Home Posts tagged #mangaluru (Page 31)

ಮಂಗಳೂರು ಪೊಲೀಸರಿಂದ 112 ಬಗ್ಗೆ ಜಾಗೃತಿ ಅಭಿಯಾನ

ಮಂಗಳೂರು ನಗರ ಪೊಲೀಸರು ಆಯೋಜಿಸಿರುವ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಮಹಿಳೆಯ ರಲ್ಲಿ ಧೈರ್ಯ ತುಂಬುವ ಪ್ರಕ್ರಿಯೆಯಾಗಿದೆ ಎಂದು ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ಎಂ.ಆರ್. ಪೂವಮ್ಮ ಅಭಿಪ್ರಾಯಿಸಿದರು. ಮಂಗಳೂರು ನಗರ ಪೊಲೀಸ್ ಅಧಿಕಾರಿಗಳಿಂದ ‘ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ’ 112 ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು

ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್‍ನಿಂದ ಜು.26ರಂದು ಕಾರ್ಗಿಲ್ ವಿಜಯೋತ್ಸವ

ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವವನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹೇಳಿದರು. ಅವರು ಸುರತ್ಕಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಇಡ್ಯಾ ಶ್ರೀ ಮಹಾಲಿಂಗೇಶ್ವರದ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಅನುವಂಶಿಕ ಆಡಳಿತ ಮುಕ್ತೇಸರರಾದ ವೇದಮೂರ್ತಿ ಐ ರಮಾನಂದ ಭಟ್ ಅವರು ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಕೊಡುವುದಕ್ಕೆ ಆಗಿಲ್ಲ: ಡಿ.ಕೆ. ಶಿವಕುಮಾರ್

ಮಂಗಳೂರು: ಈ ರಾಜ್ಯದಲ್ಲಿ ಒಳ್ಳೆ ಸರ್ಕಾರ ಕೊಡುವುದಕ್ಕೆ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ರು ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಈ ಸರ್ಕಾರಕ್ಕೆ ಗೌರವ ಎಲ್ಲಿದೆ. ಅವರಲ್ಲಿ ಎಷ್ಟೇ ಮುಖ್ಯಮಂತ್ರಿ ಚೇಂಜ್ ಆದ್ರು ಅವರ ಪಕ್ಷದ ಬಗ್ಗೆ ಮಾತಾಡಲ್ಲ ಎಂದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಂಗಳೂರಿನಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು. ಯಾವ ಅಧಿಕಾರಿಗಳು ಅವರ ಮಾತು

ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ: ಸಿದ್ದರಾಮಯ್ಯ

ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸವಾಲು ಹಾಕಿದ್ದಾರೆ. ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಕಾಂಗ್ರೆಸ್ ದಲಿತ ಸಿಎಂ ಅಭ್ಯರ್ಥಿಯನ್ನು

ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ: ಅಂತರಾಷ್ಟ್ರೀಯ ಮಾನ್ಯತೆಗೆ ದಿಟ್ಟ ಹೆಜ್ಜೆ: ದಯಾನಂದ ಕತ್ತಲ್‌ ಸಾರ್‌

ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸಚಿವ ಅರವಿಂದ ಲಿಂಬಾವಳಿ ಸೂಚಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಪಡೆಯುವಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಅವರು ಮಂಗಳೂರಿನ ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಪ್ರಕ್ರಿಯೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ

ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಎಂ.ಬಿ ಪಾಟೀಲ್

ಕಾಂಗ್ರೆಸ್ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ಗಾಯಗೊಂಡು ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಬುಧವಾರದಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯವನ್ನು ವಿಚಾರಿಸಿದರು. ತದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಕರ್ ಅವರಿಗೆ ಸದ್ಯ ಪರಿಣಿತ ತಜ್ಞ ವೈದ್ಯರ ತಂಡ ಚಿಕಿತ್ಸೆ ಕೊಡ್ತಾ ಇದ್ದಾರೆ.ಮಣಿಪಾಲ್ ವೈದ್ಯರು

ಮಳೆ ನೀರಿಗೆ ಸಮರ್ಪಕ ವ್ಯವಸ್ಥೆವಿಲ್ಲದೇ ಕೃಷಿಗೆ ತೊಂದರೆ: ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಅರ್ಕುಳಬೈಲ್‌ನಿಂದ ಹರಿದು ಹೋಗುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುವುದನ್ನ ಮನಗಂಡ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ನೀರು ಹರಿದು ಹೋಗುವ ಮೋರಿಗಳು ಮಣ್ಣಿನಿಂದ ತುಂಬಿದ ಕಾರಣ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೃಷಿಗೆ ತೊಂದರೆ ಆಗಿರುವುದರಿಂದ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟರು. ಇನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ

ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ದೇಶದಾದ್ಯಂತ ಇಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಲಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹಸ್ತಲಾಘವ, ಆಲಿಂಗನ ಇಲ್ಲದೇ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಕಡಲ್ಕೋರೆತ ತಡೆಗಟ್ಟಲು ಜಿಲ್ಲಾಡಳಿತ ಕಾಳಜಿ ವಹಿಸುತ್ತಿಲ್ಲ : ಯು.ಟಿ.ಖಾದರ್

ಜಿಲ್ಲೆಯಲ್ಲಿ ಕಡಲ್ಕೋರೆತ ತಡೆಗಟ್ಟಲು ಜಿಲ್ಲಾಡಳಿತ ಯಾವುದೇ ರೀತಿಯಲ್ಲೂ ಕಾಳಜಿ ವಹಿಸಿದಂತೆ ತೋರುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.ಈ ಕುರಿತು ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಉಳ್ಳಾಲ, ಸೋಮೇಶ್ವರ್ ಬೀಚ್ ನಲ್ಲಿ ರಸ್ತೆಗಳು ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲಾವೂ ಸಮುದ್ರ ಪಾಲಾಗುತ್ತಿದೆ. ಶಾಶ್ವತ ಪರಿಹಾರದ ಬಗ್ಗೆ

ಯಾರಿಗೂ ಹೇಳ್ಬೇಡಿ ಆಡಿಯೋ ನಕಲಿ ಅಥವಾ ಅಸಲಿಯೇ ಸಿಎಂ ಸ್ಪಷ್ಟ ಪಡಿಸಲಿ: ಯು.ಟಿ.ಖಾದರ್

 ಬಿಜೆಪಿ ರಾಜ್ಯಾಧ್ಯಕ್ಷರ ಆಡಿಯೋ ನಕಲಿ ಅಥವಾ ಅಸಲಿಯೇ ಎಂದು ಮುಖ್ಯ ಮಂತ್ರಿ ಸ್ಪಷ್ಟ ಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ರು. ಹಾಲಿ ಸಿ.ಎಂ ಯಡಿಯೂರಪ್ಪ ಇನ್ನೂ ಮುಂದುವರಿಯುತ್ತಾರೋ ಇಲ್ಲವೋ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ತಿಳಿಸಲಿ ಯು.ಟಿ.ಖಾದರ್ ಅವರು ಹೇಳಿದರು. ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ, ಎಲ್ಲಾರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕೆಲಸ