Home Posts tagged #udupi (Page 9)

ಬ್ರಹ್ಮಾವರದಲ್ಲಿ ಎಂ.ಸಿ.ಸಿ ಬ್ಯಾಂಕಿನ ಎಟಿಎಮ್ ಉದ್ಘಾಟನೆ

ಬ್ರಹ್ಮಾವರ ಶಾಖೆಯು ಆರಂಭಗೊoಡು ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, 10 ಕೋಟಿ ವ್ಯವಹಾರದ ಸಾಧನೆ ಮತ್ತು ನೂತನ ಎಟಿಮ್ ಉದ್ಘಾಟಣಾ ಸಮಾರಂಭ 2025 ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಂ.ಸಿ.ಸಿ. ಬ್ಯಾಂಕಿನ 8ನೇ ಎಟಿಎಮ್ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜೆರಾಲ್ಡ್

ಕುಖ್ಯಾತ ದನಕಳ್ಳ ಮೊಹಮ್ಮದ್‌ ಯೂನಸ್‌ ಬಂಧನ

ಕುಖ್ಯಾತ ದನಕಳ್ಳ ಮೊಹಮ್ಮದ್‌ ಯೂನಸ್‌ ಬಂಧನವಾಗಿದೆ.ವಿವಿಧ ಠಾಣೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್‌ ದನಕಳ್ಳ ಮೊಹಮ್ಮದ್‌ ಯೂನಸ್‌ನನ್ನು ಮಾ. 7ರಂದು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಲ್ಲೂರು ಗ್ರಾಮದ ಬೋರ್ಕಟ್ಟೆ ದೊಡ್ಡಕಜೆಯ ಮೊಹಮ್ಮದ್‌ ಯೂನಸ್‌ (30) ಕಾರ್ಕಳ ತಾಲೂಕು ರೆಂಜಾಳದಲ್ಲಿ ಶುಕ್ರವಾರ ಬಂಧಿಸಲ್ಪಟಿದ್ದಾನೆ. ಈತನ ಮೇಲೆ ದನಕಳ್ಳತನಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ, ಅಜೆಕಾರು, ಹೆಬ್ರಿ, ಶಿರ್ವ, ಮೂಡುಬಿದಿರೆ ಮಾತ್ರವಲ್ಲದೇ

ಉಡುಪಿ: ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಡಿಸಿಎಂ ಡಿಕೆಶಿ ಭೇಟಿ

ಉಡುಪಿ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಿಯ ಪ್ರತಿಷ್ಠೆಯಾದ ಬಳಿಕ ಮೊದಲ ಪ್ರಸಾದವನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಯಿತು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಮಾನವೀಯತೆಗೆ ತಲೆ ಬಾಗಿ , ನಮ್ಮ ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು. ಇನ್ನೊಂದು ಧರ್ಮದವರಿಗೆ ತೊಂದರೆ ಕೊಡಬೇಕೆಂದು ಯಾವ

ಮೂಡುಬಿದರೆ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಬಿರಾವು  ಶಾಂತಿ ನಿವಾಸ ವಿಲಿಯಮ್ ಕುಟ್ಟಿನ್ಹ  ಎಂಬುವರ ಮನೆಯ  ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ  ರಕ್ಷಿಸಿದ ಘಟನೆ ನಡೆದಿದೆ. ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ ಅವರ ನಿರ್ದೇಶನದಂತೆ,ಮೂಡುಬಿದಿರೆ ವಲಯ ಅರಣ್ಯಾಧಿಕಾರಿ  ಕಿರಣ್ ಕುಮಾರ್ ಜಿ. ರವರ ಮಾರ್ಗದರ್ಶನದಲ್ಲಿ  ಅರವಳಿಕೆ ತಜ್ಞರಾದ  ಡಾ. ಮೇಘನಾ  ಅವರು ಬೋನ್

ಕಟಪಾಡಿ: ಗ್ರಾಹಕರನ್ನು ಆಕರ್ಷಿಸುತ್ತಿರುವ  ರಾಸಾಯನಿಕ ಮುಕ್ತ ಕಲ್ಲಂಗಡಿ ಹಣ್ಣುಗಳು..!!

ಕೃಷಿಯನ್ನೇ ನಂಬಿ ಜೀವನ ನಡೆಸುವ ಕಟಪಾಡಿಯ ಅಂಬಾಡಿ ಬೈಲು ಕೋಟೆ ಮಟ್ಟುವಿನ ರವಿ ಶೇರಿಗಾರ್ ಐದು ಬಗೆಯ ಕಲ್ಲಂಗಡಿ ಹಣ್ಣು ಸಹಿತ ವಿವಿಧ ಬಗೆಯ ಕೃಷಿ ಉತ್ಪನ್ನಗಳನ್ನು ನಡೆಸಿ ತನ್ನ ಮನೆಯನ್ನೇ ಮಾರುಕಟ್ಟೆಯನ್ನಾಗಿಸಿ ಯಶಸ್ವಿ ಕೃಷಿಕರಾಗಿದ್ದಾರೆ. ರವಿ ಶೇರಿಗಾರ್ ಕಳೆದ ಸುಮಾರು ಹತ್ತು ವರ್ಷಗಳಿಂದ  ಐದು ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಹಣ್ಣು, ಮಟ್ಟುಗುಳ್ಳ, ಸೌತೆಕಾಯಿ, ಮುಳ್ಳುಸೌತೆ, ಹೀರೇಕಾಯಿ ಹಾಗೂ ಕಪ್ಪು ಹೆಸರು ಇವುಗಳನ್ನು ಬೆಳೆಸಿ ಉತ್ತಮ ಪಸಲು

