Home Posts tagged #puttur (Page 12)

ಪುತ್ತೂರು ನಗರಸಭಾಧ್ಯಕ್ಷೆ ವಿರುದ್ಧ ಅವಾಚ್ಯ ಪದ ಬಳಕೆ : ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್

ಪುತ್ತೂರು: ಪುತ್ತೂರು ನಗರಸಭಾಧ್ಯಕ್ಷೆ ವಿರುದ್ಧ ಅವಾಚ್ಯ ಪದ ಬಳಸಿದ್ದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತನೆಂಬಂತೆ ಅದ್ದು ಪಡೀಲ್ ಗುರುತಿಸಿಕೊಂಡಿದ್ದು, ಶಾಸಕರು ಇಂತಹವರಿಂದ ದೂರ ಇರುವುದು ಉತ್ತಮ.

ಪುತ್ತೂರು : ಬಿಜೆಪಿ ಶಾಂತಿಗೋಡಿನ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ ಆಯ್ಕೆ

ಪುತ್ತೂರು ಭಾರತೀಯ ಜನತಾ ಪಾರ್ಟಿ ಶಾಂತಿಗೋಡಿನ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಆಯ್ಕೆಯಾದರು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ಓಲಾಡಿಯವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಹಿಳಾ ಮೋರ್ಚಾದ ಸದಸ್ಯೆ ಯಶೋಧ ಗೌಡ ಪ್ರಭಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಬೂತ್ ಸದಸ್ಯರಾಗಿ ಪ್ರವೀಣ್ ಕಲ್ಕಾರ್, ರೂಪ

ಕೆದಂಬಾಡಿ ಗ್ರಾ.ಪಂ ಉಪಚುನಾವಣೆ – ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ರಫೀಕ್ ನಂಜೆ ನಾಮಪತ್ರ ಸಲ್ಲಿಕೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನ.೨೩ ರಂದು ನಡೆಯಲಿದ್ದು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ರಫೀಕ್ ನಂಜೆ ನ.೧೧ರಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಶಿರ್ ಹಾಜಿ ನಂಜೆ, ತಾಜುದ್ದೀನ್ ತಿಂಗಳಾಡಿ, ಅಲ್ತಾಫ್ ಟಿ, ನಾರಾಯಣ, ಲತೀಫ್, ಜುನೈದ್ ಮತ್ತಿತರರು ಉಪಸ್ಥಿತರಿದ್ದರು.

ಕೆದಂಬಾಡಿ ಗ್ರಾಪಂ ಉಪ ಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ ನಾಮಪತ್ರ ಸಲ್ಲಿಕೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ತೆರವಾದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ನ.23 ರಂದು ನಡೆಯಲಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋರವರು ನ.11 ರಂದು ಬೆಳಿಗ್ಗೆ ಸಹಾಯಕ ಚುನಾವಣಾ ಅಧಿಕಾರಿ ಕೃಷ್ಣಪ್ರಸಾದ್‌ರವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಅಜಿತ್ ಜಿ.ಕೆ ಉಪಸ್ಥಿತರಿದ್ದರು. ತಿಂಗಳಾಡಿ ನಿವಾಸಿಯಾಗಿರುವ ಮೆಲ್ವಿನ್ ಮೊಂತೆರೋರವರು ಕುಂಬ್ರದಲ್ಲಿ ಮೊಂತೆರೋ

ಪುತ್ತೂರು : ಬಿಂದು ಪ್ಯಾಕ್ಟರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಭೇಟಿ

ಪುತ್ತೂರಿನ ಪ್ರತಿಷ್ಠಿತ ಬಿಂದು ಫ್ಯಾಕ್ಟರಿಗೆ ನೂತನ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಬಿಜೆಪಿ ಮಹಾ ಸದಸ್ಯತ್ವ ಅಭಿಯಾನದ ಅಂಗವಾಗಿ ಭೇಟಿ ನೀಡಿದರು. ಅವರನ್ನು ಸಂಸ್ಥೆಯ ಪ್ರಮುಖರಾದ ಸುಧನ್ವ ಆಚಾರ್ಯ ಸ್ವಾಗತಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಕುಮಾರ್, ಜಾಗತಿಕ ಮಟ್ಟದಲ್ಲಿ ಬಿಜೆಪಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ರಾಷ್ಟ್ರೀಯತೆಯ ಚಿಂತನೆಯಲ್ಲಿ ಬೀಜಾಂಕುರವಾದ ಪಕ್ಷ ಇಂದು ದೇಶದ ಜನ ಮಾನಸದಲ್ಲಿ ಆಳವಾಗಿ

