Home Posts tagged #byndoor

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ – ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ

ಉಡುಪಿ ಜಿಲ್ಲೆಯ ಕೆಲವು ಗ್ರಾಪಂ ಹಾಗೂ ಉಡುಪಿ ಮತ್ತು ಬೈಂದೂರು ಸ್ಥಳೀಯಾಡಳಿತ ವ್ಯಾಪ್ತಿಯ ಕೆಲವು ಕಡೆ ಈ ಬಾರಿ ನೀರಿನ ಸಮಸ್ಯೆ ತಲೆದೋರಿದ್ದು, ಅಲ್ಲಿಗೆ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ

ಶಿರೂರು : ಟೂರಿಸ್ಟ್ ಕಾರಿನಲ್ಲಿ ಮೃತದೇಹ ರವಾನೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದುದ್ದನ್ನು ಶಿರೂರ್ ಟೋಲ್ ಗೇಟ್ ಬಳಿ ಆಂಬ್ಯುಲೆನ್ಸ್ ಚಾಲಕ ತಡೆದು ನಿಲ್ಲಿಸಿದ ಘಟನೆ ನಡೆದಿದೆ.ಸ್ವಿಫ್ಟ್ ಡಿಜೈರ್ ಕಾರಿನ ಢಿಕ್ಕಿಯಲ್ಲಿ ಮೃತದೇಹವನ್ನು ಇರಿಸಿ ರವಾನೆ ಮಾಡುತ್ತಿದ್ದ. ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಆಂಬ್ಯುಲೆನ್ಸ್‌ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ವಾರೀಸುದಾರರು

ಬೈಂದೂರು ಸುರ್ಕುಂದ ವಾರ್ಡ್‍ನಲ್ಲಿ ಬಿರುಸಿನ ಪ್ರಚಾರ

ಬೈಂದೂರು:ರಾಷ್ಟ್ರಭಕ್ತರ ಬಳಗದ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಸುರ್ಕುಂದ ವಾರ್ಡ್ ಬೂತ್ ನಂ.34 ರಲ್ಲಿ ನಿತ್ಯ ಮೊಗವೀರ ಅವರ ಸಾರಥ್ಯದಲ್ಲಿ ವೆಂಕಟೇಶ ಕಲ್ಮಕ್ಕಿ,ಪ್ರಶಾಂತ್ ಮೊಗವೀರ ಹಾಗೂ ಸ್ಥಳೀಯರ ಸಹಕಾರದಲ್ಲಿ ಮಾಜಿ ಮುಖ್ಯ ಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪರವಾಗಿ ಮನೆ ಭೇಟಿ ಮಾಡಿ ಬಿರುಸಿನ ರೀತಿಯಲ್ಲಿ ಮತ ಪ್ರಚಾರವನ್ನು ಮಾಡಲಾಯಿತು.ಕಾರ್ಯಕರ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಪ್ರಚಾರದ ಕಾರ್ಯದಲ್ಲಿ

ಬೈಂದೂರಿನಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ಬೃಹತ್ ಸಮಾವೇಶ

ಬೈಂದೂರು : ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ಎಸ್.ಟಿ ಮೋರ್ಚಾದ ಬೃಹತ್ ಸಮಾವೇಶವು ತೆಗ್ಗರ್ಸೆಯ ಗುಡ್ಡೆಯಂಗಡಿ ಫಾರ್ಮ್ ಹೌಸ್ ನಡೆಯಿತು. ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಅವರು, ಎಸ್‌ಟಿ ಮೋರ್ಚಾದ ಬೃಹತ್ ಸಮಾವೇಶ ಉದ್ಘಾಟಿಸಿ, ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸುವ ಕೆಲಸ ನಿಮ್ಮದು ಎಂದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದ

