ಮಂಗಳೂರು: ಎಂಆರ್‌ಪಿಎಲ್‌ನಿಂದ ಒಂದು ಕೋಟಿ ರೂ. ಆರೋಗ್ಯ ನೆರವು

MANGALURU (V4NEWS ) : ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಒಂದು ಕೋಟಿ ರೂಪಾಯಿ ಸಹಾಯಧನ ನೀಡಿದೆ. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡ್ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್ ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಶ್ಯಾಮ್ ಪ್ರಸಾದ್ ಕಾಮತ್ ಮುಂಡ್ಕೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೂಲಕ ಹಸ್ತಾಂತರಿಸಿದ್ದಾರೆ. ‘
ಈ ಹಣವನ್ನು ಜಿಲ್ಲಾ ಆರೋಗ್ಯ ಇಲಾಖೆ ವಿಟ್ಲ, ಸುಳ್ಯ, ಬೆಳ್ತಂಗಡಿ, ಪುತ್ತೂರು ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿರುವ ಪುನರ್ವಸರಿ ಕೇಂದ್ರಗಳಿಗೆ ವೈದ್ಯಕೀಯ ವ್ಯವಸ್ಥೆಗಳಿಗಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.ಈ ಸಂದರ್ಭದಲ್ಲಿ ಎಂಆರ್‌ಪಿಎಲ್‌ನ ಚೀಪ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್, ಎಂಡೋಸಲ್ಫಾನ್ ಪೀಡಿತ ಜನರಲ್ ನೋಡಲ್ ಅಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್, ಎಂಆರ್‌ಪಿಎಲ್ ಜಿಜಿಎಂ ಎಚ್. ಆರ್. ಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
