ಮೂಡುಬಿದಿರೆ: ದ.ಕ. ಜಿಲ್ಲಾಮಟ್ಟದ ಕ್ರೀಡಾಕೂಟ, ಕಡಬದ ಚರಿಷ್ಮಾ ಕೂಟ ದಾಖಲೆ
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಪುತ್ತೂರು ತಾಲೂಕಿನ ಕಡಬ ಸ.ಪ.ಪೂ.ಕಾಲೇಜಿನ ಚರಿಷ್ಮಾ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ ಅವರು 4:53.9 ಸೆಕುಂಡಿನಲ್ಲಿ ಕ್ರಮಿಸುವ ಮೂಲಕ ಹಾಗೂ 3000 ಓಟದಲ್ಲಿ 10:44.7 ಸೆಕುಂಡಿನಲ್ಲಿ ಗುರಿ ಮುಟ್ಟುವ ಮೂಲಕ ಉಜಿರೆ ಎಸ್ ಡಿ.ಎಂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ದಿವ್ಯಾ ಗೌಡ ಅವರು 2004 ರಲ್ಲಿ ನಿರ್ಮಿಸಿರುವ ಕೂಟ ದಾಖಲೆಯನ್ನು ಮುರಿದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಲೊಕೇಶ್ ಅವರಿಂದ ತರಬೇತಿಯನ್ನು ಪಡೆಯುತ್ತಿರುವ ಚರಿಷ್ಮಾ ಅವರು ಪ್ರತಿದಿನ ಮೂರು ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕೆಂಬುದು ಆಕೆಯ ಕನಸಾಗಿದೆ.