ಬೈಂದೂರು : ನಾರಿ ಶಕ್ತಿ ಮಹಿಳಾ ಸಮಾವೇಶ

ಬೈಂದೂರು ವಿಧಾನ ಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಾರಿ ಶಕ್ತಿ ಮಹಿಳಾ ಸಮಾವೇಶ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರಕಾರ ಶೇಕಡಾ 33% ಮೀಸಲಾತಿಯನ್ನು ನೀಡಿದೆ. ಯಡಿಯೂರಪ್ಪ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಶೇಕಡಾ 50% ಮೀಸಲಾತಿ ನೀಡುವುದರ ಮೂಲಕ ಮಹಿಳೆಯರ ಪರ

ಬೈಂದೂರು: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಈಶ್ವರಪ್ಪ

ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ. ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ.ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು. ಅವರು ಉಪ್ಪಂದದಲ್ಲಿ ಉಪ್ಪುಂದ ಪರಿಚಯ ಹೋಟೆಲ್ ಸಭಾಭವನದಲ್ಲಿ ನಡೆದ ಈಶ್ವರಪ್ಪ ಬೆಂಬಲಿತ ಕಾರ್ಯಕರ್ತರ

ಪ್ರಚಂಡ ಬಹುಮತದಿಂದ ಬಿ. ವೈ ರಾಘವೇಂದ್ರ ಗೆಲುವು ನಿಶ್ಚಿತ : ಶಾಸಕ ಗುರುರಾಜ್ ಗಂಟಿಹೊಳೆ ವಿಶ್ವಾಸ

ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ. ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ. ಸಂಘರ್ಷದ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಬೈಂದೂರು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಣ್ಣ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು ಒತ್ತಡ

ಹೆಮ್ಮುಂಜೆ ಸ.ಹಿ.ಪ್ರಾ.ಶಾಲೆಗೆ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿ ಪರಿಕರಗಳ ಕೊಡುಗೆ

ಬೈಂದೂರು: ಹೆಮ್ಮುಂಜೆ ಸ, ಹಿ, ಪ್ರಾ, ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಪರಿಕರಗಳನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ನೀಡಲಾಯಿತು. ವಿದ್ಯಾರ್ಥಿ ಪರಿಕರಗಳನ್ನು ನೀಡಿ ಮಾತನಾಡಿದ ಅಧ್ಯಕ್ಷರಾದ ರಾಘವೇಂದ್ರ ಸಿ ನಾವುಡರು ಶಾಲೆಗೆ ಇನ್ನೂ ಹೆಚ್ಚಿನ ಸವಲತ್ತನ್ನು ಒದಗಿಸುವ ಮೂಲಕ ಮಕ್ಕಳ ಬರುವಿಕೆ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸುತ್ತೇನೆ ಎಂದರು. ಶಾಲಾ ಸ್ಥಾಪಕ ಕುಟುಂಬದ ಸದಸ್ಯರು, ಹಿರಿಯ ವಿದ್ಯಾರ್ಥಿಯು ಹಾಗೂ ಅತ್ಯುತ್ತಮ ಜಿಲ್ಲಾ ಶಿಕ್ಷಕ

ಬೈಂದೂರು: ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಮನವಿ

ಸಂಸದ ಬಿ.ವೈ ರಾಘವೇಂದ್ರ ಅವರು ಇಂದು ದೆಹಲಿಯಲ್ಲಿ  ಕೇಂದ್ರ ಪ್ರವಾಸೋದ್ಯಮ ಸಚಿವರಾದ ಕಿಶನ್ ರೆಡ್ಡಿ ಗಂಗಾಪುರಂ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿರುವ ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಮನವಿ ಸಲ್ಲಿಸಿದರು.  ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಕೊಡಚಾದ್ರಿ, ಸೋಮೇಶ್ವರ ಬೀಚ್, ತ್ರಾಸಿ-ಮರವಂತೆಗಳಂತಹ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿಂದ ಶ್ರೀಮಂತವಾಗಿರುವ ಕ್ಷೇತ್ರ,

ಶಿರೂರು: ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ

ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ದೋಣಿಯಲ್ಲಿ ೩ ಜನ ಮೀನುಗಾರರಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ದೋಣಿಯಲ್ಲಿದ್ದ ಅಬ್ಸುಲ್ ಸತ್ತರ್ ಹಡವಿನಕೋಣೆ, ಶಿರೂರು ಮಿಸ್ಬಾ