ಉಳ್ಳಾಲದ ಮೊಗವೀರ ಬಾಲಕಿಯ ಮಹತ್ತರ ಸಾಧನೆ
ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್‌ನಲ್ಲಿ ಜರಗುವ ವರ್ಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು.
ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್‌ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್ ಅನ್ನುವ ಕಾರ್ಯಕ್ರಮಕ್ಕೆ ಹಾಜರಾಗಲು ಹಲವು ಪ್ರಬಂಧ ಮಂಡಿಸಲು ಹೇಳಿದ್ದರು. ಆ ಪ್ರಬಂಧಗಳ ಆಧಾರದಂತೆ ಸಂದರ್ಶನ ನಡೆಸುತ್ತಾರೆ. ಆನಂತರ ಮತ್ತೆ ವಿಜ್ಞಾನ, ಗಣಿತ ವಿಷಯಗಳ ಪ್ರಬಂಧ ಮಂಡಿಸಿದ ನಂತರ ವರ್ಲ್ಡ್ ಸೈನ್ಸ್ ಸ್ಕಾಲರ್ ಆಗಿ ಆಯ್ಕೆಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಕಾರ್ಯಕ್ರಮಕ್ಕೆ 22 ದೇಶಗಳಿಂದ 55 ವಿದ್ಯಾರ್ಥಿಗಳನ್ನು ಆಯ್ಕೆಮಾಡಿದ್ದು, ಅದರಲ್ಲಿ ಸಿಂಧೂರ ಸಹ ಒಬ್ಬರಾಗಿದ್ದಾಳೆ. ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ಅವರ ಮೊಮ್ಮಗಳಾಗಿರುವ ಸಿಂಧೂರ ಬೆಂಗಳೂರಿನ ನ್ಯೂ ಅರೈಸಿಂಗ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ ಎಂದರು.
ಈ ಸಂದರ್ಭ ತಂದೆ ರಾಜಾ ದಯಾಳನ್, ಬಾಬು ಬಂಗೇರ, ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.