ್ಮದು ಎಂದುಕೊಂಡಿದ್ದರು. ಕೊನೆಯ ಮೊಗಲ್ ಚಕ್ರವರ್ತಿ ಬಹದೂರ್ ಶಾ ಮೊದಲ ಸ್ವಾತಂತ್ರ್ಯ ಸಮರದ ಬಳಿಕ ಬ್ರಿಟಿಷರಿಂದ ಬರ್ಮಾಕ್ಕೆ ಗಡಿಪಾರು ಆದ. ಕವಿಯಾಗಿದ್ದ ಈ ದೊರೆ, ಹೆಸರಿಗೆ ಸಾಮ್ರಾಟ, ಕೊನೆಗೆ ಹೂಳಲು ಆರಡಿ ಮೂರಡಿ ಜಾಗವನ್ನೂ ಹೊಂದಿಲ್ಲ ಎಂದೆಲ್ಲ ಕವನ ಬರೆದು ಅಸು ನೀಗಿದ. ಸಿರಿವಂತ ಕವಿ ತಾಲ್‍ಸ್ತಾಯ್ ಕೊನೆಗೆ ಅನಾಥನಂತೆ ರೈಲು ನಿಲ್ದಾಣದಲ್ಲಿ ಸತ್ತು ಬಿದ್ದಿದ್ದ. ಆದರೆ ಈ ಇಬ್ಬರಿಗೂ ಅಭಿಮಾನಿಗಳು ಇದ್ದುದರಿಂದ ಅವರ ನೆಲೆ,ಹೆಸರು ಇದೆ. ಮತ್ತೆ ಕೆಲವರು ಹೇಳ ಹೆಸರಿಲ್ಲದೆ ಹೋಗಿದ್ದಾರೆ.

ತತ್ವಜ್ಞಾನಿಗಳು ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ ಎಂದರು. ಅಲ್ಲಿ ನಮ್ಮ ಮನೆ ಇದೆ ಎನ್ನುವುದಕ್ಕೆ ಯಾವ ಆಧಾರವೂ ಸಿಕ್ಕಿಲ್ಲ. ಸೋನಿಯಾ ಗಾಂಧಿಯವರಿಗೆ ಇಟೆಲಿಯಲ್ಲಿ ಹಿರಿಯರಿಂದ ಬಂದ ಮನೆ ಇದ್ದರೂ ಅದನ್ನು ಅವರು ಅಲ್ಲಿರುವುದು ಸುಮ್ಮನೆ ಇಲ್ಲಿರುವುದು ನಮ್ಮನೆ ಎನ್ನಬಹುದು. ಸರಕಾರಿ ಮನೆ, ಬಾಡಿಗೆ ಮನೆ ಎಲ್ಲವೂ ಇರುವವರೆಗೆ ನಮ್ಮದೇ. ಅಂದು ಸಾಮ್ರಾಜ್ಯಕ್ಕಾಗಿ ವಿನಾಶಕ ಯುದ್ಧ; ಇಂದು ಆಸ್ತಿಗಾಗಿ ರಕ್ತ ಸಂಬಂಧಿಗಳ ಕೊಲೆಯವರೆಗೆ ಆಸ್ತಿ ಜನರ ದುರಾಸೆಯ ವಸ್ತು ಆಗಿಯೇ ಉಳಿದಿದೆ. ಗಂಡಸರು ಹೆಣ್ಣು, ಹೊನ್ನು, ಮಣ್ಣು ಮೂರನ್ನೂ ತಮ್ಮ ಆಸ್ತಿ ಎಂದೇ ಬರೆದುಕೊಂಡಿದ್ದಾರೆ. ತಾನು ಆಸ್ತಿಯಲ್ಲ ಒಂದು ಜೀವ ಎಂಬ ಹೆಣ್ಣಿನ ಕೂಗು ಇನ್ನೂ ಗಿರಿ ಮುಟ್ಟಿಲ್ಲ. ಯಾಕೆಂದರೆ ಎತ್ತರದ ಪರ್ವತಗಳು ಯಾರ ಆಸ್ತಿಯೂ ಅಲ್ಲ; ಅದು ಸರಕಾರದ ಆಸ್ತಿ.

