ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ಬೈರ ಕುರಲ್ ಖ್ಯಾತಿಯ “ಭಾಷಾ” ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿ ಅವರ ಪುತ್ರ ವಸಂತ ಶೆಟ್ಟಿ(52) ಕಳೆದ ಮೂರು ವರುಷಗಳಿಂದ ಅನಾರೋಗ್ಯವನ್ನು
ಮೂಡುಬಿದಿರೆ:ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಶಾರದಾದಾಸ್ ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷ ಕಲ್ಲಬೆಟ್ಟು ಗ್ರಾಮದ ಸಾಗಿನಬೆಟ್ಟು ಕೆ. ಸುಂದರ ಹೆಗ್ಡೆ (87) ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕೃಷಿಕರಾಗಿದ್ದ ಅವರು ಹೌದಾಲಿನಲ್ಲಿ ಹಲವು ವರ್ಷ ದಿನಸಿ ವ್ಯಾಪಾರ ಮಾಡಿಕೊಂಡು ಬಂದಿದ್ದರು. ಐತಿಹಾಸಿಕ ಹಿನ್ನೆಲೆಯ ಕೊಣಾಜೆಕಲ್ಲು ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ವರ್ಷ ದುಡಿದಿದ್ದರು. ನಡ್ಯೋಡಿ ಸರಕಾರಿ ಪ್ರಾಥಮಿಕ
ಉಳ್ಳಾಲ: ಸಿಪಿಐಎಂ ಪಕ್ಷದ ಹಿರಿಯ ಮುಖಂಡ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ( 68) ಹೃದಯಾಘಾತದಿಂದ ಇಂದು ನಿಧನ ಹೊಂದಿದರು. ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿ ವಾಪಸ್ಸಾಗುವಾಗ ಹೃದಯಾಘಾತ ಉಂಟಾಗಿದೆ.ಇವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವಲಯ ಸಮಿತಿ ಸದಸ್ಯ, ಕೆಪಿಆರ್ ಎಸ್ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು
ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನರಾದರು. ಮಂಜೇಶ್ವರ ಪಂಚಾಯತ್‌ನ ವತಿಯಿಂದ ನಡೆದ ಶುಚಿತ್ವ ಮಿಷನ್‌ನ ಸಭೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿರುವ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಂಜೇಶ್ವರದ ರಾಜಕೀಯ ವಲಯದಲ್ಲಿ ಬಿ.ವಿ.ರಾಜನ್ ವಿಶೇಷ ವ್ಯಕ್ತಿತ್ವದೊಂದಿಗೆ ಗುರುತಿಸಿದವರು. ಈ ಪ್ರದೇಶದಲ್ಲಿ ಸಿಪಿಐ ಚಳುವಳಿಯಲ್ಲಿ ದಿ.ಕಾಮ್ರೇಡ್ ಡಾ.ಸುಬ್ಬರಾವ್ ರವರ ಕಾಲಘಟ್ಟದಿಂದಲೇ ಮುಂಚೂಣಿಯಲ್ಲಿ
ಮೂಲ್ಕಿಯ ಹಳೆಯಂಗಡಿಯ ಬಳಿ ರಕ್ತೇಶ್ವರ ಕೋಲ ಕಟ್ಟುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ದೈವನರ್ತಕ ಸಾವನ್ನಪ್ಪಿದ ಘಟನೆ ನಡೆದಿದೆ. ದೈವನರ್ತಕ ಪದವಿನಂಗಡಿಯ ನಿವಾಸಿಯಾಗಿದ್ದು, ಅಶೋಕ್ ಬಂಗೇರಾ ಎಂದು ತಿಳಿದುಬಂದಿದೆ. ಪದವಿನಂಗಡಿಯ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾತ್ರವಲ್ಲದೆ ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.
ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಪುತ್ತೂರು ನೆಹರೂನಗರದ ದಿ. ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29) ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದರು.ಲಿವರ್ ಸಮಸ್ಯೆಯಿಂದಾಗಿ ಐಶ್ವರ್ಯ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಿವರ್ ಬದಲಾವಣೆಯಿಂದ ಮಾತ್ರ ಐಶ್ವರ್ಯಳ ಜೀವ ಉಳಿಸಲು ಸಾಧ್ಯ ಎಂದು
ಉಳ್ಳಾಲ: ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ಬಾಗಲಕೋಟೆ ನಿವಾಸಿ ಸುರೇಶ್ (30) ಮೃತರು. ಕಲ್ಲಾಪು ಸಲಫಿ ಮಸೀದಿ ಸಮೀಪ ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬಾಡಿಗೆಯಲ್ಲಿದ್ದರು. ಮಂಗಳೂರಿನ ಬುಲೆಟ್ ಷೋರೂಮಿನಲ್ಲಿ ಕೆಲಸಕ್ಕಿದ್ದ ಸುರೇಶ್, ಬಳಿಕ ಪಂಪ್ವೆಲ್ ಸಮೀಪ ಗ್ಯಾರೇಜ್ ನಡೆಸುತ್ತಿದ್ದರು. ನಿನ್ನೆ ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ
ಉಳ್ಳಾಲ : ಕೊಣಾಜೆ ಮುಯರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿನ ಮನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ಕುಟುಂಬ ಸಮೇತರಾಗಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು. ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ
ರೂಪೇಶ್ ಪೂಜಾರಿ 3 ದಿನಗಳ ಹಿಂದೆ ಹೊಟ್ಟೆನೋವಿನಿಂದ ಮಂಗಳೂರಿನ ವೆನ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದಿತ್ಯವಾರ ಅವರು ತೀರಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವೈದರು ಚಿಕಿಸ್ತೆ ನೀಡಿಲ್ಲ ನಿರ್ಲಕ್ಷ್ಯ ತೋರಿದರು ಎಂದು ಭಜರಂಗದಳದ ಕಾರ್ಯಕರ್ತರು ಆರೋಪಮಾಡಿದರು. ಅಲ್ಲದೆ ಬಜರಂಗದಳ ಮತ್ತು ವೆನ್ಲೋಕ್ ವೈದರ ನಡುವೆ ಮಾತಿನಚಕಮಕಿ ನಡೆಯಿತ್ತು. ವೈದ ಒರುವರು ಉಡಾಫೆಯ ಮಾತುಗಳನ್ನು ಆಡಿದಾಗ ಕಾರ್ಯಕರ್ತರು ವೈದನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೈಂದೂರು : ಕೊಲ್ಲೂರಿಗೆ ಯಾತ್ರಾರ್ಥಿಗಳಾಗಿ ಬಂದು, ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲುಜಾರಿ ನದಿಪಾಲಾದ ಮಹಿಳೆಯ ಶವ ಇಂದು ಭಾನುವಾರ ಮಧ್ಯಾನ್ಹ ನಡೆದಿದೆ. ಘಟನಾ ಸ್ಥಳದಿಂದ ಮೂರೂವರೆ ಕಿ. ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮುಳುಗು ತಜ್ಞ , ಸಾಹಸಿಗ ಈಶ್ವರ್ ಮಲ್ಪೆ ಅವರು ಸತತ ಪರಿಶ್ರಮದಿಂದ ಹರಿವ ನೀರಿನ ಸೆಳೆತವನ್ನೂ ಜಯಿಸಿ, ಸಾಹಸದಿಂದ ಶವ ಪತ್ತೆಹಚ್ಚಿದ್ದಾರೆ. ಹೌದು ಆದರೆ, ಈಶ್ವರ್ ಅವರು ತಮ್ಮ ಸಂಗಡಿಗರೊಂದಿಗೆ ಛಲ