Home Posts tagged V4News (Page 476)

ಬಜರಂಗದಳ ಕಾರ್ಯಕರ್ತ ರೂಪೇಶ್ ಪೂಜಾರಿ ಸಾವು

ರೂಪೇಶ್ ಪೂಜಾರಿ 3 ದಿನಗಳ ಹಿಂದೆ ಹೊಟ್ಟೆನೋವಿನಿಂದ ಮಂಗಳೂರಿನ ವೆನ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದಿತ್ಯವಾರ ಅವರು ತೀರಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವೈದರು ಚಿಕಿಸ್ತೆ ನೀಡಿಲ್ಲ ನಿರ್ಲಕ್ಷ್ಯ ತೋರಿದರು ಎಂದು ಭಜರಂಗದಳದ ಕಾರ್ಯಕರ್ತರು ಆರೋಪಮಾಡಿದರು. ಅಲ್ಲದೆ ಬಜರಂಗದಳ ಮತ್ತು ವೆನ್ಲೋಕ್ ವೈದರ ನಡುವೆ ಮಾತಿನಚಕಮಕಿ ನಡೆಯಿತ್ತು. ವೈದ

ಈ ಬಾರಿಯ ಚುನಾವಣೆ ನಮಗೆ ಪಾಠ ಕಲಿಸಿದೆ : ಮಾಜಿ ಸಚಿವ ಸುನಿಲ್ ಕುಮಾರ್

ಕಾರ್ಕಳ, ಸಜ್ಜನಿಕೆಗೆ ಬೆಲೆಕೊಟ್ಟವರು ನಾವು ಅಭಿವೃದ್ಧಿ ಮಾಡಿ ಎಲ್ಲವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆಂದು ಎಂದು ಕೊಂಡೆವು. ಆದರೆ ಅದು ಒಳ್ಳೇದಲ್ಲ ಎನ್ನುವುದು ಚುನಾವಣೆ ನಮಗೆ ಪಾಠ ಕಲಿಸಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು. ಬಿಜೆಪಿ ಕಾರ್ಕಳ ವತಿಯಿಂದ ನಗರದ ಬಂಡಿ ಮಠದಲ್ಲಿ ನಡೆದ ಕ್ಷೇತ್ರ ಮತದಾರರಿಗೆ ವಂದನೆ ಹಾಗೂ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ, ಅವರು ಮಾತನಾಡಿದರು. ನಾನು ಚಿಕ್ಕವನಿರುವಾಗಲೇ ಹೋರಾಟ

ಬಿಜೆಪಿಗೆ ಹೀನಾಯ ಸೋಲು : ನಳಿನ್, ಡಿವಿಎಸ್ ಶ್ರದ್ಧಾಂಜಲಿ ಬ್ಯಾನರಿಗೆ ಚಪ್ಪಲಿ ಹಾರ

ಪುತ್ತೂರು: ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ. ಸದಾನಂದ ಗೌಡ ಅವರೇ ಬಿಜೆಪಿ ಸೋಲಿಗೆ ಕಾರಣ ಎಂಬ ಒಕ್ಕಣೆಯ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿದೆ.ಪುತ್ತೂರು ಸರ್ಕಾರಿ ಬಸ್ ನಿಲ್ದಾಣ ಮುಂಭಾಗ ಈ ಬ್ಯಾನರನ್ನು ಅಳವಡಿಸಿದ್ದು, ತವರು ಕ್ಷೇತ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂಗೆ ಸೋಲಿನ ಬಿಸಿ ತಟ್ಟುವಂತೆ ಮಾಡಲಾಗಿದೆ. ಭಾವಪೂರ್ಣ ಶ್ರದ್ಧಾಂಜಲಿ ಎಂದು ಬ್ಯಾನರ್ ಹಾಕಿ, ಅದರಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣ ಎಂಬ ಬರಹವನ್ನು

ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಹೊಡೆತ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ

ಮಂಜೇಶ್ವರ : ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶ ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಮರೆಯಲಾಗದ ಹೊಡೆತ ನೀಡಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಜನರ ದೈನಂದಿನ ಸಮಸ್ಯೆಗಳಿಗೆ ಕಿವಿಗೊಡದೆ, ಚುನಾವಣಾ ಸಮಯದಲ್ಲಿ ಕರ್ನಾಟಕದ ಮಣ್ಣಿಗೆ ವಕ್ಕರಿಸಿ ವಿವಿಧ ಗಿಮಿಕ್ ಮಾಡಿ, ಜನರ ಭಾವನೆಗಳೊಂದಿಗೆ ಆಟವಾಡುವ ಮೋದಿ,ಅಮಿತ್ ಶಾ, ಯೋಗಿ ಎಂಬ ದ್ವೇಷದ ಮಾರಾಟಗಾರರಿಗೆ ಜನರು ಸರಿಯಾದ ಉತ್ತರ

ಅಂಗರಗುಂಡಿ : ಗೂಡ್ಸ್ ರೈಲಿನಡಿ ಬಿದ್ದು ಎಮ್ಮೆಗಳ ದಾರುಣ ಸಾವು

ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಸಂಭವಿಸಿದೆ. ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆದಿದೆ. ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನಲ್ಲಿ ಡೈಮಂಡ್ಸ್ ಉತ್ಸವ