2021ರ ಲೆಕ್ಕದಂತೆ ಭಾರತ ಸರಕಾರವು 15,531 ಚದರ ಕಿಲೋಮೀಟರ್ ಸ್ವಂತ ಆಸ್ತಿ ಹೊಂದಿದೆ. ಕಳೆದೊಂದು ದಶಕದಲ್ಲಿ ಭಾರತ ಸರಕಾರದ ಆಸ್ತಿಯನ್ನು ಮಾರಿದ, ಕಾಸಗಿಯವರಿಗೆ ಗುತ್ತಿಗೆಗೆ ನೀಡಿದ್ದು ಎಂದು ದೇಶ ಸರಕಾರದ ಆಸ್ತಿ ಕುಗ್ಗಿದೆ. ಭಾರತದಲ್ಲಿ ಸರಕಾರದ ಬಳಿಕ ಅತಿ ಹೆಚ್ಚು ಆಸ್ತಿ ಹೊಂದಿ ಎರಡನೆಯ ಸ್ಥಾನದಲ್ಲಿ ಇರುವುದು ಕ್ಯಾಥೊಲಿಕ್ ಚರ್ಚ್ ಆಫ್ ಇಂಡಿಯಾ. ಇವರ ಆಸ್ತಿ 7 ಕೋಟಿ ಹೆಕ್ಟೇರ್ ಇಲ್ಲವೇ 17.29 ಕೋಟಿ ಎಕರೆ. ಇದರ ನೇತೃತ್ವ ಪೆÇೀಪ್‍ರದು. ಹೆಸರಿಗೆ ಇದರ ಮಾಲಕರು ಪೆÇೀಪ್ ಫ್ರಾನ್ಸಿಸ್ ಎನ್ನಬಹುದು. ರೋಮ್ ನಗರದೊಳಗಿದೆ ಜಗತ್ತಿನ ಅತಿ ಚಿಕ್ಕ ದೇಶ ವ್ಯಾಟಿಕನ್. ಅಲ್ಲಿ ಈ ಆಸ್ತಿ ಒಂದು ಹಾಳೆಯ ಮೂಲೆಯಲ್ಲಿ ಇರುತ್ತದೆ. ಭಾರತದಲ್ಲಿ ಈ ಆಸ್ತಿಯ ಮಾಲಕರು ಸಿಬಿಸಿಐ ಎಂದರೆ ಕ್ಯಾಥೊಲಿಕ್ ಬಿಶಪ್ ಕಾನ್ಫರೆನ್ಸ್ ಆಫ್ ಇಂಡಿಯಾ. ಇವರಿಗೂ ಈ ಆಸ್ತಿಯೆಲ್ಲ ಕೈವಶ ಎಂದು ಹೇಳಲಾಗದು. ಈ ಆಸ್ತಿಯಲ್ಲಿ ಶಾಲಾ, ಕಾಲೇಜು, ಆಸ್ಪತ್ರೆ, ಇಗರ್ಜಿ ಅಲ್ಲದೆ 116 ಸಾರ್ವಜನಿಕ ವಲಯದ ಕಂಪೆನಿಗಳು, 51 ಸಚಿವಾಲಯಗಳ ಬಳಕೆ ಸಹ ಇವೆ.

ಸಿಬಿಸಿಐ ಹೊಂದಿರುವ ಆಸ್ತಿಯ ಒಟ್ಟು ಮೌಲ್ಯ 20,000 ಕೋಟಿ ರೂಪಾಯಿ ಎಂದು ಅಂದಾಜು. ಇದರಲ್ಲಿ ದಶಕದ ಹಿಂದಿನ ಲೆಕ್ಕದಂತೆ ಕ್ಯಾಥೊಲಿಕರು ನಡೆಸುವ 2,457 ಆಸ್ಪತ್ರೆಗಳು, 245 ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು, 28 ಕಾಲೇಜುಗಳು, 5 ಎಂಜಿನಿಯರಿಂಗ್ ಕಾಲೇಜುಗಳು, 3,765 ಮಾಧ್ಯಮಿಕ ಶಾಲೆಗಳು, 7,319 ಪ್ರಾಥಮಿಕ ಶಾಲೆಗಳು, ಚರ್ಚುಗಳು ಇವೆ. ಭಾರತದಲ್ಲಿ ಜನಸಾಮಾನ್ಯರಿಗೆ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ಸಿಗುವಂತೆ ಮೊದಲು ಮಾಡಿದವರು ಕ್ರಿಶ್ಚಿಯನ್ ಮಿಶನರಿಗಳು. ಇವರು ಪ್ರಾಟೆಸ್ಟೆಂಟ್ ಕ್ರಿಶ್ಚಿಯನರು. ಅವರ ಬೆನ್ನಿಗೇ ಕ್ಯಾಥೊಲಿಕ್ ಕ್ರಿಶ್ಚಿಯನರು ಸಹ ಈ ಜನಸೇವೆ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಹಿಂದೂಗಳು ಮಾಡಿದ ಕೆಲಸಗಳಲ್ಲಿ ಒಂದು ಶಿಕ್ಷಣ ಮತ್ತು ವೈದ್ಯಕೀಯ ಸೇವೆಯನ್ನು ವಾಣಿಜ್ಯ ಎನಿಸಿದ್ದು. ಈಗ ಎಲ್ಲರದ್ದೂ ಅದೇ.

