Home Posts tagged V4News (Page 204)

ಬದಿಯಡ್ಕದಲ್ಲಿ ಗ್ರಾಮಲೋಕ ಕೊಂಕಣಿ ಸಾಹಿತ್ಯ ಕಾರ್ಯಕ್ರಮ

ಕಾಸರಗೋಡು ಜು 22: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಗ್ರಾಮಲೋಕ ಎಂಬ ಕೊಂಕಣಿ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಕೊಂಕಣಿ ಸಾಹಿತಿ, ಭಾಷಾ ತಜ್ನ ಡಾ. ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಗ್ರಾಮಲೋಕ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ

ಉಡುಪಿ : ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆ, ಸಂವಿಧಾನ ವಿರೋಧಿ ನೀತಿ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತು. ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾದರು. ಈ ವೇಳೆ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು. ಬೆಂಗಳೂರಿನಲ್ಲಿ ಬಂಧಿತ ಶಂಕಿತ ಭಯೋತ್ಪಾದಕರ ಪ್ರಕರಣವನ್ನು

ಬೈಂದೂರು KSRTC ಬಸ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಬೈಂದೂರು ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಮನೆಗೆ ಸೇರಲಾಗುತ್ತಿಲ್ಲ. ಬಸ್ ಇಳಿದು ಕಾಡು ಪ್ರದೇಶದಲ್ಲಿ 2ರಿಂದ 3 ಕಿ.ಮೀ. ನಡೆದುಕೊಂಡು ಕಾಲುಸಂಕ ಹೊಳೆಗಳನ್ನೆಲ್ಲ ದಾಟಿ ಹೋಗುವಾಗ ರಾತ್ರಿ 8 ಗಂಟೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಕವಿತಾ ಆಚಾರ್ಯ ಮಾತನಾಡಿ

ಜುಲೈ 26ರಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ

ಸುರತ್ಕಲ್: “ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ 10ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ, ಇಡ್ಯಾ ದೇವಸ್ಥಾನದಿಂದ ಹಣತೆಯ ಮೆರವಣಿಗೆ, ಸೈನಿಕರ ಗೌರವ ಇತ್ಯಾದಿ ಕಾರ್ಯಕ್ರಮ ಜುಲೈ 26ರ ಸಂಜೆ ನಡೆಯಲಿದೆ” ಎಂದು ಸಂಘಟನೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾಹಿತಿ ನೀಡಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸೇವಾ ವೃಂದ ವೇದಿಕೆ, ಸುರತ್ಕಲ್

ಮುಂಡ್ಕೂರು : ಹಡಿಲು ಬಿದ್ದ ಭೂಮಿಯಲ್ಲಿ ಭತ್ತದ ಕೃಷಿ

ಮುಂಡ್ಕೂರು ಸಮೃದ್ಧಿ ಸಂಜೀವಿನಿ ಒಕ್ಕೂಟದ ವತಿಯಿಂದ ಮುಂಡ್ಕೂರು ಜೈನಪೇಟೆಯ ಬಳಿ ಗದ್ದೆಯಲ್ಲಿ ಒಕ್ಕೂಟದ ಮಹಿಳೆಯರು ಗದ್ದೆ ನಾಟಿ ಮಾಡಿದರು. ಸುಮಾರು ಒಂದು ಎಕರೆ ಹಡಿಲು ಭೂಮಿಯನ್ನು ಸಮತಟ್ಟು ಮಾಡಿ ಟ್ಯಾಕ್ಟರ್ ಮೂಲಕ ಉಳುಮೆ ಮಾಡಿ ನಾಟಿ ಮಾಡಿದರು. ಈ ಸಂದರ್ಭದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ವನಿತಾ ಶೆಟ್ಟಿ ಎಲ್ ಸಿ ಆರ್ ಪಿ ಶಶಿಕಲಾ, ಸುಮನ ಒಕ್ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಮೂಡುಬಿದರೆ : ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣಾ ಅಭಿಯಾನ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ ಘಟಕ, ಇಂಟರಾಕ್ಟ್ ಕ್ಲಬ್, ಶಾಲಾ ಸಂಸತ್ತು ಹಾಗೂ ಮೂಡುಬಿದಿರೆ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣಾ ಅಭಿಯಾನ ಮೂಡುಬಿದಿರೆ ಮಾರುಕಟ್ಟೆ ಸಮೀಪ ನಡೆಯಿತು. ಪುರಸಭಾ ಮುಖ್ಯಾಧಿಕಾರಿ ಶಿವ ನಾಯಕ್ ಅಭಿಯಾನಕ್ಕೆ ಚಾಲನೆ ನೀಡಿ ಪ್ಲಾಸ್ಟಿಕ್ ನ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಈ ಜನ ಜಾಗೃತಿ ಕಾರ್ಯಕ್ರಮದಲ್ಲಿ ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ ಎಂ