ಪುತ್ತೂರು : ಮಹಿಳೆಯ ತಲೆಬುರುಡೆ ಮತ್ತು ಎಲುಬುಗಳು ಪತ್ತೆ

ಪುತ್ತೂರು ತಾಲ್ಲೂಕು ಕುಂಬ್ರದ ಒಳಮೊಗ್ರು ಗ್ರಾಮದ ಉರ್ವದಲ್ಲಿ ತಲೆಬುರುಡೆ ಮತ್ತು ಎಲುಬುಗಳು ಪತ್ತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಶಂಕೆ. ಪುತ್ತೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ತಲೆ ಬುರುಡೆ ಹಾಗೂ ಎಲುಬುಗಳು ಒಳಮೊಗ್ರು ಗ್ರಾಮದ ಉರ್ವದಲ್ಲಿ ನ.3ರಂದು ಪತ್ತೆಯಾಗಿದೆ. ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂಬಾಕೆ ತನ್ನ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ

ಪುತ್ತೂರು: ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ಕಬಡ್ಡಿ ತಂಡ ಸತತ 2ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ(ಆಡಳಿತ)ಚಿಕ್ಕಮಗಳೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು , ಹಾಗೂ ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ,ಕಡೂರು ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು, ಸತತ 2ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಹಾಗೂ

ಪುತ್ತೂರು: ತಿರುಮಲ ಹೋಂಡಾ ಶೋರೂಂನಲ್ಲಿ ವಿಶೇಷ ಆಫರ್

ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ತಿರುಮಲ ಹೋಂಡಾ ಶೋರೂಂನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಪುತ್ತೂರು, ಕಬಕ, ಕಡಬ, ಸುಳ್ಯ, ಉಪ್ಪಿನಂಗಡಿ ಶೋರೂಂಗಳಲ್ಲಿ ದ್ವಿಚಕ್ರ ವಾಹನಗಳಿಗೆ 700 ಅಧಿಕ ಸಿಬಿಲ್ ಶೇಕಡಾ 100ರಷ್ಟು ಧನ ಸಹಾಯ ನೀಡುತ್ತಿದ್ದಾರೆ. 6.66%ರಷ್ಟು ಬಡ್ಡಿ ದರ, ಸ್ಥಳದಲ್ಲೇ 14 ಸಾವಿರ ರೂಪಾಯಿ ವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವಿದೆ. 60 ತಿಂಗಳ ಇಎಮ್‌ಐ ಸೌಲಭ್ಯವಿದೆ. ಈ ಎಲ್ಲಾ

ಪುತ್ತೂರು: ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ರೆ ಬಿಜೆಪಿಯಿಂದ ಬೃಹತ್ ಹೋರಾಟ: ಸಂಸದ ಕೋಟ

ಪುತ್ತೂರು: ರಾಜ್ಯದಲ್ಲಿ  12ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಅನಧಿಕೃತ ಬಿಪಿಎಲ್ ಕಾರ್ಡ್‌ಗಳೆಂದು ಗುರುತಿಸಲಾಗಿದ್ದು, ಇವುಗಳನ್ನು ರದ್ದು ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ. ಇದರ ವಿರುದ್ಧ ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು. ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ  ಪುತ್ತೂರಿಗೆ ಬಂದಿದ್ದ

ಖಾಸಗಿ ಬಸ್‌ ಪ್ರಪಾತಕ್ಕೆ ಬಿದ್ದು ಚಾಲಕ ಮೃತ್ಯು

ಪುತ್ತೂರು: ಉದನೆ ಸಮೀಪದ ಎಂಜಿರದಲ್ಲಿ ಖಾಸಗಿ ಬಸ್‌ ಪ್ರಪಾತಕ್ಕೆ ಬಿದ್ದು ಚಾಲಕ ಮೃತಪಟ್ಟ ಘಟನೆ ಅ.12 ರ ನಸುಕಿನ ಜಾವ ನಡೆದ ಬಗ್ಗೆ ವರದಿಯಾಗಿದೆ.ಬಸ್ ಚಾಲಕ ಮತ್ತು ನಿರ್ವಾಹಕರಿಬ್ಬರೇ ಇದ್ದ “ಸುಬ್ರಹ್ಮಣ್ಯ” ಎಂಬ ಫಲಕವಿರುವ ಬಸ್ ಎಂಜಿರ ದಲ್ಲಿ ಚಾಲಕನ ತಪ್ಪಿ ಪ್ರಪಾತಕ್ಕೆ ಉರುಳಿದೆ. ಘಟನೆಯಿಂದ ಚಾಲಕ ಭರತ್‌ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.