ಸುರತ್ಕಲ್ ನ ತಡಂಬೈಲ್‌ನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರು

ಸುರತ್ಕಲ್ ತಡಂಬೈಲ್‌ನಲ್ಲಿ ರವಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಉಡುಪಿ ಕಡೆಯಿಂದ ಕಾರಿನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇದ್ದರು ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಸಮೀಪದ ವೆಂಕಟರಮಣ ರಾವ್ ಅವರ ಮಾಲಕತ್ವದ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಕಟ್ಟಡದ ಶೆಟರ್,ಮೇಲ್ಛಾವಣಿ ಹಾನಿಗೊಂಡಿದ್ದು ಎರಡು ಲಕ್ಷ ರೂ. ನಷ್ಟವಾಗಿದೆ.ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಏರ್ ಬಲೂನ್ ಇದ್ದುದರಿಂದ ಹೆಚ್ವಿನ ಜೀವ ಹಾನಿ ಆಗಿಲ್ಲ.ಮೂವರಿಗೂ ಗಾಯಗಳಾಗಿದ್ದು, ಇನ್ನೊಂದು ಕಾರಿನಲ್ಲಿದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.