ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ತೀರ್ಪುಗಾರರಾಗಿ
ವೀರೇಶ್ ಮಠಪತಿ ಆಯ್ಕೆ
ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವೀರೇಶ್ ಮಠಪತಿ ಅವರು ಅಂತರ್ ರಾಷ್ಟ್ರೀಯ ಟೇಬಲ್ ಟೆನ್ನಿಸ್ ತೀರ್ಪುಗಾರರಾಗಿ ಅಯ್ಕೆಯಾಗಿದ್ದಾರೆ. ಅವರು ಮಾರ್ಚ್ 20ರಿಂದ 27ರ ವರಗೆ ಜಮ್ಮುವಿನಲ್ಲಿ ನಡೆಯಲಿರುವ 84ನೇ ಹಿರಿಯ ರಾಷ್ಟ್ರೀಯ ಮತ್ತು ಅಂತರ್ –ರಾಜ್ಯ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್‍ಗೆ ತೀರ್ಪುಗಾರರಾಗಿ ಆಯ್ಕೆಯಾಗಿರುತ್ತಾರೆ.
ವೀರೇಶ್ ಮಠಪತಿ ಅವರಿಗೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಮತ್ತು ಸಂಸ್ಥೆಯ ಸಹಾಯಕ ಮುಖ್ಯ ವ್ಯವಸ್ಥಾಪಕರಾದ ಶ್ರೀ ರಾಮಕೃಷ್ಣ ಭೋಗ್ಯಂ, ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಬಾಬು, ಶಾಲೆಯ ಪ್ರಾಂಶುಪಾಲರಾದ ವನಜಾ ನಾರಾಯಣ ಸ್ವಾಮಿ, ಮತ್ತು ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.