ಆಳ್ವಾಸ್‌ಗೆ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಬೆಂಗಳೂರಿನ ಜೆಪಿ ನಗರದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮೇರಿ ಗೋ ರೌಂಡ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್‌ನ 50ನೇ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್ಸ್ನಲ್ಲಿ ಆಳ್ವಾಸ್ ತಂಡ ತಮಿಳುನಾಡುವಿನ ಪಿ.ಎಸ್.ಎನ್.ಎ ದಿಂಡಿಗಲ್

ಉಡುಪಿ: ಲಾರಿ ಪಲ್ಟಿ:ಚಾಲಕ ಮೃತ್ಯು

ಉಡುಪಿ ಟಿಪ್ಪರ್ ಲಾರಿ ಪಲ್ಟಿಯಾಗಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಗಣಪಣಕಟ್ಟೆ ತಿರುವಿನ ಬಳಿ ಮಂಗಳವಾರ (ಫೆ.25ರಂದು) ಮುಂಜಾನೆ ನಡೆದಿದೆ.ಮೃತರನ್ನು ಬೈಂದೂರಿನ ಸುಬ್ರಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಸುಮಾರಿಗೆ ಈ ಘಟನೆ ನಡೆದಿದೆ. 4 ಗಂಟೆಯ ಟಿಪ್ಪರ್ ಬೈಂದೂರಿನಿಂದ ಪಳ್ಳಿಯ ಕೋರೆಗೆ ಜಲ್ಲಿ ತರಲು ಹೋಗುತ್ತಿದ್ದ ವೇಳೆ ಪಲ್ಟಿಯಾಗಿದೆ. ಪರಿಣಾಮ ಚಾಲಕ ಸುಬ್ರಮಣ್ಯ

ಉಡುಪಿ: ಹೆದ್ದಾರಿ ಮಧ್ಯದಲ್ಲೇ ತ್ಯಾಜ್ಯ ಮೂಟೆ – ಸೂಕ್ತ ಕ್ರಮ ಕೈಗೊಳ್ಳುವಂತೆ ಮಣೂರು ಜನರ ಆಗ್ರಹ

ಉಡುಪಿ:-ಮಣೂರು ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲಿ ಕಿಡಿಗೇಡಿಗಳು ಮೂಟೆ ಗಟ್ಟಲೆ ತ್ಯಾಜ್ಯ ಎಸೆದು ಹೋಗುತ್ತಿರುವ ಘಟನೆ ಕಳೆದ ಎರಡು ದಿನಗಳಿಂದ ಸತತವಾಗಿ ನಡೆಯುತ್ತಿದೆ. ಸೋಮವಾರ ರಾತ್ರಿ ಬೆಳಗಾಗುವದರೊಳಗೆ ಒಂದು ಬಾರಿ ಗಾತ್ರದ ತ್ಯಾಜ್ಯದ ಚೀಲ ಕಾಣಿಸಿಕೊಂಡಿತ್ತು. ನಂತರ ಮಂಗಳವಾರ ಮುಂಜಾನೆಯೊಳಗೆ ಮತ್ತೆ ಮೂರು ಬಾರಿ ಗಾತ್ರದ ತ್ಯಾಜ್ಯದ ಚೀಲ ಅದೇ ಡಿವೈಡರ್ ಮಧ್ಯದಲ್ಲಿ ಕಿಡಿ ಗೇಡಿಗಳು ಎಸೆದು ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ

ಉಡುಪಿ : ಎಪ್ರಿಲ್ 5ರಂದು ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರೋಪ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿಯ ವಿಶೇಷ ಸಭೆ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಅಧ್ಯಕ್ಷತೆಯಲ್ಲಿ ಫೆ.18ರಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆಯಿತು. ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಎಪ್ರಿಲ್ 5ರಂದು ಶನಿವಾರ ಸಂಜೆ ಉಡುಪಿಯ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ತಾಲೂಕು ಸಂಘದವರೊಂದಿಗೆ ಸೇರಿ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಬಗ್ಗೆ

ಉಡುಪಿ: ಎರಡು ಬೈಕುಗಳ ನಡುವೆ ಅಪಘಾತ – ಓರ್ವ ಬೈಕ್ ಸವಾರ ಸಾವು

ಉಡುಪಿ: ಎರಡು ಬೈಕುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಅಜ್ಜರಕಾಡಿ ಅಗ್ನಿ ಶಾಮಕ ದಳ ಠಾಣೆಯ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ. ಮೃತರನ್ನು ಸ್ಥಳೀಯರಾದ ಸ್ಯಾಮುಯೆಲ್ ಸದಾನಂದ ಕರ್ಕಡ(59) ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.ಅಪಘಾತದಿಂದ