ಪಡುಬಿದ್ರಿ:ಚಂದ್ರಶೇಖರ(ಚಕುಟು)ಪೂಜಾರಿ ನಿಧನ
ಪಡುಬಿದ್ರಿ: ತೆಂಕ ಎರ್ಮಾಳು ಗ್ರಾ.ಪಂ. ಅಧ್ಯಕ್ಷೆ ಸುರೇಖರವರ ಪತಿ ಚಂದ್ರಶೇಖರ ಪೂಜಾರಿ(57) ಹೃದಯಘಾತದಿಂದ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.
ಗ್ರಾಮದೆಲ್ಲೆಡೆ ಸಮಾಜಸೇವೆಯಿಂದ ಜನಾನುರಾಗಿಯಾಗಿದ್ದ ಇವರು ಹುಲಿವೇಷ ಹಾಕಿ ಬಾರೀ ಗಾತ್ರದ ಮರಕಾಲು ಕುಣಿತದಲ್ಲಿ ತನ್ನ ಎಳೆಯ ವಯಸ್ಸಿನಲ್ಲಿ ಹೆಸರು ಗಳಿಸಿದ್ದರು. ಪತ್ನಿ ಸಹಿತ ಸಹಿತ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಕರ್ನಾಟಕ ರಾಜ್ಯ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.