Home Posts tagged #ujire

ಎಸ್.ಡಿ.ಎಂ. ಸಂಸ್ಥೆಗೆ ಸಂಪತ್ ಕುಮಾರ್ ನೈಜ ಸಂಪತ್ತು: ಡಾ. ಸತೀಶ್ಚಂದ್ರ

ವಿದ್ಯೆ, ಬುದ್ಧಿವಂತಿಕೆ ಹಾಗೂ ಹೃದಯವಂತಿಕೆ ಸಹಿತ ಉನ್ನತ ಗುಣಗಳಿರುವ ಡಾ. ಬಿ.ಪಿ. ಸಂಪತ್ ಕುಮಾರ್ ಅವರು ಎಸ್.ಡಿ.ಎಂ. ಸಂಸ್ಥೆಗೆ ನೈಜ ಸಂಪತ್ತು ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಅವರು ಹೇಳಿದರು.ಉಜಿರೆ ಎಸ್.ಡಿ.ಎಂ. ಕಾಲೇಜಿನ ಕುಲಸಚಿವ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಅವರಿಗೆ

ಉಜಿರೆಯಲ್ಲಿ ಎಸ್.ಡಿ.ಎಂ. ಮಲ್ಟಿಮೀಡಿಯಾ ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆಗೆ ಚಾಲನೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅತ್ಯಾಧುನಿಕ ಎಸ್.ಡಿ.ಎಂ. ಮಲ್ಟಿಮೀಡಿಯಾ ವಿಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ. ಎಸ್. ಆರ್. ನಿರಂಜನ ಅವರು ಸೆ.28ರಂದು ಉದ್ಘಾಟಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಗಡೆ ಅವರು ವೀಡಿಯೊ ಕಾನ್ಫರೆನ್ಸ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಸೌಲಭ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಹೆಗ್ಗಡೆಯವರ

ಹೋಟೆಲ್ ಓಶಿಯನ್ ಪರ್ಲ್ ಸೆ. 30 ರಂದು ಉಜಿರೆಯಲ್ಲಿ ಶುಭಾರಂಭ

ಅಥಿತಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಷನ್ ಪರ್ಲ್, ಉಜಿರೆ 30 ಸೆಪ್ಟೆಂಬರ್ 2022 ರಂದು ತನ್ನ 4ಶಾಖೆಯನ್ನು ತೆರೆಯಲಿದೆ. ಓಷನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಷನ್ ಪರ್ಲ್, ಮಂಗಳೂರು, ದಿ ಓಷನ್ ಪರ್ಲ್, ಉಡುಪಿ ಮತ್ತು ದಿ ಓಷಿಯನ್ ಪರ್ಲ್ ಇನ್, ಮಂಗಳೂರು ತಮ್ಮ 4 ನೇ ಶಾಖೆಯನ್ನು ಆರಂಭಿಸಲು ಹೆಮ್ಮೆಪಡುತ್ತಿದೆ.

ಕೆಲಸಗಳಲ್ಲಿ ಕಾರ್ಯಗತಗೊಳ್ಳಲು ಜ್ಞಾನ ಅಗತ್ಯ- ಧನಂಜಯ ರಾವ್

ಉಜಿರೆ: ಜೀವನದಲ್ಲಿ ಗೆಲುವು ಸಾಧಿಸಬೇಕಿದ್ದರೆ, ಮೊದಲು ಜ್ಞಾನದ ಸಂಪನ್ಮೂಲಗಳನ್ನು ತಿಳಿದುಕೊಂಡು, ಸಿಗುವ ಜ್ಞಾನವನ್ನು ನಿರ್ವಹಿಸಿ, ಕಾರ್ಯಗತಗೊಳಿಸಬೇಕು. ನಾವು ದುಡಿಯುವ ಹಣ ಇಂದು ಬಂದರೆ, ನಾಳೆಯ ದಿನ ಮತ್ತೆ ಖಾಲಿಯಾಗುತ್ತದೆ. ಆದರೆ, ನಾವು ಗಳಿಸುವ ಜ್ಞಾನ ನಮ್ಮ ಕೊನೆಯ ತನಕ ನಮ್ಮ ಮಸ್ತಕದಲ್ಲೇ ಇರುತ್ತದೆ ಎಂದು, ಬೆಳ್ತಂಗಡಿಯ ವಕೀಲರಾದ ರೊಟೇರಿಯನ್, ಧನಂಜಯ ರಾವ್ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ

ಸಮಾಜದಲ್ಲಿ ಅರಿವಿನ ಕೊರತೆಯಿಂದ ಅಸಮಾನತೆ ಉಂಟಾಗಿದೆ : ಪ್ರೊ. ಗಿರೀಶ್ ಮಿಶ್ರಾ

ಸಮಾಜದಲ್ಲಿ ಅರಿವಿನ ಕೊರತೆಯಿಂದ ಅಸಮಾನತೆ ಉಂಟಾಗಿದೆ.‌ಇದನ್ನು ಸರಿಪಡಿಸುವ ಜವಾಬ್ದಾರಿ ಮನಶ್ಶಾಸ್ತ್ರಜ್ಞರದ್ದಾಗಿರುತ್ತದೆ ಎಂದು ಮಹಾರಾಷ್ಟ್ರದ ವಾರ್ಧಾದ ಮಹಾತ್ಮಾ ಗಾಂಧಿ ಹಿಂದಿ ವಿಶ್ವವಿದ್ಯಾಲಯದ ಕುಲಪತಿ, ವಿಜ್ಞಾನಿ ಪ್ರೊ. ಗಿರೀಶ್ ಮಿಶ್ರಾ ನುಡಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ 2021ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ “ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ರಾಷ್ಟ್ರೀಯ ವರ್ಚುವಲ್

ಸೇವೆಯೇ ಪರಮ ಗುರಿಯಾಗಿರಲಿ: ಬೆಳ್ಳಾಲ ಗೋಪಿನಾಥ ರಾವ್

ಉಜಿರೆ: ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ, ಯೋಚನಾ ಶಕ್ತಿ ಹಾಗೂ ಕಾರ್ಯತತ್ಪರತೆ ಅತ್ಯಗತ್ಯ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಗೌರವ, ನಿರಂತರ ಕಲಿಕೆ, ಗುರಿ, ಆತ್ಮವಿಶ್ವಾಸಗಳನ್ನು ರೂಢಿಸಿಕೊಳ್ಳಬೇಕು. ಸೇವೆಯೇ ಪರಮ ಗುರಿಯಾಗಿರಬೇಕು ಹಾಗೂ ಭವ್ಯಭಾರತದ ದಿವ್ಯ ಪ್ರಜೆಯಾಗಿ, ಭಾರತವನ್ನು ಗೆಲ್ಲಿಸುವಂತಾಗಬೇಕು.” ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ ‘ಸ್ವಚ್ಛ ಮನಸ್’ ಕಾರ್ಯಕ್ರಮದಸಂಪನ್ಮೂಲ ವ್ಯಕ್ತಿ

“ಭಕ್ತಿಕಾವ್ಯವು ಸಾಮಾಜಿಕ ಚೇತನದ ಸ್ಪೂರ್ತಿ” ಡಾ.ಮಂಜುನಾಥ ಅಂಬಿಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ಡರ ಮಹಾವಿದ್ಯಾಲಯದ ಹಿಂದಿ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಅಂಬಿಗ [ಪ್ರೋ. ಮತ್ತು ಉಪನ್ಯಾಸಕರು ದಕ್ಷಣಬಾರತ ಸ್ನಾತಕೋತ್ತರ ಕೇಂದ್ರ ಹಿಂದಿ ಪ್ರಚಾರಸಭಾ ಮದ್ರಾಸ ಅವರು ಮದ್ಯಯುಗದ ಕಾವ್ಯಪರಂಪರೆ ಬಾರತೀಯ ಸಮಾಜಿಕ ಜೀವನಕ್ಕೆ ಚೇತನ ತುಂಬಿದ್ದಲ್ಲದೆ ಕಬೀರದಾಸರು, ಸೂರದಾಸರು ತುಲಸಿದಾಸರು ಬಿಹಾರಿಲಾಲರು ರಹೀಮರಾದಿಯಾಗಿ ತಮ್ಮ ತತ್ವಪದಗಳೊಂದಿಗೆ ಅಸಂಘಟಿತ ಗೊಂದಲ ಹಾಗು ಆಸುರಕ್ಷಿತ ಸಮಾಜವನ್ನ ಬೆಸೆಯುವ

ಉದ್ಯೋಗಕ್ಕಾಗಿ ನಿರೀಕ್ಷಿಸಬೇಡಿ – ನೀವೇ ಉದ್ಯೋಗಗಳನ್ನು ಸೃಷ್ಟಿಸಿ : ಅಬ್ದುಲ್ಲ ಮಡುಮೂಲೆ

“ನೀವು ಶ್ರೀಮಂತರಾಗಬೇಕೆಂಬ ಧ್ಯೇಯ ಹೊಂದಿದ್ದರೆ ಬೇರೆಯವರಿಗಾಗಿ ದುಡಿಯಬೇಡಿ. ನಿಮ್ಮ ಅಭಿವೃದ್ಧಿಗಾಗಿಯಷ್ಟೇ ಶ್ರಮ ಪಡಿ. ನಿಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಬೇಕಾದರೆ ಉದ್ಯೋಗಕ್ಕಾಗಿ ನಿರೀಕ್ಷೆ ಮಾಡಬೇಡಿ. ಬದಲಾಗಿ ನೀವೇ ಇತರರಿಗೆ ಉದ್ಯೋಗ ಸೃಷ್ಟಿಸಿಕೊಡುವಷ್ಟು ಪ್ರಬಲವಾಗಿ ಬೆಳೆಯಲು ನಿರ್ಧರಿಸಿ, ಅದರಂತೆಯೇ ಮುನ್ನಡೆದು ಯಶಸ್ಸು ಪಡೆಯಿರಿ” ಎಂದು ಅಬುಧಾಬಿ ಸರ್ಕಾರದ ಸೈಬರ್ ಫೌಂಡೇಶನ್ ಹಿರಿಯ ಆರ್ಥಿಕ ನಿಯಂತ್ರಣ ಅಧಿಕಾರಿಯಾದ ಸಿ. ಎ. ಅಬ್ದುಲ್ಲಾ ಮಡುಮೂಲೆ

ಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ

ಬೆಳ್ತಂಗಡಿ ಸಂಚಾರಿ ಪೊಲೀಸರ ಅವಾಂತರದಿಂದಾಗಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕಾರಿಗೆ ಢಿಕ್ಕಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಉಜಿರೆಯ ಸಿದ್ದವನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಕಾ ಏಕಿ ವಾಹನಗಳನ್ನು ತಪಾಸಣೆ ಮಾಡಲು ನಿಲ್ಲಿಸಿದ್ದರಿಂದ ಸ್ಕೂಟರ್ ಹಠಾತ್ತನೆ ಬ್ರೇಕ್ ಹಾಕಿದಾಗ ಮಳೆಯಿಂದಾಗಿ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