ಉಡುಪಿ :ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಡೈಮಂಡ್ಸ್ ಉತ್ಸವವನ್ನು ಅನಾವರಣಗೊಳಿಸಲಾಯಿತು. ಮೇ 13 ರಿಂದ 22 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಚಿನ್ನ ಮತ್ತು ವಜ್ರಾಭರಣಗಳು ಹಾಗೂ ಇತರೆ ಉತ್ಪನ್ನಗಳ ಸಂಗ್ರಹ ಹೊಂದಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀಮತಿ ವರಲಕ್ಷ್ಮಿ ಮಾತನಾಡಿ ಡೈಮಂಡ್ಸ್ ನಲ್ಲಿ ಅತುತ್ತಮ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,ಶ್ರೀಮತಿ ಶಾಲಿನಿ ಸುರೇಶ್ ಮಾತನಾಡಿ ಗುಣಮಟ್ಟ ಹಾಗೂ ಪಾರದರ್ಶಕತೆ ಬಗ್ಗೆ ಮೆಚ್ಚುಗೆ ವ್ಯಕ್ತ

ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆದರೆ ಪ್ರತಿಭಟನೆ : ಪ್ರಮೋದ್ ಮುತಾಲಿಕ್

ಕಾರ್ಕಳವನ್ನು ಕೇಂದ್ರವನ್ನಾಗಿ ಮಾಡಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ರಾಜ್ಯದಲ್ಲಿ ಹಿಂದೂ ಸಂಘಟನೆ ಹಾಗೂ ಹಿಂದುಗಳಿಗೆ ವಿಶ್ವಾಸ ಬರುವ ಹಾಗೆ ಅವರ ಜೊತೆ ಇರುತ್ತೇನೆ ಹಿಂದುತ್ವದ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ಕಾರ್ಕಳದ ತಮ್ಮ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಭ್ರಷ್ಟಾಚಾರದ ಸಂಬಂಧಪಟ್ಟದ್ದನ್ನು ಉಲ್ಲೇಖ ಮಾಡುತ್ತಾ ಬಂದಿದ್ದೇನೆ ಅದು ಅರ್ಧಕ್ಕೆ ನಿಂತಿದೆ

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಉದ್ಯಮಿಯಿಂದ ತನ್ನ ಕಾರಿನಲ್ಲಿ ಮಹಿಳಗೆ ಲೈಂಗಿಕ ಕಿರುಕುಳ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದ ಘಟನೆ. ಕಾರಿನಲ್ಲಿ ಕಿರುಕುಳ ನೀಡುವಾಗ ಕಿರುಚಾಡಿ ಕಾರಿನಿಂದ ಹೊರಬಂದ ಯುವತಿ.ಬೈಕ್ ನಲ್ಲಿ ಬಂದ ಯುವಕರಿಂದ ಮಹಿಳೆಯ ರಕ್ಷಣೆ.ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ ಹೆಗ್ಡೆ ಮೇಲೆ ಲೈಂಗಿಕ ಕಿರುಕುಳ ಆರೋಪ.ಉಜಿರೆಯಲ್ಲಿರುವ ಮಹಾವೀರ ಟೆಕ್ಸ್ ಟೈಲ್ ಹಾಗೂ ಧರ್ಮಸ್ಥಳದಲ್ಲಿರುವ ಮಹಾವೀರ ಸೂಪರ್ ಮಾರ್ಕೆಟ್.20 ವರ್ಷದ ವಿವಾಹಿತ

ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಶೀಘ್ರದಲ್ಲಿ ಅನುಷ್ಠಾನಕ್ಕೆ : ಯು.ಟಿ ಖಾದರ್

ಉಳ್ಳಾಲ: ಸಮಾಜವನ್ನು ಒಗ್ಗಟ್ಟು ಮಾಡುವ ಮೂಲಕ ಬಿಕ್ಕಟ್ಟು ಮಾಡಲು ಬಿಡದೆ ಮುಂದಿನ ಸರಕಾರ ಕಾರ್ಯಾಚರಿಸಲಿದ್ದು, ಸರ್ವ ಧರ್ಮದವರನ್ನು ಪ್ರೀತಿಸಿಕೊಂಡು ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಅತಿಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಬೈಕ್ ರ್‍ಯಾಲಿ ಮತ್ತು ರೋಡ್ ಷೋನಲ್ಲಿ ಭಾಗವಹಿಸಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾ ಭೇಟಿ ನೀಡಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಶೋಕ್ ಕುಮಾರ್ ರೈ ಭೇಟಿ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರಿಗೆ ಆಗಮಿಸಿದ ಅಶೋಕ್ ಕುಮಾರ್ ರೈ ಅವರಿಗೆ ಕಬಕದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಅಲ್ಲಿಂದ ನೇರವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಅಲ್ಲಿಯೂ ಅಶೋಕ್ ಕುಮಾರ್ ರೈ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳು