ಮೂಡುಬಿದಿರೆ: ಪ್ರಾಕೃತಿಕ ವಿಕೋಪದಡಿಯಲ್ಲಿ ಹಾನಿಗೊಳಗಾಗಿರುವ ಮೂಡುಬಿದಿರೆ ತಾಲೂಕಿನ ಒಟ್ಟು 16 ಜನ ಸಂತ್ರಸ್ತರಿಗೆ ರೂ 7,10,700ರೂ. ಮೊತ್ತದ ಪರಿಹಾರದ ಚೆಕ್ನ್ನು ಶಾಸಕ ಉಮಾನಾಥ್ ಕೋಟ್ಯಾನ್ ಆಡಳಿತ ಸೌಧದಲ್ಲಿ ವಿತರಿಸಿದರು. ತಾಲೂಕು ತಹಶಿಲ್ದಾರ್ ಸತ್ಯಪ್ಪ ಸಚ್ಚಿದಾನಂದ ಕುಚನೂರು, ಪುರಸಭಾ ಸದಸ್ಯೆ ಸೌಮ್ಯ ಶೆಟ್ಟಿ ಈ ಸಂದರ್ಭದಲ್ಲಿದ್ದರು.
ಮೂಡುಬಿದಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಪಿ.ಟ್ರಸ್ಟ್ (ರಿ), ಮೂಡುಸಿದಿರೆ ಇವುಗಳ ವತಿಯಿಂದ ತಾಲೂಕಿನ ೮೦ ಕೇಂದ್ರಗಳಲ್ಲಿ 7 ದಿನಗಳ ಕಾಲ ಏಕಕಾಲದಲ್ಲಿ ಅನುಭವಿ ಯೋಗ ಶಿಕ್ಷಕರಿಂದ ನಡೆದ ಯೋಗ ಶಿಬಿರ ದಸರಾ ಯೋಗೋತ್ಸವ’ವು ಪಾಲಡ್ಕ, ಬ್ರಹ್ಮಶ್ರೀ ನಾರಾಯಣಗುರು ಜಿಲ್ಲವ ಸಂಘದಲ್ಲಿ ಶನಿವಾರ ಸಮಾಪನಗೊಂಡಿತು.
ಮೂಡುಬಿದಿರೆ: ಇಲ್ಲಿನ ತಾಲೂಕು ತಹಶೀಲ್ದಾರ್ ತಾಲೂಕು ಸತ್ಯಪ್ಪ ಸಚ್ಚಿದಾನಂದ ಕುಚನೂರು ಅವರು ಬೆಳುವಾಯಿ ಗ್ರಾಮ ಪಂಚಾಯತ್ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹೂಡಿದರು. ಪಂಚಾಯತ್ ಅಧ್ಯಕ್ಷೆ ಸುಶೀಲಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಂಚಾಯತ್ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮಾತನಾಡಿ, ಮನೆಗಳ ಬಳಿ ಮರಗಳಿಲ್ಲದಿದ್ದರೂ ಡೀಮ್ಸ್ ಫಾರೆಸ್ಟ್ ಎಂದು ಪಟ್ಟಿಯನ್ನು ಕೊಟ್ಟಿದ್ದಾರೆ, ಇದಲ್ಲದೇ
ಮೂಡುಬಿದಿರೆ: ಒಂಟಿಕಟ್ಟೆಯಲ್ಲಿರುವ ಕಡಲಕೆರೆಗೆ ವಿವಿಧ ಜಾತಿಯ 25,000 ಮೀನಿನ ಮರಿಗಳನ್ನು ಸಮರ್ಪಿಸಲಾಯಿತು.ಶಾಸಕ ಉಮಾನಾಥ ಕೋಟ್ಯಾನ್ ಮೀನಿನ ಮರಿಗಳನ್ನು ಸಮರ್ಪಿಸಿ, ದೋಣಿ ವಿಹಾರಕ್ಕೆ ಚಾಲನೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ ಪ್ರವಾಸಿಗರನ್ನು ಸೆಳೆಯುವ ಕಡಲಕೆರೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಯೋಜನೆಯಿದ್ದು ಈಗಾಗಲೇ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು. ಅರಣ್ಯ ಇಲಾಖೆಯ ಕುಂದಾಪುರ
ಮೂಡುಬಿದಿರೆಯ ವಿಶಾಲನಗರದ ನಿವಾಸಿ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದು ಅವಳನ್ನು ಮೂಡುಬಿದಿರೆ ಅಗ್ನಿಶಾಮಕದಳದ ಸಿಬಂದಿಗಳು ರಕ್ಷಿಸಿದ ಘಟನೆಮೂಡುಬಿದಿರೆ ಪೋಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ್ಯದಲ್ಲಿ ನಡೆದಿದೆ. ತಮಿಳುನಾಡು ಮೂಲದ ವಿಶಾಲ್ ನಗರದ ನಿವಾಸಿ ರಾಬಿತ್ ಎಂಬವರ ಪುತ್ರಿ 22ರ ಹರೆಯದ ನಿವೇತಾ ಬಾವಿಗೆ ಹಾರಿದ ಯುವತಿ. ಈಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗಿನ ವೇಳೆ ಪ್ರಾಂತ್ಯದ
ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಮತ್ತು ದ.ಕ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ನ ಸಾಂಸ್ಕøತಿಕ ಜಾಂಬೂರಿ-2022 ಕಾರ್ಯಕ್ರಮ ಡಿಸೆಂಬರ್ 21 ರಿಂದ 27ರ ವರೆಗೂ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹೇಳಿದರು. ಅವರು ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ
ಮೂಡುಬಿದಿರೆ: ಇಲ್ಲಿನ ಪುರಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಕಾರದಿಂದ ರೂ 1 ಕೋಟಿ ಅನುದಾನ ಬಂದಿದ್ದು ಈ ಕಾಮಗಾರಿಯಲ್ಲಿ ಶೇ. 20ರಷ್ಟು ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಪಕ್ಷೀಯ ಸದಸ್ಯ ಸುರೇಶ್ ಕೋಟ್ಯಾನ್, ಶಂಕ ವ್ಯಕ್ತಪಡಿಸಿ, ಆರೋಪಿಸಿದ ಘಟನೆ ನಡೆದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಆರೋಪಕ್ಕೆ ಸಾಕ್ಷಿ ಸಮೇತ ದಾಖಲೆ ನೀಡಿ ಆಗ ನಾವೂ ಬೆಂಬಲಿಸುತ್ತೇವೆ. ಸುಳ್ಳು ಆರೋಪ ಮಾಡಬೇಡಿ ದಾಖಲೆ ನೀಡುವಂತೆ ಪಟ್ಟು
ಮೂಡುಬಿದಿರೆಯ ತಾಲೂಕು ಆಡಳಿತ ಸೌಧದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಯಿತು. ನಂತರ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ಮಾಧ್ಯಮದವರಿಗೆ ಮಾಹಿತಿ ನೀಡಿ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 8 ದೂರುಗಳು ಸಾರ್ವಜನಿಕರಿಂದ ಬಂದಿದ್ದು, ಆರ್ ಟಿಸಿ ಸಂಬಂಧಪಟ್ಟಂತೆ ಒಂದು ಪ್ರಕರಣವನ್ನು ಮಂಗಳವಾರ ಇತ್ಯರ್ಥ ಮಾಡಲಾಗಿದೆ. ಮೂರು ದೂರುಗಳಿಗೆ ಸೂಕ್ತ ನಮೂನೆ `ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಲಾಗಿದೆ,
ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ವತಿಯಿಂದ ಸಮಾಜ ಮಂದಿರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಲಾಪಗಳೊಂದಿಗೆ ನಡೆಯಲಿರುವ 75ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾನು ಇಂದು ಏನಾಗಿದ್ದೇನೆ ಅದು ಸಾಹಿತ್ಯ ಇರಬಹುದು ಸಾಂಸ್ಕೃತಿಕ ವ್ಯಕ್ತಿ ಇರಬಹುದು ಅಥವಾ ರಾಜಕೀಯದಲ್ಲಿ ಒಂದು ಸ್ಥಾನ ಪಡೆಯಲು ಗಂಗಾಮೂಲ ಯಾವುದೆಂದರೆ ಅದು ಈ ಸಮಾಜ ಮಂದಿರ ಸಭಾ ಮತ್ತು ಸರಸ್ವತಿ
ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ, ದೇಶವಿರೋಧಿ ಆಡಳಿತವನ್ನು ವಿರೋಧಿಸಿ ಮತ್ತು ವಿಪರೀತ ಬೆಲೆ ಏರಿಕೆಯನ್ನು ಖಂಡಿಸಿ ಸಿ.ಪಿ.ಐ.ಎಂನ ತಾಲೂಕು ಸಮಿತಿ ವತಿಯಿಂದ ಸೋಮವಾರ ಆಡಳಿತ ಸೌಧದ ಮುಂಭಾಗದಲ್ಲಿ ಪ್ರಚಾರಾಂದೋಲನ ನಡೆಯಿತು.ಸಿ.ಪಿ.ಐ.ಎಂನ ರಾಜ್ಯ ಸಮಿತಿಯ ಸದಸ್ಯ ಜಿ.ಎನ್ ನಾಗರಾಜ್ ಅವರು ಪ್ರಚಾರಾಂದೋಲನವನ್ನು ಉದ್ದೇಶಿಸಿ ಮಾತನಾಡಿ ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರದಲ್ಲಿ ತನ್ನನ್ನು