ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನಲ್ಲಿ ಡೈಮಂಡ್ಸ್ ಉತ್ಸವ
ಉಡುಪಿ :ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಡೈಮಂಡ್ಸ್ ಉತ್ಸವವನ್ನು ಅನಾವರಣಗೊಳಿಸಲಾಯಿತು. ಮೇ 13 ರಿಂದ 22 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಚಿನ್ನ ಮತ್ತು ವಜ್ರಾಭರಣಗಳು ಹಾಗೂ ಇತರೆ ಉತ್ಪನ್ನಗಳ ಸಂಗ್ರಹ ಹೊಂದಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀಮತಿ ವರಲಕ್ಷ್ಮಿ ಮಾತನಾಡಿ ಡೈಮಂಡ್ಸ್ ನಲ್ಲಿ ಅತುತ್ತಮ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,
ಶ್ರೀಮತಿ ಶಾಲಿನಿ ಸುರೇಶ್ ಮಾತನಾಡಿ ಗುಣಮಟ್ಟ ಹಾಗೂ ಪಾರದರ್ಶಕತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಹಾಗೂ ಶ್ರೀಮತಿ ಲತಾ ಸುವರ್ಣ ರವರು ಚಿನ್ನದ ದರ,ವಿವಿಧತೆ,ನಂಬಿಕೆಯ,ಹಾಗೂ ಗ್ರಾಹಕ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ 10 ದೇಶಗಳಲ್ಲಿ 300ಕ್ಕೂ ಹೆಚ್ಚಿನ ಮಳಿಗೆ ಹೊಂದಿದೆ. ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಘ್ನೇಶ್ ಸ್ವಾಗತಿಸಿ ವಂದಿಸಿದರು.
ಮೈನ್‍ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು, `ಡಿವೈನ್‍ನಲ್ಲಿ ಭಾರತೀಯ ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ. `ಪ್ರಿಶಾ’ ದಲ್ಲಿ ರುಬಿ, ಎಮರಾಲ್ದ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ಎಥಿನಿಕ್ಸ್ ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. `ಎರ’ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ,
ವಿಶೇಷ ಕೊಡುಗೆಯಾಗಿ ಚಿನ್ನದ ಮೇಲೆ ಫೇರ್ ಪ್ರೈಸ್ ನೀಡಲಾಗುತ್ತಿದೆ ಎಂದು ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ತಿಳಿಸಿದರು.