ಬೈಂದೂರ್ :ಬಾರ್ ವೊಂದರ ಮುಂಭಾಗದಲ್ಲಿ ತಂಡದಿಂದ ಹಲ್ಲೆ

ಕುಂದಾಪುರ; ಬೈಂದೂರಿನ ಬಾರ್‍ವೂಂದರ ಮುಂಭಾಗದಲ್ಲಿ ಕಂಠಪೂರ್ತಿ ಕುಡಿದು ಪುಡಿ ರೌಡಿಗಳ ತಂಡ ಅಟ್ಟಹಾಸ ಮೆರೆದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ವಾಹನ ಅಡ್ಡ ಬಂದ ಕಾರಣ ಆರಂಭವಾದ ವಾಗ್ವಾದ, ಪರಸ್ಪರ ಹಲ್ಲೆ ನಡೆಸಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ ಪಾರ್ಕಿಂಗ್ ನಿಲ್ಲಿಸಿದ ವಾಹನದ ಗಾಜನ್ನು ಹೆಲ್ಮೆಟ್ ಮತ್ತು ಸೋಡಾ ಬಾಟಲಿಗಳಿಂದ ಜಖಂಗೊಳಿಸಿದ್ದಾರೆ. ಪ್ರಕರಣದ ದೃಶ್ಯಾವಳಿ

ಪುತ್ತೂರು : ಕಬಕಬೈಲಿನಲ್ಲಿ ನದಿಯಂತಾದ ಕೆಸರುಮಯ ರಸ್ತೆ

ಪುತ್ತೂರು : ಮಳೆಗಾಲ ಬಂತಂದ್ರೆ ಸಾಕು ರಸ್ತೆಗಳೆಲ್ಲ ಹದಗೆಡೋದನ್ನ ನೋಡ್ಬೋದು ಆದ್ರೆ ಈ ಊರಲ್ಲಿ ಮಳೆ ಬಂದ್ರೂ ಅದೇ ಕಥೆ ಮಳೆ ಬರದಿದ್ರೂ ಅದೇ ವ್ಯಥೆ… ಹೌದು..ಕಬಕ ಗ್ರಾಮದ ಕಬಕಬೈಲು ಎಂಬಲ್ಲಿ 10ವರ್ಷದಿಂದ ಇದೇ ಸಮಸ್ಯೆ…ಮಣ್ಣಿನ ರಸ್ತೆಯಿದ್ದು ಮಳೆಯಿದ್ದಾಗಂತು ಹೇಳೋದೆ ಬೇಡ ಇಡೀ ರಸ್ತೆ ಕೆಸರುಮಯ.. ವಾಹನ ಸವಾರರಂತೂ ಎದ್ದೂ ಬಿದ್ದು ಹೋಗೋ ಪರಿಸ್ಥಿತಿ. ಅದೆಷ್ಟೋ ಬಾರಿ ವಾಹನಗಳು ಕೆಸರಿಗೆ ಜಾರಿದ ಉದಾಹರಣೆಗಳು ಕೂಡಾ ಇದೆ. ಇನ್ನು ನಿತ್ಯ ಪಾದಚಾರಿಗಳ ಪರಿ ಕೇಳೋದೇ

ಬಿ.ಕೆ ಸೇಸಪ್ಪ ಬೆದ್ರಕಾಡು ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ : ಕಾನೂನು ಹೋರಾಟ ಸಮರದ ಎಚ್ಚರಿಕೆ ನೀಡಿದ ದಸಂಸ

ಪುತ್ತೂರು; ದಲಿತ ಸಂಘಟನೆಯೊಂದರ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ದಲಿತ್ ಸೇವಾಸಮಿತಿ ಈ ಬಗ್ಗೆ ಕಾನೂನು ಸಮರ ನಡೆಸಲು ತೀರ್ಮಾನಿಸಿದ್ದು, ಕಾನೂನು ಹೋರಾಟಕ್ಕೆ ಬೆಲೆ ಸಿಗದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಪುತ್ತೂರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ವಿಟ್ಲ ಮಾತನಾಡಿ, ನೆಲ್ಯಾಡಿ ಭಾಗದಲ್ಲಿ ಜಮೀನಿನ

MDMA ಹಾಗೂ ಪಿಸ್ತೂಲ್ ಹೊಂದಿದ ಕುಖ್ಯಾತ ಡ್ರಗ್ ಪೆಡ್ಲರ್‍ಗಳ ಸೆರೆ

ಮಂಗಳೂರು ನಗರದಾದ್ಯಂತ ಮಾದಕ ವಸ್ತುವಾದ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ. ಸುಮಾರು 9ಲಕ್ಷದ ಮೌಲ್ಯದ ಎಂಡಿಎಂಎ ಡ್ರಗ್ಸ್ ಹಾಗೂ ಪಿಸ್ತೂಲ್ , ಡ್ರಾಗನ್ ಚೂರಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಹೇಳಿದ್ದಾರೆ. ಅವರು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಳ್ಳಾಲ ತಾಲೂಕು ತಲಪಾಡಿ