Home Posts tagged #thokottu

ಮಂಗಳೂರು ಕಮ್ಯುನಿಟಿ ಸೆಂಟರ್ ಶುಭಾರಂಭ

ಉಳ್ಳಾಲ : ನಮ್ಮ ನಾಡ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ಕಮ್ಯುನಿಟಿ ಸೆಂಟರ್ ತೊಕ್ಕೊಟ್ಟುವಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಆರಂಭಗೊಂಡಿತು. ವಿಧಾನ ಸಭಾ ಸ್ವೀಕರ್ ಯು ಟಿ ಖಾದರ್ ಫರೀದ್ ಮಂಗಳೂರು ಕಮ್ಯುನಿಟಿ ಸೆಂಟರ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನರಿಗೆ ಮೂಲಭೂತ ಸೌಕರ್ಯ ಗಳನ್ನು ಪಡೆಯಲು ಇಂತಹ ಸೇವೆ ಅವಶ್ಯಕತೆ ಇದೆ.ಶಿಕ್ಷಣ, ಉದ್ಯೋಗ ಮುಂತಾದ

ಉಳ್ಳಾಲದ ಮೊಗವೀರ ಬಾಲಕಿಯ ಮಹತ್ತರ ಸಾಧನೆ

ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್‌ನಲ್ಲಿ ಜರಗುವ ವರ್ಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು. ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್‌ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್

ಮಂಗಳೂರು: ಪಂಪ್ವೆಲ್ ಬಳಿ ಭೀಕರ ಅಪಘಾತ

ನಗರದ ಪಂಪ್ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ತೊಕ್ಕೊಟ್ಟು ನಿವಾಸಿ ಸಮಿತ್ ಶೆಟ್ಟಿ (30) ಮೃತಪಟ್ಟ ಯುವಕ. ಸಮಿತ್ ಶೆಟ್ಟಿ ಕೊಟ್ಟಾರದಲ್ಲಿರುವ ತನ್ನ ರೂಮ್ ನಿಂದ ಇಂದು ಬೆಳಗ್ಗೆ ತೊಕ್ಕೊಟ್ಟಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾ.ಹೆ. 66ರ ಪಂಪ್ವೆಲ್ ಬಳಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ

ನಾಪತ್ತೆಯಾದ ವಿವಾಹಿತನ ಮೃತದೇಹ ಪತ್ತೆ

ಉಳ್ಳಾಲ: ಕಳೆದ ಸೋಮವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್ ಎಮ್(30) ಮೃತ ಯುವಕ. ಫೈನಾನ್ಸ್ ಸೀಸರ್ ಆಗಿದ್ದ ಗೌತಮ್ ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಠೆ , ಕಲಶಾಭಿಷೇಕದ ಹೊರೆಕಾಣಿಕೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದ. ರಾತ್ರಿ ವೇಳೆ ಮನೆ ಮಂದಿಯಲ್ಲಿ ಕಿರಿಕ್ ಮಾಡಿದ್ದ ಗೌತಮ್ ಮನೆ

ತೊಕ್ಕೊಟ್ಟು: ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ

ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂಬಾತ ಪಿಲಾರ್ ನ ಗೋಡೌನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಡೌನ್ ನ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಿಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು ಕೃತ್ಯ ಎಸಗಿದ್ದಾರೆ. ಕಳೆದ ಏಳು ವರುಷದಿಂದ ತೊಕ್ಕೊಟ್ಟುವಿನ ರಾಯನ್ಸ್ ಕ್ರೀಮ್ ಪಾರ್ಲರಲ್ಲಿ

