Home Posts tagged #udupi (Page 6)

ಹೆಮ್ಮಾಡಿ: ಆರ್ಯ ಬಿಲ್ಡ್ ಕೇರ್ ಸಂಸ್ಥೆ ಉದ್ಘಾಟನೆ

ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.ಎಮಿಯೆಂಟೆಕ್

ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಮಠಕ್ಕೆ ಅಗಮಿಸಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪಡುಬಿದ್ರಿ: ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ಪಲಿಮಾರಿನ ನಡಿಯೂರು ಕೊಪ್ಪಲ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ನಂದಿಕೂರು ಪಲಿಮಾರು ರಸ್ತೆಯಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವರಾಲು ಮಟ್ಟು ಕಡೆಯಿಂದ ಕುಂಜ್ಞಾಲಿ ತೋಟ ಸಣ್ಣ ಸೇತುವೆ ಬಳಿ ಕೆ.ಎಲ್. 60-ಎ.9937ನೋಂದಾನಿ ಸಂಖ್ಯೆಯ ಟಿಪ್ಪರೊಂದು ಪೊಲೀಸ್ ವಾಹನ ನೋಡಿ ಪಕ್ಕದ

ಕಾರ್ಕಳ: ಜ.21ರಿಂದ 26ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕೋತ್ಸವ

ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಜ. 21ರಿಂದ 26ರ ವರೆಗೆ ನಡೆಯಲಿದ್ದು, 6 ದಿನಗಳ ಉತ್ಸವದ ಅವಧಿಯಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡ ಭಾಷೆಯಲ್ಲಿ 3 ಒಟ್ಟು 48 ಬಲಿ ಪೂಜೆಗಳು ನಡೆಯಲಿದೆ ಎಂದು ಸಂತ ಲಾರೆನ್ಸರ ಬಸಿಲಿಕ ಧರ್ಮಗುರು ಅಲ್ಬನ್ ಡಿಸೋಜಾ ಹೇಳಿದರು. ಅವರು ಕಾರ್ಕಳ ಅತ್ತೂರು ಚರ್ಚ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವಧರ್ಮದ ಏಕತೆಯ ಹಬ್ಬವಾಗಿದ್ದು, ನಾಡಿನ ಲಕ್ಷಾಂತರ ಭಕ್ತರು ಬರುವ

ಪಡುಬಿದ್ರಿ:ಚಂದ್ರಶೇಖರ(ಚಕುಟು)ಪೂಜಾರಿ ನಿಧನ

ಪಡುಬಿದ್ರಿ: ತೆಂಕ ಎರ್ಮಾಳು ಗ್ರಾ.ಪಂ. ಅಧ್ಯಕ್ಷೆ ಸುರೇಖರವರ ಪತಿ ಚಂದ್ರಶೇಖರ ಪೂಜಾರಿ(57) ಹೃದಯಘಾತದಿಂದ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಗ್ರಾಮದೆಲ್ಲೆಡೆ ಸಮಾಜಸೇವೆಯಿಂದ ಜನಾನುರಾಗಿಯಾಗಿದ್ದ ಇವರು ಹುಲಿವೇಷ ಹಾಕಿ ಬಾರೀ ಗಾತ್ರದ ಮರಕಾಲು ಕುಣಿತದಲ್ಲಿ ತನ್ನ ಎಳೆಯ ವಯಸ್ಸಿನಲ್ಲಿ ಹೆಸರು ಗಳಿಸಿದ್ದರು. ಪತ್ನಿ ಸಹಿತ ಸಹಿತ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಕರ್ನಾಟಕ ರಾಜ್ಯ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಕಾಪು ಶಾಸಕ ಗುರ್ಮೆ

ಉಡುಪಿ: ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿ ಡಾ. ಗಣೇಶ್ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆ

ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಆಕಾಶವಾಣಿ ಮತ್ತು ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯ ಸಮಿತಿಯ ನಿರ್ಣಯದಂತೆ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅವರು ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ನೀಡಿರುತ್ತಾರೆ. ಕಾರ್ಯಾಧ್ಯಕ್ಷರಾಗಿ ಉದಯಕುಮಾರ್ ಬಿ ಹೈಕಾಡಿ, ಖಜಾಂಚಿಯಾಗಿ ಸ್ಮಿತಾ

ಪಡುಬಿದ್ರಿ: ಮರಳು ಕದ್ದು ಸಾಗಾಟ: ಚಾಲಕ, ಮರಳು ಸಹಿತ ಟಿಪ್ಪರ್ ವಶಕ್ಕೆ

ಪಡುಬಿದ್ರಿ: “ಶ್ರೀ ಕಟೀಲು” ಹೆಸರಿನ ಟಿಪ್ಪರ್ ನಲ್ಲಿ ಕದ್ದು ಮರಳು ಸಾಗಿಸುತ್ತಿದ್ದ ಈಚರ್ ಲಾರಿ ಮರಳು ಸಹಿತ ಅದರ ಚಾಲಕನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೆ.ಎ.20-ಎ.ಬಿ. 3474 ನೋದಾನಿ ಸಂಖ್ಯೆಯ ಶ್ರೀ ಕಟೀಲ್ ಹೆಸರಿನ ಈಚರ್ ನಲ್ಲಿ ಚಾಲಕ ಪ್ರಮೋದ್ ಎಂಬಾತ ಅಕ್ರಮವಾಗಿ ಮರಳು ಸಾಗಿಸುವಾಗ ವಾಹನ ತಪಾಸಣೆ ನಡೆಸುತ್ತಿದ್ದ ಪಡುಬಿದ್ರಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಯಾಗಲಿ,

ಉಡುಪಿ: ಹಿಂದುಗಳ ಮೇಲೆ ಸರ್ಕಾರದಿಂದ ಧಮನಕಾರಿ ಅಸ್ತ್ರ ಪ್ರಯೋಗ: ಆರ್. ಅಶೋಕ್

ರಾಜ್ಯ ಸರ್ಕಾರ ಹಿಂದುಗಳ ಮೇಲೆ ಧಮನಕಾರಿ ಅಸ್ತ್ರವನ್ನು ಪ್ರಯೋಗ ಮಾಡುತ್ತಿದೆ. ಈ ಹಿಂದೆ ದೇಣಿಗೆ ಕೇಳಿದಾಗ ರಾಮಮಂದಿರವನ್ನು ವಿವಾದಿತ ಎಂದಿದ್ದರು. ಅಯೋಧ್ಯೆಯ ಬಗ್ಗೆ ಸಿದ್ದರಾಮಯ್ಯರಿಗೆ ದ್ವೇಷ ಮತ್ತು ವೈರತ್ವ ಇದೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಅಲ್ಪಸಂಖ್ಯಾತ ಮತ ಕ್ರೋಡೀಕರಿಸಿ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ಕಾಲೋನಿಗೆ ೧ ಸಾವಿರ ಕೋಟಿ

*ಪಡುಬಿದ್ರಿ: ಪ್ರೀತಿ, ವಿಶ್ವಾಸದಿಂದ ವಿಶೇಷ ಮಕ್ಕಳ ಮನಸ್ಸು ಗೆಲ್ಲಬಹುದು: ಮಾಜಿ ಸಚಿವ ವಿನಯಕುಮಾರ್ ಸೊರಕೆ

ಸಮಾಜದಲ್ಲಿ ಸಾಮಾನ್ಯರಂತೆ ಬದುಕು ಸಾಗಿಸಲು ಅಸಾಧ್ಯವಾದ ವಿಶೇಷ ಮಕ್ಕಳ ಮನಸ್ಸನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಲು ಸಾಧ್ಯ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಸೊರಕೆಯವರ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಪುಟಾಣಿಗಳಿಗೆ ತಿನ್ನಿಸಿ ಮಾತನಾಡಿದರು.ಇದೇ ಸಂದರ್ಭ ವಿಶೇಷ ಮಕ್ಕಳಿಗಾಗಿ

ಕುಂದಾಪುರ: ಜರ್ಮನಿಯ ಯುವತಿಯನ್ನು ವರಿಸಿದ ಕುಂದಾಪುರದ ಯುವಕ..!

ಜರ್ಮನಿ ಮೂಲದ ಯುವತಿಯೋರ್ವರು ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್