Home Posts tagged #moodabidre (Page 3)

ಮೂಡುಬಿದಿರೆ: ದ.ಕ. ಜಿಲ್ಲಾಮಟ್ಟದ ಕ್ರೀಡಾಕೂಟ, ಕಡಬದ ಚರಿಷ್ಮಾ ಕೂಟ ದಾಖಲೆ

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಪುತ್ತೂರು ತಾಲೂಕಿನ ಕಡಬ ಸ.ಪ.ಪೂ.ಕಾಲೇಜಿನ ಚರಿಷ್ಮಾ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ

ಮೂಡುಬಿದಿರೆ: ಅಗ್ನಿಶಾಮಕ ಠಾಣೆಯಲ್ಲಿ ಆಯುಧ ಪೂಜೆ

ಮೂಡುಬಿದಿರೆ ಒಂಟಿಕಟ್ಟೆ ಕಡಲಕೆರೆ ಬಳಿ ಇರುವ ತಾಲೂಕು ಅಗ್ನಿಶಾಮಕ ಠಾಷೆಯಲ್ಲಿ ಸೋಮವಾರ ಆಯುಧ ಪೂಜೆ ಮತ್ತು ವಾಹನ‌ಪೂಜೆ ನಡೆಯಿತು.ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪ್ರಸಾದ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಅಗ್ನಿಶಾಮಕ ಠಾಣಾಧಿಕಾರಿ ಮತ್ತು ಸಿಬಂಧಿ ವರ್ಗ ಹಾಗೂ ಊರವರು ಈ ಸಂದರ್ಭದಲ್ಲಿದ್ದರು.

ಮೂಡುಬಿದಿರೆ:ಮುಖ್ಯಮಂತ್ರಿ ಕಪ್ ವೇಟ್‌ಲಿಫ್ಟಿಂಗ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್‌ಲಿಫ್ಟಿಂಗ್ ಚಾಂಪಿಯಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಮತ್ತು ಮಹಿಳಾ ತಂಡಗಳು ಸಮಗ್ರ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗದಲ್ಲಿ ಒಟ್ಟು 6 ಚಿನ್ನ 3 ಬೆಳ್ಳಿ, ಒಂದು ಕಂಚಿನ ಪದಕ ಪಡೆದರೆ, ಮಹಿಳಾ ವಿಭಾಗದಲ್ಲಿ ಒಟ್ಟು 5 ಚಿನ್ನ, 5 ಬೆಳ್ಳಿ ಪಡೆದು ತಂಡ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್‌ನ ಉಷಾ ಎಸ್.ಆರ್ 87 ಕೆ.ಜಿ ದೇಹತೂಕ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಭಾಜನರಾದರು. ಕ್ರೀಡಾಪಟುಗಳ

ಮೂಡುಬಿದಿರೆ: ಆಟೋ ರಿಕ್ಷಾ-ಬಸ್ ಮುಖಾಮುಖಿ ಡಿಕ್ಕಿ : ವೃದ್ಧೆ ಸಾವು

ಮೂಡುಬಿದಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಸು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಮೃತಪಟ್ಟ ಸಂಪಿಗೆಯಲ್ಲಿ ನಡೆದಿದೆ. ಸುರತ್ಕಲ್ ನ ಆಲಿಯಮ್ಮ (76) ಮೃತಪಟ್ಟ ವೃದ್ಧೆ. ಮೂಡುಬಿದಿರೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುರತ್ಕಲ್‌ನಿಂದ ಬೀಪಾತಿಮ್ಮ, ಆಯೀಷಾ ಹಾಗೂ ಆಲಿಯಮ್ಮ ಎಂಬವರು ಬರುತ್ತಿದ್ದ ಸಂದರ್ಭದಲ್ಲಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಸಂಪಿಗೆಯಲ್ಲಿ ಮೂಡುಬಿದಿರೆಯಿಂದ

ಮೂಡುಬಿದಿರೆ: ಗಾಂಜಾ ಮಾರಾಟ, ಮೂವರು ಪೊಲೀಸರ ವಶಕ್ಕೆ

ಮೂಡುಬಿದಿರೆ: ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ವಶಕ್ಕೆ ಪಡೆದುಕೊಂಡಿದೆ. ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್( 22 ವ), ಫರ್ಹಾನ್ ಖಾನ್ (18ವ) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) ಬಂಧಿತರು. ಇವರು ಮೂವರು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದು ಖಚಿತ

ಮೂಡುಬಿದಿರೆ: ನೀರುಡೆ ನಿವಾಸಿ ಓಲ್ವಿನ್ ಪಿಂಟೋ ನಾಪತ್ತೆ

ಮೂಡುಬಿದಿರೆ: ತಾಲೂಕಿನ ನಿಡ್ಡೋಡಿ ಗ್ರಾ. ಪಂ ವ್ಯಾಪ್ತಿಯ ನೀರುಡೆ ನಿವಾಸಿ ಓಲ್ವಿನ್ ಪಿಂಟೋ(59) ಅವರು ಸೆ.8ರಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 3 ವರ್ಷಗಳ ಹಿಂದೆ ಮಂಗಳೂರು ತಲಪಾಡಿಯಲ್ಲಿ ಹಾಸ್ಟೇಲ್ ಒಂದರಲ್ಲಿ ಕೆಲಸ ಮಾಡುಕೊಂಡಿದ್ದವರು, ಇತ್ತೀಜೆಗೆ ಮನೆಗೆ ಬಂದು ಕೃಷಿ ಕೆಲಸ ಮಾಡುತ್ತಿದ್ದರು. ಸೆ.8 ರಂದು ಸಂಜೆ 4.30 ಕ್ಕೆ ಮನೆಯಲ್ಲಿ ತನ್ನ ಮೊಬೈಲ್ ಬಿಟ್ಟು ಮನೆಯಿಂದ ಹೊರಗೆ ಹೋದವರು ಮತ್ತೆ ಮರಳಿ ಮನೆಗೆ ಬಾರದೇ

ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಬೆಳುವಾಯಿ ಬರಕಲ ಗುತ್ತು ಮನೆಯ ರಾಮಣ್ಣ ಎಂಬವರ ಪುತ್ರ ಸಂತೋಷ್ ಪೂಜಾರಿ (42) ತಮ್ಮ ಪಕ್ಕದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಗೆ ಆಧಾರ ಸ್ತಂಭವಾಗಿದ್ದ ಸಂತೋಷ್ ಅವರು ಮೂಡುಬಿದಿರೆಯಲ್ಲಿ ಎಲೆಕ್ಟ್ರೋ ವಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತ್ನಿ ಮತ್ತು ಸಣ್ಣ ವಯಸ್ಸಿನ ಇಬ್ಬರು ಅವಳಿ ಪುತ್ರಿಯರಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ

ಮೂಡುಬಿದಿರೆ: ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ

ಮೂಡುಬಿದಿರೆ: ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯವಾಗಿ ಬೇಕು. ಪಿಡಿಗಳು ಅಗತ್ಯವಾಗಿ ಬೇಕು. ಸಮಸ್ಯೆಗಳು ಎಲ್ಲಾ ಕಡೆಗಳಲ್ಲೂ ಇರುತ್ತವೆ ಆದರೆ ಶಿಕ್ಷಕರು ಶಾಲೆಗಳಿಗೆ ಬರುವಾಗ ಟೆನ್ಷನ್ ನಲ್ಲಿ ಬರಬೇಡಿ. ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದರೆ ದೈಹಿಕ ಶಿಕ್ಷಕರ ಒತ್ತಡ ಕಡಿಮೆಯಾಗಲಿದೆ. ಇದರಿಂದ ಪರೋಕ್ಷವಾಗಿ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿದಂತ್ತಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಅವರು ರಾಜ್ಯ ದೈಹಿಕ ಶಿಕ್ಷಣ

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂಚಾಯತ್: ಸಿಪಿಐಎಂ ಬೆಂಬಲಿತೆ ರಾಧ ಅಧ್ಯಕ್ಷೆ, ಬಿಜೆಪಿಯ ಬೆಂಬಲಿತ ದಯಾನಂದ ಉಪಾಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂಚಾಯತ್ ನಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿ ಸದಸ್ಯನೋರ್ವ ಅಡ್ಡ ಮತದಾನದ ಮಾಡಿದ ಪರಿಣಾಮವಾಗಿ ಸಿಪಿಐಎಂ ಬೆಂಬಲಿತ ಸದಸ್ಯೆ ರಾಧಾ ಅವರು ಅಧ್ಯಕ್ಷೆಯಾಗಿ ಹಾಗೂ 11 ಜನ ಸದಸ್ಯರ ಬೆಂಬಲವಿರುವ ಬಿಜೆಪಿಯ ದಯಾನಂದ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಿಪಿಐಎಂ ಬೆಂಬಲಿತೆ ರಾಧಾ ಅವರು ಪುತ್ತಿಗೆ ಪಂಚಾಯತ್ ನಲ್ಲಿ ಸಿಪಿಐಎಂನ ಓರ್ವರೇ ಸದಸ್ಯರಾಗಿದ್ದು, 11

ಮೂಡುಬಿದಿರೆ : ಕನ್ನಡ ಭಾಷಾ ಬೋಧಕರಿಗೆ ಕಾರ್ಯಾಗಾರ

ಶಿಕ್ಷಕರಿಗೆ ಕನ್ನಡ ಸಾಹಿತ್ಯ ಚರಿತ್ರೆ, ಭಾರತದ ಎಲ್ಲ ಮತಧರ್ಮಗಳು, ಸಾಹಿತ್ಯ, ಸಂಗೀತಾದಿ ಸಾಂಸ್ಕೃತಿಕ ಪರಿಚಯ ಒಂದಿಷ್ಟು ಇರಬೇಕಾಗಿದೆ; ಶರೀರ ಭಾಷೆಯನ್ನೂ ಬೋಧನೆಯ ಮಾಧ್ಯಮವಾಗಿ ಬಳಸುವ, ನೋಟ್ಸ್ ಕೊಡದೆ ಸ್ವಂತಿಕೆ ಬೆಳೆಸುವ, ಪಾಠ ಬಿಟ್ಟು ಅನ್ಯ ಲೇಖನಗಳ ಕಾಪಿ ಬರೆಸುವ, ಉಚ್ಚಾರ ಹೇಳಿಕೊಡುವ, ಪಾಠವನ್ನು ವಿಷಯದ ದೃಷ್ಟಿಗಿಂತಲೂ ಭಾಷೆಯ ದೃಷ್ಟಿಯಿಂದ ನೋಡುವ , ಕಲಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