ಮೂಡುಬಿದಿರೆಯ ಅಮರಶ್ರೀ ಟಾಕೀಸಿಗೆ ಬೀಗಮುದ್ರೆ
ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಕಾರ್ಯಚರಿಸುತ್ತಾ ಜನರಿಗೆ ಸದಭಿರುಚಿಯ ಸಿನೆಮಾಗಳನ್ನು ನೀಡಿ ರಂಜಿಸುತ್ತಿದ್ದ ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರಕ್ಕೆ ಬೀಗಮುದ್ರೆ ಬಿದ್ದಿದೆ.
ಮಾಜಿ ಸಚಿವ ದಿ.ಕೆ.ಅಮರನಾಥ ಶೆಟ್ಟಿ ಅವರ ಮಗಳು ಅಮರಶ್ರೀ ಅವರ ಹೆಸರಿನಲ್ಲಿರುವ ಈ ಸಿನೆಮಾ ಮಂದಿರವನ್ನು ಕಳೆದ 10 ವರ್ಷಗಳಿಂದ ಕಾರ್ಕಳದ ಜೆರಾಲ್ಡ್ ಕುಟಿನ್ಹಾ ಅವರು ನಡೆಸುತ್ತಿದ್ದರು. ಕಳೆದ 2021ಕ್ಕೆ ಪರವಾನಿಗೆಯ ಅವಧಿಯು ಮುಕ್ತಾಯಗೊಂಡಿರುತ್ತದೆ. ನಂತರ ನವೀಕರಣಗೊಳಿಸದೆ ಅನಧಿಕೃತವಾಗಿ ಕಾರ್ಯಚರಿಸುತ್ತಿದ್ದುದರಿಂದ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಬೀಗಮುದ್ರೆಯನ್ನು ಹಾಕಿದ್ದಾರೆ.