ವಿದೇಶಿ ವಿದ್ಯಾರ್ಥಿಗಳಿದ್ದ ಸ್ಕೂಟರಿಗೆ ಕಾರು ಢಿಕ್ಕಿ

ಉಳ್ಳಾಲ: ವಿದೇಶಿ ವಿದ್ಯಾರ್ಥಿ ಗಳಿದ್ದ ಸ್ಕೂಟರ್‍ಗೆ ಢಿಕ್ಕಿ ಹೊಡೆದ ಕಾರು ಪರಾರಿಯಾಗುವ ಯತ್ನದಲ್ಲಿದ್ದಾಗ ತಡೆದ ಸ್ಥಳೀಯರು, ಅದನ್ನು ಹಿಡಿದು ಪೊಲೀಸ್ರಿಗೆ ಒಪ್ಪಿಸಿದ ಘಟನೆ ತಲಪಾಡಿ ದೇವಿನಗರ ಎಂಬಲ್ಲಿ ನಡೆದಿದೆ. ಕೇರಳ ಮೂಲದ ಕಾರು ಮತ್ತು ಅದರ ಚಾಲಕ ಅಹಮ್ಮದ್ ಮುಬಾರಿಷ್ ಎ.ಕೆ ಎಂಬಾತನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಅಹಮ್ಮದ್ ಮುಬಾರಿಷ್ ಶುಕ್ರವಾರ ಸಂಜೆ ಕಾರಿನಲ್ಲಿ ಮಂಗಳೂರಿಂದ ಕೇರಳದ ಕಡೆಗೆ ಅತಿ ವೇಗದಿಂದ

ಚರ್ಚ್ ಸಭಾಂಗಣ ಉದ್ಘಾಟಿಸಿದ ಭಟ್ರು !ತೊಕ್ಕೋಟ್ಟಿನಲ್ಲೊಂದು ಸೌಹಾರ್ದ ಕಾರ್ಯಕ್ರಮ

ತೊಕ್ಕೋಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಇಗರ್ಜಿ ಬಳಿಯಲ್ಲಿ ಸಂತ ಸೆಬಾಸ್ತಿಯನ್ ಅಡಿಟೋರಿಯಂ ಹೆಸರಿನ ಸುಸಜ್ಜಿತವಾದ ಮದುವೆ ಸಮಾರಂಭಕ್ಕೆ ಯೋಗ್ಯವಾದ ಸಭಾಂಗಣ ವೊಂದು ಉದ್ಘಾಟನೆ ಗೊಂಡಿತು. ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರುವ ರೀತಿಯಲ್ಲಿ ಈ ಸಮಾರಂಭ ಏರ್ಪಟ್ಟಿತ್ತು. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಬಾಂಧವರು ವೇದಿಕೆಯಲ್ಲಿ ಆಸನ ಅಲಂಕರಿಸಿದ್ದರು. ಈ ವೇದಿಕೆಯಲ್ಲಿದ್ದವರೆಲ್ಲರೂ ಗಣ್ಯರೇ. ಆ ಪೈಕಿ ಸಭಾಂಗಣವನ್ನು ಉದ್ಘಾಟಿಸಿದ ಡಾ|| ಯು.ಸಿ.

ತೊಕ್ಕೊಟ್ಟಿನಿಂದ ಕೊಣಾಜೆಗೆ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ DYFI ನೇತ್ರತ್ವದಲ್ಲಿ ರಸ್ತೆ ತಡೆ ಪ್ರತಿಭಟನಾ ಪ್ರದರ್ಶನ

ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟಿನಿಂದ ಕೋಣಾಜೆ ಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇದನ್ನು ಖಂಡಿಸಿ DYFI ಉಳ್ಳಾಲ ವಲಯ ನೇತ್ರತ್ವದಲ್ಲಿ ಚೆಂಬುಗುಡ್ಡೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಡಿ ವೈ ಎಫ್ಐ ಜಿಲ್ಲಾ ಅಧ್ಯಕ್ಷರು B K ಇಮ್ತಿಯಾಜ್ ತೊಕ್ಕೋಟ್ಟಿನಿಂದ ಹಿಡಿದು ಚೆಂಬುಗುಡ್ಡೆ, ಬಬ್ಬುಕಟ್ಟೆ , ಕುತ್ತಾರ್ ಮತ್ತಿತ್ತರ ಪ್ರದೇಶದಲ್ಲಿ ಬಹು ದೊಡ್ಡ ಗುಂಡಿಗಳಿಂದ