ಸೂಟರ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಬಲೀಂದ್ರ ಪೂಜೆ

ಮಂಗಳೂರು * ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ಹಾಗೂ ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಈ ದಿನವೂ ಕೂಡ ವಿಶಿಷ್ಟತೆಯನ್ನು ಪಡೆದಂತಹ ದಿನ.ಪ್ರಜಾಹಿತ ರಾಜನಾಗಿ , ದಾನಶೂರನೆಂದು ಪ್ರಖ್ಯಾತಿ ಪಡೆದ ಬಲೀಂದ್ರನ ಪೂಜೆಯನ್ನು ದೈವಸ್ದಾನಗಳಲ್ಲಿ ದೀಪಾವಳಿ ಹಬ್ಬದಂದು ಆಚರಿಸಲಾಗುತ್ತದೆ.

ದೈವಸ್ಥಾನದ ಗುರಿಕಾರರಾದ ಎಸ್. ರಾಘವೇಂದ್ರ ಅವರು ಬಲೀಂದ್ರ ಪೂಜೆಯ ಮಹತ್ವವನ್ನು ವಿವರಿಸಿದರು. ಶ್ರೀಹರಿಯು ವಾಮನ ವಟುವಾಗಿ  ಬಂದು ಯಾಗ ನಿರತನಾದ ಬಲಿ ಚಕ್ರವರ್ತಿಯಲ್ಲಿ ಮೂರು ಪಾದಗಳಷ್ಟು  ಭೂ ದಾನ ಬೇಡುತ್ತಾರೆ. ಬಲಿ ಇದಕ್ಕೆ ಒಪ್ಪಿಕೊಂಡಾಗ ತನ್ನ ಮೊದಲೆರಡ ಪಾದಗಳನ್ನು  ಭೂಮಿ ಹಾಗೂ ಆಕಾಶಕ್ಕೆ ಇಟ್ಟು ಆಕ್ರಮಿಸಿದ ವಾಮನ ವಟು ಮೂರನೇ ಪಾದಕ್ಕೆ ಸ್ಥಾನವೆಲ್ಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಯ ಮೇಲಿಡಲು ಪ್ರಾರ್ಥಿಸಿಕೊಂಡಾಗ ವಾಮನ ಆತನನ್ನು ಪಾತಾಳಕ್ಕೆ ತುಳಿಯುತ್ತಾರೆ. ಹೀಗೆ ಬಲಿ ಚಕ್ರವರ್ತಿ ಸತ್ಕಾರ್ಯ,  ದಾನ- ಧರ್ಮ, ಯಾಗ-ಯಜ್ಞಗಳಿಂದಲೂ ಗಮನ ಸೆಳೆಯುತ್ತಾನೆ.

ದಾನಶೂರ ಬಲಿ ಚಕ್ರವರ್ತಿ ವಾಮನನಾದ ಶ್ರೀಹರಿಯ ಕೃಪೆಗೆ ಪಾತ್ರನಾಗುತ್ತಾನೆ. ಆದರೆ , ವಾಮನನಾಗಿ ಬಂದ ದೇವರು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ಅನುಗ್ರಹಿಸುವ ಸಂಗತಿ ಮಾತ್ರ ಬಲಿಯ ನೈತಿಕತೆ – ಶ್ರೇಷ್ಠತೆಯನ್ನಾಗಿ ಜನಪದರು ದೀಪಾವಳಿಯಂದು ಸ್ತುತಿಸುತ್ತಾರೆ . 

ಈ ಸಂದರ್ಭದಲ್ಲಿ ದೈವಸ್ದಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ, ಎಸ್ . ಬಾಬು , ಅರ್ಚಕ ಎಸ್.  ಗಣೇಶ ,  ಪ್ರಧಾನ ಕಾರ್ಯದರ್ಶಿ  ಎಸ್.ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಶ್ರೀ ಎಸ್. ನವೀನ್ ಹಾಗೂ ಪದಾಧಿಕಾರಿಗಳಾದ ಎಸ್.ಮೋಹನ್,  ಬಿ.ವಿಶ್ವನಾಥ್ ಸಾಲ್ಯಾನ್,  ಎಸ್.ಜನಾರ್ದನ, ಬಿ.ಗಣೇಶ್ , ಎಸ್. ವಸಂತ , ಎಸ್.ಸುರೇಶ್, ಎಸ್.ಉಪೇಂದ್ರ , ಎಸ್. ಪ್ರವೀಣ್, ರಂಜಿತ್ , ಉಮಾಪ್ರಸಾದ್ , ಪುರುಷೋತ್ತಮ ಪದಕಣ್ಣಾಯ , ಸುನಿಲ್ ರಾಜ್ ಪದಕಣ್ಣಾಯ , ಕಿರಣ್ ರಾಜ್ ಪದಕಣ್ಣಾಯ , ಅಪ್ಪಿ ಎಸ್.  ಸುದೇಶ್ ಕು

Related Posts

Leave a Reply

Your email address will not be published.