ತಿದ್ದುಪಡಿ ಮಸೂದೆ ಪಾಸು ಮಾಡಿಕೊಳ್ಳಲು ಕಸರತ್ತು :ಅಮಾನತು ಮೂಲಕ ಮೂಕವಾದ ಸಂಸತ್ತು
ಸಂಸತ್ತಿನಿಂದ 146 ಸಂಸದರನ್ನು ಅಮಾನತು ಮಾಡುವ ಮೂಲಕ ಹಿಂದೆ ಯಾವ ಸರಕಾರವೂ ಮಾಡದ ಸಾಧನೆಯನ್ನು ಒಕ್ಕೂಟ ಸರಕಾರ ಮಾಡಿದೆ.
ದೊಡ್ಡ ಮೂರ್ತಿ, ದೊಡ್ಡ ರಸ್ತೆ, ದೊಡ್ಡ ಸುರಂಗ, ಹೆಚ್ಚು ಮಸೂದೆ, ಹೊರಗೆ ದೊಡ್ಡ ಮತ್ತು ಹೆಚ್ಚು ಮಾತು. ಸಂಸತ್ತಿನೊಳಗೆ ಬಾಯಿಗೆ ಬೀಗ. ಒಕ್ಕೂಟ ಸರಕಾರದ ಗಿನ್ನೆಸ್ ದಾಖಲೆ ತಿದ್ದುಪಡಿ ಮಸೂದೆಗಳ ಸಂಖ್ಯೆಗೆ ಮಾತ್ರ ಸಂಬಂಧಿಸಿಲ್ಲ. ಪ್ರತಿಪಕ್ಷಗಳನ್ನು ಹೊರಗಿಟ್ಟು ಅವನ್ನು ಪಾಸು ಮಾಡಿಸಿಕೊಳ್ಳುವುದಕ್ಕೂ ಸಂದಿದೆ.
ಹಿಂದೆ ಈ ಸರಕಾರ ಹಲವು ಬಾರಿ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆದ ಸಂದರ್ಭ ನೋಡಿ ಮಸೂದೆ ಪಾಸ್ ಮಾಡಿಕೊಂಡಿದೆ.
ಈ ಬಾರಿ ಪ್ರತಿಪಕ್ಷಗಳವರು ಹೊರ ನಡೆದಿಲ್ಲ. ಒಳಗಿದ್ದು ಪ್ರಧಾನಿ ಮತ್ತು ಒಳಾಡಳಿತ ಮಂತ್ರಿಗಳಿಗೆ ಬಾಯಿ ಬಿಡಲು ಒತ್ತಾಯಿಸಿದ್ದಾರೆ.
ಹಾಗಾಗಿ ದಾಖಲೆ ಸಂಸದರನ್ನು ಅಮಾನತು ಮಾಡಿ ಒಕ್ಕೂಟ ಸರಕಾರವು ತಿದ್ದುಪಡಿ ಮಸೂದೆಗಳನ್ನು ಪಾಸು ಮಾಡಿಕೊಂಡಿದೆ. ಹದಿನೆಂಟು ಮಸೂದೆಗಳು ಚರ್ಚೆ ಇಲ್ಲದೆ ಪಾಸಾದವು.