ಪ್ರಸಿದ್ಧ ವೈದ್ಯ ಡಾ. ಸುರೇಶ್ ಸುರತ್ಕಲ್ ನಿಧನ
ಪ್ರಸಿದ್ಧ ವೈದ್ಯ ಡಾ. ಸುರೇಶ್ ಸುರತ್ಕಲ್ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಜ್ಞ ವೈದ್ಯರಾಗಿ ಜಿಲ್ಲೆಯಲ್ಲಿಯೇ ಪ್ರಸಿದ್ಧ ರಾಗಿದ್ದರು. ಕೋವಿಡ್ ಸಂದರ್ಭದಲ್ಲಿಯೂ ಜೀವನದ ಹಂಗು ತೊರೆದು ಅನೇಕ ಮಂದಿಗೆ ಚಿಕಿತ್ಸೆ ನೀಡಿ ಮಾದರಿಯಾಗಿದ್ದರು. ಅವರು ಸುರತ್ಕಲ್‍ನಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಆರಂಭಿಸಿದ್ದ ಸುಸಜ್ಜಿತ ಪುಷ್ಪಾ ಕ್ಲಿನಿಕ್ ಮತ್ತು ಡಯಾಗ್ನೋಸಿಸ್ ಸೆಂಟರ್ ಆರಂಭಿಸಿ ಸುಮಾರು 5 ದಶಕಗಳಿಂದ ಅದನ್ನು ನಡೆಸುತ್ತಿದ್ದರು. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.ಇಂದು ಸಂಜೆ 4 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.