ಅ.18ರಂದು ಸುರತ್ಕಲ್ ಟೋಲ್ ತೆರವಿಗೆ ತೀರ್ಮಾನಿಸಿದ ಪ್ರತಿಭಟನಾಕಾರರು
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು. ಧರಣಿ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿದ್ರು. ಇದೇ ವೇಳೆ ಪ್ರತಿಭಟನಾ ನಿರತರು ಟೋಲ್ ಗೇಟ್ ತೆರವು ದಿನಾಂಕ ಘೋಷಣೆ ಮಾಡುವಂತೆ ಅವರನ್ನು ಆಗ್ರಹಿಸಿದರು. ಪೇಪರ್ ವರ್ಕ್ ನಡೆಯುತ್ತಿದೆ. 20 ದಿನಗಳಿಂದ ಗರಿಷ್ಟ ಒಂದು ತಿಂಗಳಲ್ಲಿ ಟೋಲ್ ತೆರವು ಆಗುತ್ತದೆ ಎಂದರು. ಆದರೆ ನಿರ್ಧಿಷ್ಟ ದಿನಾಕ ಘೋಷಿಸಲು ಹಿಂಜರಿದರು. ಹೋರಾಟ ಸಮಿತಿಯ ಪರವಾಗಿ ಮುನೀರ್ ಕಾಟಿಪಳ್ಳ “ನೀವು ದಿನಾಂಕ ಪ್ರಕಟಿಸಲು ಸಿದ್ದ ಇಲ್ಲ.
ಆದರೆ ತಿಂಗಳ ಒಳಗಡೆ ಟೋಲ್ ಖಂಡಿತಾ ಟೋಲ್ ತೆರವು ಗೊಳ್ಳುತ್ತದೆ ಎಂದು ಭರವಸೆ ನೀಡುತ್ತುದ್ದೀರಿ. ಆದರೆ ಭರವಸೆಯನ್ನು ನಾವು ನಂಬುವುದಿಲ್ಲ. ನೀವು ದಿನಾಂಕ ಘೋಷಿಸದೇ ಇರುವುದರಿಂದ ಟೋಲ್ಗೇಟ್ ತೆರವಿಗೆ ಹೋರಾಟ ಸಮಿತಿ ನಿಮ್ಮ ಸಮ್ಮುಖ ಹೋರಾಟ ಸಮಿತಿ ದಿನಾಂಕ ಘೋಷಿಸುತ್ತಿದೆ. ಅಕ್ಟೋಬರ್ 18 ರಂದು ಟೋಲ್ ತೆರವಿನ ನೇರ ಕಾರ್ಯಾಚರಣೆಗೆ ಇಂದು ಕರೆ ನೀಡುತ್ತಿದ್ದೇವೆ. ಅಂದು ನೂರಾರು ಸಂಘಟನೆಗಳ ಸಾವಿರಾರು ಜನರು ಅಕ್ರಮ ಟೋಲ್ ಗೇಟ್ ತೆರವು ನಡೆಸಿಯೇ ತೀರುತ್ತಾರೆ ಎಂದು ಘೋಷಿಸಿದರು.