Home Posts tagged V4News (Page 405)

ಮಕ್ಸೂದ್ ಕೈಚಳಕದಿಂದ ಮೂಡಿಬಂದ ವಿವಿಧ ಕಲಾಕೃತಿ

ಮಂಜೇಶ್ವರ : ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಹಾಗೂ ಪೋಷಣೆ ಸಿಕ್ಕರೆ ಮಕ್ಕಳು ನ್ನಷ್ಟು ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಬಿ.ಎಸ್ ನಗರದ ಭಿನ್ನ ಚೇತನರಾಗಿರುವ ಕೆ.ನಾಸರ್ ಹಾಗೂ ಜುಬೈದ ದಂಪತಿಗಳ ಪುತ್ರ ಅಬೂಬಕ್ಕರ್ ಮಕ್ಸೂದ್. ಉದ್ಯಾವರ ಅಲ್ ಸಖಾಫ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ತನ್ನ ಕೈ ಚಳಕದಿಂದ ಈಗಾಗಲೇ

ಸ್ಪೀಕರ್ ಕ್ಷೇತ್ರದಲ್ಲಿ ಜನರ ಸಂಕಷ್ಟ ಕೇಳುವವರು ಇಲ್ಲ ; ಮನವಿ ಕೊಡಲು ಹೋದರೆ ಅಧಿಕಾರಿಗಳೇ ನಾಪತ್ತೆ

ಸ್ಪೀಕರ್ ಕ್ಷೇತ್ರವಾದ ಉಳ್ಳಾಲದ ನಗರ ಸಭೆ ಕಚೇರಿಗೆ ಹೋದರೆ ಜನರ ಸಂಕಷ್ಟ ಕೇಳುವವರೇ ಇಲ್ಲ.ಕನಿಷ್ಠ ಮನವಿ ಸ್ವೀಕರಿಸಲು ಅಲ್ಲಿನ ಅಧಿಕಾರಿಗಳೇ ನಾಪತ್ತೆಯಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಆಟೋರಿಕ್ಷಾ ಪಾರ್ಕ್ ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿದ್ದು,ಸದ್ಯಕ್ಕೆ ಈ ಪಾರ್ಕ್ ತೀರಾ ಅವ್ಯವಸ್ಥೆಗಳಿಂದ ಕೂಡಿದೆ. ರಿಕ್ಷಾ ಪಾರ್ಕ್ ಬಳಿಯಲ್ಲೇ ಕಳೆದ ಒಂದು ತಿಂಗಳಿನಿಂದ ಡ್ರೈನೇಜ್ ತ್ಯಾಜ್ಯ ಹರಿದಾಡುತ್ತಿದ್ದು ದುರ್ನಾತದಿಂದ ಅಲ್ಲಿ ನಿಲ್ಲಲು

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವರ್ಗಾವಣೆ

ಸುಳ್ಯ: ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಉಡುಪಿ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ‌ ನವೀನ್ ಚಂದ್ರ ಅವರು ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ರಾಜ್ಯದಲ್ಲಿ 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆ.1ರಂದು ಆದೇಶ ಮಾಡಿದೆ ಎಂದು ತಿಳಿದು ಬಂದಿದೆ.

ಮಂಜೇಶ್ವರ: ಬೇಕೂರು ಶಾಲೆಯ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಜೇಶ್ವರ : ರ್‍ಯಾಗಿಂಗ್ ಎನ್ನುವುದು ಮಾನವ ಹಕ್ಕುಗಳ ದುರುಪಯೋಗದ ವ್ಯವಸ್ಥಿತ ರೂಪವಾಗಿದೆ. ವಿಪರೀತ ಕಿರುಕುಳ ನೀಡುವುದರ ಜೊತೆಗೆ ಮನಸ್ಸಿನಲ್ಲಿ ಭಯವನ್ನು ಸೃಷ್ಟಿ ಮಾಡುತ್ತಿರುವ ರ್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುತ್ತಿರುವ ಮಧ್ಯೆಯೇ ಬೇಕೂರು ಕುಂಬಳೆ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಯನ್ನು ಬಸ್ಸು ನಿಲ್ದಾಣದಲ್ಲಿ ಹಿಗ್ಗಾ ಮಗ್ಗಾ ಥಳಿಸಿ ಹಲ್ಲೆ ಗೈದು ಗಾಯಗೊಳಿಸಲಾಗಿದೆ. ಪೆರ್ಮುದೆ

ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ

ಬಂಟ್ವಾಳ: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಆಕ್ಷೇಪ ಅರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಂಗೆ ದೂರು ನೀಡಲಾಗಿದೆ. ಆರ್.ಎಸ್.ಎಸ್.ಪ್ರಮುಖರಾಗಿರುವ ಕಲ್ಲಡ್ಕ ಶ್ರೀರಾಮವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ

ಡ್ರಗ್ಸ್ ಪೆಡ್ಲರ್‍ಗಳನ್ನು ಗೂಂಡಾಕಾಯ್ದೆಯಡಿ ಬಂಧಿಸಿ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ

ಮಂಗಳೂರಿನಲ್ಲಿ ಮಾದಕ ವಸ್ತು ಹಾವಳಿ ವಿಪರೀತ ಹೆಚ್ಚಾಗುತ್ತಿದ್ದು, ಈ ಬಗ್ಗೆ ಡ್ರಗ್ಸ್ ಪೆಡ್ಲರ್‍ಗಳನ್ನು ಗೂಂಡಾಕಾಯ್ದೆ ಅಡಿಯಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ನಗರದಲ್ಲಿ ನಡೆಯುತ್ತಿರುವ ಅಭಿಯಾನದ ಬಗ್ಗೆ

ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ : ಸಿಎಂ

ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಭರ್ತಿಯಾಗಬೇಕಾಗಿದೆ. ಅವುಗಳಲ್ಲಿ ಮುಖ್ಯವಾಗಿ ಶಿಕ್ಷಕರ ಹುದ್ದೆ ಗಳು ಖಾಲಿ ಇವೆ. ಬಹುತೇಕವಾಗಿ ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ ಇಲಾಖೆಗಳಲ್ಲಿ ನೇಮಕಾತಿ ನಡೆಯುವುದರಿಂದ ಮೀಸಲಾತಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದ.ಕ. ಜಿಲ್ಲಾ

ಉಳ್ಳಾಲ: ನಿವೃತ್ತ ಯೋಧನಿಂದ ಮಹಿಳಾ ಪೇದೆಗೆ ಕಿರುಕುಳ

ಉಳ್ಳಾಲ: ಮಹಿಳಾ ಪೊಲೀಸ್ ಪೇದೆಗೆ ನಿವೃತ್ತ ಯೋಧನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕುಂಪಲದ ಬಗಂಬಿಲ ಎಂಬಲ್ಲಿ ನಡೆದಿದೆ. ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ಕಿರುಕುಳ ನೀಡಿದಾತ. ಠಾಣೆಯೊಂದರ ಮಹಿಳಾ ಪೇದೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ನಿವೃತ್ತ ಯೋಧ ಪ್ರಶಾಂತ್, ಆಕೆ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣ ಬೊಬ್ಬಿಟ್ಟಾಗ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 5ನೇ ಆರೋಪಿಯ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 5ನೇ ಆರೋಪಿಯನ್ನು ವಿಟ್ಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೇರಳದ ಬಾಯಾರು ಬಳ್ಳೂರು ನಿವಾಸಿ ರಾಜ ಯಾನೆ ರಾಜೇಶ್(26) ಬಂಧಿತ ಆರೋಪಿಯಾಗಿದ್ದಾನೆ. ನೊಂದ ಯುವತಿ ಐದು ಮಂದಿಯ ಹೆಸರನ್ನು ಹೇಳಿದ್ದು, ಅಕ್ಷಯ್ ದೇವಾಡಿಗ, ಸುಕುಮಾರ ಬೆಳ್ಚಡ, ಜಯಪ್ರಕಾಶ್, ಮತ್ತು ಕಮಲಾಕ್ಷ ಎಂಬವರನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ರಾಜನನ್ನು ಮಂಗಳವಾರ ಬಂಧಿಸಿದ್ದು, ಈ ಪ್ರಕರಣದಲ್ಲಿ ಒಟ್ಟು ಐದು

ಬುಲ್ಲರ್ ಇಂಡಿಯಾ ಜೊತೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಪ್ಪಂದ

ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ಕೃಷಿ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಬುಲ್ಲರ್ ಇಂಡಿಯಾ ಕಂಪನಿ ಜೊತೆ ಒಡಂಬಡಿಕೆಗೆ ಸಹಿ ಹಾಕಿತು. ಬುಲ್ಲರ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಗೋಖಲೆ ಹಾಗೂ ಕಂಪೆನಿಯ ವೆಂಕಟೇಶ್ ಮತ್ತು ರವೀಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃಷಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್, ಮೆಕ್ಯಾನಿಕಲ್