ಉಡುಪಿ: ಹಿಂದುಗಳ ಮೇಲೆ ಸರ್ಕಾರದಿಂದ ಧಮನಕಾರಿ ಅಸ್ತ್ರ ಪ್ರಯೋಗ: ಆರ್. ಅಶೋಕ್
ರಾಜ್ಯ ಸರ್ಕಾರ ಹಿಂದುಗಳ ಮೇಲೆ ಧಮನಕಾರಿ ಅಸ್ತ್ರವನ್ನು ಪ್ರಯೋಗ ಮಾಡುತ್ತಿದೆ. ಈ ಹಿಂದೆ ದೇಣಿಗೆ ಕೇಳಿದಾಗ ರಾಮಮಂದಿರವನ್ನು ವಿವಾದಿತ ಎಂದಿದ್ದರು. ಅಯೋಧ್ಯೆಯ ಬಗ್ಗೆ ಸಿದ್ದರಾಮಯ್ಯರಿಗೆ ದ್ವೇಷ ಮತ್ತು ವೈರತ್ವ ಇದೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು.
ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಅಲ್ಪಸಂಖ್ಯಾತ ಮತ ಕ್ರೋಡೀಕರಿಸಿ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ಕಾಲೋನಿಗೆ ೧ ಸಾವಿರ ಕೋಟಿ ರಾಮಮಂದಿರಕ್ಕೆ ನಾನು ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ಇರುವವರಿಗೆ ತೊಂದರೆ ಕೊಡುವುದು ಸಿದ್ದರಾಮಯ್ಯನವರ ಚಾಳಿ. ಅಮಾಯಕ ಆಟೋ ಚಾಲಕನ ಕೇಸ್‌ಗಳು ವಜಾವಾಗಿದೆ. ಕರಸೇವೆ ಮಾಡಿದ ನಂತರ ಎಲ್ಲಾ ಕೇಸ್‌ಗಳನ್ನು ಹಾಕಲಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ದ್ವೇಷಿತ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.