ಕ್ರಿಶ್ಚಿಯನ್ ಧರ್ಮದ ಆದಿಯಲ್ಲಿ ಧರ್ಮವನ್ನು ಸಹ ಚರ್ಚ್ ಎಂದೇ ಹೇಳುತ್ತಿದ್ದರು. ಮುಂದೆ ಅದು ಆರ್ಥೊಡಾಕ್ಸ್, ಕ್ಯಾಥೊಲಿಕ್ ಎಂದು ಒಡೆಯುತ್ತ 1054ರಲ್ಲಿ ಕ್ಯಾಥೊಲಿಕ್ ಸ್ಪಷ್ಟಗೊಂಡಿತು. ಬಾಪ್ಟಿಸಂ ಸ್ಥಾನದಿಂದ ತಪೆÇ್ಪಪ್ಪಿಗೆಯ ವಿಧಿಯವರೆಗೆ ಇವರದೇ ಕೆಲವು ಆಚಾರಗಳಿವೆ. ಆರ್ಥೊಡಾಕ್ಸ್‍ಗಿಂತ ಭಿನ್ನವಾದ ಕ್ಯಾಥೊಲಿಕರ ಅತಿ ಮುಖ್ಯ ಅಂಶವೆಂದರೆ ಪಾದ್ರಿಯ ಸೇವೆ ಇಲ್ಲದೆಯೇ ಜನರು ದೇವರ ಕರುಣೆಗೆ ಅರ್ಹರಾಗಬಹುದು. ಪ್ರಾಟೆಸ್ಟೆಂಟ್‍ಗಳಲ್ಲಿ ಸ್ಥಳೀಯ ಜನ ಭಾಷೆ ಕಡ್ಡಾಯ. ಮಂಗಳೂರಿನ ಕ್ಯಾಥೊಲಿಕರು ಕೊಂಕಣಿ ಮನೆಮಾತಿನವರು ಎಂದರೆ ಗೋವಾದ ಚರ್ಚ್ ಪ್ರಭಾವದವರು. ಭಾರತದ ಮೊದಲ ಕ್ರಿಶ್ಚಿಯನ್ ಸಿರಿಯನ್‍ಗಳು ಕೇರಳದ ಕಡೆಯಿಂದ ಬಂದವರು. ಮಂಗಳೂರಿನ ಪ್ರಾಟೆಸ್ಟೆಂಟ್‍ಗಳು ತುಳು ಮನೆ ಮಾತು ಹೊಂದಿದವರಾಗಿದ್ದಾರೆ.

ಕ್ಯಾಥೊಲಿಕರು ಹೊಂದಿರುವ ಆಸ್ತಿ ಮೂಲದಲ್ಲಿ ಖರೀದಿಸಿದ್ದು ಅನಂತರದ್ದು ಬ್ರಿಟಿಷರಿಂದ ಗುತ್ತಿಗೆಗೆ ಪಡೆದದ್ದು. ಬ್ರಿಟಿಷರು ಗೆದ್ದುಕೊಂಡ ಆಸ್ತಿಯನ್ನು ಗುತ್ತಿಗೆಗೆ ನೀಡಿದ್ದರಿಂದ ಕೆಲವು ಕ್ಯಾಥೊಲಿಕರ ಆಸ್ತಿಗಳ ಮೇಲೆ ಬೇರೆಯವರು ಹಕ್ಕು ಸಾಧಿ ಸಿದ ತಕರಾರುಗಳೂ ಕೆಲವೆಡೆ ಇವೆ. 1927ರ ಬ್ರಿಟಿಷರ ಚರ್ಚ್ ಆಕ್ಟ್ ಪ್ರಕಾರ ಒಂದಷ್ಟು ಆಸ್ತಿಯನ್ನು ರಿಯಾಯಿತಿ ದರದಲ್ಲಿ ಚರ್ಚುಗಳಿಗೆ ನೀಡಿದ್ದೂ ಇದೆ. ಆಸ್ತಿ ಇದ್ದಲ್ಲಿ ಜಗಳ, ತಕರಾರು, ಬೆನ್ನಿನ ಹಿಂದೆ ಮಸಲತ್ತು ಎಲ್ಲ ಕಡೆ ಇರುತ್ತದೆ. ಏಕೆಂದರೆ ನಾವೆಲ್ಲರೂ ಗೊಮ್ಮಟನಂತೆ ಎಲ್ಲ ಆಸೆ ಬಿಟ್ಟು ಬತ್ತಲಾದವರಲ್ಲ. ನಮ್ಮ ಬಟ್ಟೆಯ ಕತ್ತಲೆ ಕಿಸೆಯಲ್ಲಿ ಸಾಕಷ್ಟು ಆಸೆಗಳು ಇವೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.