ಆರೋಪಿ ಬ್ರಿಜ್ ಭೂಷಣ್‍ರ ಆಪ್ತ ಸಂಜಯ್ ಸಿಂಗ್ : ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ
ಡಬ್ಲ್ಯುಎಫ್‍ಐ- ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಈಗ ಹೊರ ಹೋಗುವ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್‍ರ ಆಪ್ತ, ಸಂಘ ಪರಿವಾರದ ಸಂಜಯ್ ಸಿಂಗ್ ಆಯ್ಕೆ ಆದರು.
ಇವರು ಪ್ರಧಾನಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯವರಾಗಿದ್ದು ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಜೊತೆಗೆ ಇದ್ದವರು. ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಡಬ್ಲ್ಯುಎಫ್‍ಐ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲಿತ್ತು. ಉತ್ತರ ಪ್ರದೇಶದ ಕುಸ್ತಿ ಸಂಘದ ಉಪಾಧ್ಯಕ್ಷರಾದ ಸಂಜಯ್ ಸಿಂಗ್ 40 ಮತ ಪಡೆದು ಗೆದ್ದಿರುವುದರಿಂದ ಕುಸ್ತಿ ಒಕ್ಕೂಟವು ತನ್ನ ಚಾಳಿ ಬಿಡುವ ಲಕ್ಷಣ ಹೊಂದಿಲ್ಲ.