ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐತ್ತೂರು ಕೋಕಲಾ ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿದರು. ಮನೆಯಲ್ಲಿ ಚೋಮ ರವರ
ಬೈಂದೂರು ವಲಯ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ವತಿಯಿಂದ 3ಎ ಲೈಸೆನ್ಸ್ ರದ್ದು ಪಡಿಸಿರುವುದನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬೈಂದೂರು ಯಡ್ತರೆ ಸರ್ಕಲ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದೆ. ಬೈಂದೂರು ವಲಯ ಲಾರಿ ಮಾಲಿಕರ ಹಾಗೂ ಚಾಲಕರ ಸಂಘದ ಜಂಟಿ ಅಧ್ಯಕ್ಷ ನೆಲ್ಯಾಡಿ ದಿವಾಕರ ಶೆಟ್ಟಿ ಮಾತನಾಡಿ, ಈ ವರೆಗೆ ಇಲ್ಲದ
ವಿಟ್ಲ: ಬೈಕ್ ಸೇತುವೆಗೆ ಡಿಕ್ಕಿ ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯ ಮುಸ್ಲಿಂ ಯುವಕರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಪಾಕ ಪ್ರವೀಣ ಹರ್ಷವರ್ಧನ ಭಟ್(55) ಅವರು ಕಾರ್ಯನಿಮಿತ್ತ ಶನಿವಾರ ಮುಂಜಾನೆ 4ಗಂಟೆ ಸುಮಾರಿಗೆ ತನ್ನ ಬೈಕಿನಲ್ಲಿ ವಿಟ್ಲ ಕಡೆ ಹೊರಟಿದ್ದರು. ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸವಾರ ಹರ್ಷವರ್ಧನ
MANGALURU (V4NEWS ) : ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಒಂದು ಕೋಟಿ ರೂಪಾಯಿ ಸಹಾಯಧನ ನೀಡಿದೆ. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡ್ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್ ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಶ್ಯಾಮ್ ಪ್ರಸಾದ್ ಕಾಮತ್ ಮುಂಡ್ಕೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮರ್ದಾಳ ಸಮೀಪದ ಕೆಂಚಭಟ್ರೆ ಎಂಬಲ್ಲಿ ನಡೆದಿದೆ. ನೆಕ್ಕಿತ್ತಡ್ಕ ನಿವಾಸಿ ಜಗನ್ನಾಥ ರೈ ಎಂಬವರು ತನ್ನ ಕಾರಿನಲ್ಲಿ ಕಡಬದಿಂದ ಮರ್ದಾಳಕ್ಕೆ ಹೋಗುತ್ತಿದ್ದ ವೇಳೆ ಮರ್ದಾಳದಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕಾರಿಗೆ ಡಿಕ್ಕಿಯುಂಟಾಗಿದ್ದು, ಕಾರು ಚಾಲಕ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು
ಕರಾವಳಿಯ ಪ್ರಮುಖ ಜನಾಕರ್ಷಣೆಯ ಮೇಳ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭವಾಗಿದ್ದು, ಕರಾವಳಿಯ ಉತ್ಸವ ಮೈದಾನದಲ್ಲಿ ವೈಭವದ ಚಾಲನೆ ದೊರಕಿದೆ. 17 ವರ್ಷಗಳಿಂದ ಮಂಗಳೂರಿಗೆ ಬರುತ್ತಿರುವ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಈ ಬಾರಿ ಅಂತರ್ಜಲ ಸುರಂಗ ಮಾರ್ಗದಲ್ಲಿ ನಾನಾ ಪ್ರಭೇದದ ಮೀನುಗಳೊಂದಿಗೆ ರೋಬಾಟಿಕೆ ಅನಿಮಲ್ ಶೋಗೆ ಆದ್ಯತೆ ನೀಡಲಾಗಿದೆ. ಗ್ರಾಹಕರು ಅಂತರ್ಜಲ ಸುರಂಗ ಮಾರ್ಗದ ಮೂಲಕ ಮೇಳಕ್ಕೆ ಪ್ರವೇಶ ಪಡೆಯುವಾಗ ಸುಮಾರು 200ಕ್ಕೂ ಅಧಿಕ ಮೀನುಗಳ ಪರಿಚಯವಾಗಲಿದೆ. ಇದರ
ಮೂಡುಬಿದಿರೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಮೂಡುಬಿದಿರೆಯಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ ನ ಪ್ರಯೋಜನವನ್ನು ಪಡೆದುಕೊಂಡು ರಾಷ್ಟ್ರ- ಅಂತರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವಂತಹ ಕ್ರೀಡಾಪಟುಗಳಾಗಬೇಕೆಂದು ಶುಭ ಹಾರೈಸಿದರು. ತಾಲೂಕು ತಹಶೀಲ್ದಾರ್ ಪ್ರದೀಪ್
ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ. ಅವರು ಪುತ್ತೂರು ಎಎಸ್‍ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರಕರಣವನ್ನು ಭೇದಿಸಿದ ಬಗ್ಗೆ
ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತಪಟ್ಟ ದಂಪತಿಗಳು. ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದು, ಶುಕ್ರವಾರ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದರು. ಈ ವೇಳೆ ಕರಣಿಕರ ಮನೆಗೆ ಹೋಗುವ ಕಾಲುದಾರಿಯಲ್ಲಿ ಮುರಿದು
ಬಂಟ್ವಾಳ: ಇರಾ ಗ್ರಾಮದ ಕುರಿಯಾಡಿ ತೋಟ ನಿವಾಸಿ ಸದಾಶಿವ ಶೆಟ್ಟಿ (80) ಗುರುವಾರ ಸಂಜೆ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲದಿನಗಳ ಹಿಂದೆ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು ಸಂಜೆ 6ರ ಹೊತ್ತಿಗೆ ಹ್ರದಯಘಾತದಿಂದ ಕೊನೆಯುಸಿರೆಳೆದರು. ಊರಿನಲ್ಲಿ ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದು ಬಳಿಕ ಸ್ವಂತ ಉದ್ಯಮವನ್ನು ಅರಸಿ ಮುಂಬೈಗೆ ತೆರಳಿ ಸುದೀರ್ಘವಾಗಿ ಅಲ್ಲೇ ಕುಟುಂಬದೊಂದಿಗೆ




























