Home Posts tagged V4News (Page 502)

ಕಾಪು ಪಡು ವ್ಯಾಪ್ತಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯೊಂದಿಗೆ ಗುರ್ಮೆ ಮತ ಯಾಚನೆ

ಕಾಪು ಪುರಸಭೆ ವ್ಯಾಪ್ತಿಯ ಕಾಪು ಪಡು ಗ್ರಾಮ ವ್ಯಾಪ್ತಿಯ ರಾಮನಗರ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರ ಚುನಾವಣೆ ಉಸ್ತುವಾರಿ ಸುಲೋಚನಾ ಭಟ್, ಹಿರಿಯರಾದ

ಮೂಡುಬಿದಿರೆ : ಏಳೂವರೆ ಶತಮಾನಕ್ಕೂ ಮಿಕ್ಕಿದ ಇತಿಹಾಸವಿರುವ ಕೆರೆಗೀಗ ಪುನರುತ್ಥಾನದ ಸಂಭ್ರಮ

ಮೂಡುಬಿದಿರೆ: ಹದಿನೆಂಟು ಕೆರೆ, ಬಸದಿ,ದೇವಸ್ಥಾನಗಳು, ಕೇರಿಗಳು ಹೀಗೆ ಐತಿಹಾಸಿಕ ಮಹತ್ವವಿರುವ ಜೈನಕಾಶಿ, ಜ್ಞಾನಕಾಶಿ ಮೂಡುಬಿದಿರೆಯಲ್ಲಿ ಪ್ರಾಚೀನ ಕೆರೆಗಳದ್ದೇ ವಿಶೇಷತೆ. ಇದೀಗ ಬಹುಕಾಲದ ಕಾಯುವಿಕೆಯ ಬಳಿಕ ಶತಮಾನಗಳಿಂದ ಗಿಡಗಂಟಿಪೆÇದೆಗಳಲ್ಲಿ ಮರೆಯಾಗಿ ಹೂಳು ತುಂಬಿಕೊಂಡಿದ್ದ ದೊಡ್ಮನೆ ಶ್ರೀ ಚಂದ್ರಶೇಖರ ದೇವಸ್ಥಾನದ ಸುಂದರ ಕೆರೆ ಜೀಣೋದ್ಧಾರಕ್ಕೆ ತೆರೆದುಕೊಂಡಿದೆ. ಇಲ್ಲಿನ ಪ್ರಾಂತ್ಯ ಗ್ರಾಮದ ದೊಡ್ಮನೆ ರಸ್ತೆ ಕೊನೆಯಲ್ಲಿರುವ ಶ್ರೀ ಚಂದ್ರಶೇಖರ

ಕಾಪುವಿನ ವಿವಿಧೆಡೆ ವಿನಯ ಕುಮಾರ್ ಸೊರಕೆ ಮತಯಾಚನೆ

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಹಿರಿಯಡ್ಕ ಬೊಮ್ಮಾರುಬೆಟ್ಟು ಪಾಪುಜೆ ದರ್ಖಾಸ್ತು ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ ಮತಭೇಟೆ ನಡೆಸಿದರು. ಮತಯಾಚನೆಯ ವೇಳೆ ಪಂಚನಬೆಟ್ಟು, ಬಸ್ತಿ ವ್ಯಾಪ್ತಿಯಲ್ಲಿ ಮತದಾರರು ಕುಡಿಯುವ ನೀರಿನ ಸಮಸ್ಯೆ ಯನ್ನು ತಿಳಿಸಿದ್ದು ಸೊರಕೆಯವರು ಕೂಡಲೇ ಅಧಿಕಾರಿಗಳಿಗೆ ಸ್ಥಳದಲ್ಲೇ ಕಾಲ್ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ರು.ಗುಡ್ಡೆಯಂಗಡಿಯಲ್ಲಿ ಮತ ಪ್ರಚಾರದ

ಬಂಟ ಸಾಂಸ್ಕøತಿಕ ವೈಭವ-2023

ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಇದರ 9ನೇ ವರ್ಷದ ಸಂಭ್ರಮದ ಪ್ರಯುಕ್ತ ಬಂಟ ಸಾಂಸ್ಕøತಿಕ ವೈಭವ 2023 ಬಂಟ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಗರದ ಉರ್ವಾಸ್ಟೋರ್‍ನ ಅಂಬೇಡ್ಕರ್ ಭವನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೆರ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷರಾದ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವು

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ; ಮ್ಯಾಪ್ಸ್ ಪಿಯು ಕಾಲೇಜು ಅನನ್ಯಾಗೆ ರಾಜ್ಯದಲ್ಲಿ 10ನೇ ರ್‍ಯಾಂಕ್

2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮ್ಯಾಪ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಮ್ಯಾಪ್ಸ್ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿದ್ದು, ಕುಮಾರಿ ಅನನ್ಯಾ ಎ. 600ರಲ್ಲಿ 588 ಅಂಕಗಳನ್ನು ಪಡೆದು ರಾಜ್ಯದಲ್ಲಿ ಹತ್ತನೇ ರ್‍ಯಾಂಕ್ ಪಡೆದಿರುತ್ತಾರೆ. ಕಾಲೇಜಿಗೆ ಶೇ.99 ಫಲಿತಾಂಶ ಲಭಿಸಿದ್ದು, ಶೇ.50 ವಿಶಿಷ್ಟ ಶ್ರೇಣಿ ಹಾಗು ಶೇ.46 ಪ್ರಥಮ ಶ್ರೇಣಿಯಲ್ಲಿ

ಪುತ್ತೂರಿನ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ.

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದರು. ವೇದನಾಥ್ ಸುವರ್ಣ, ಸತೀಶ್ ಕೆಡೆಂಜಿ, ಡಾ. ರಾಜಾರಾಮ್, ಜಯಪ್ರಕಾಶ್ ಬದಿನಾರು ಮತ್ತಿತರ ನಾಯಕರೊಂದಿಗೆ ಆಗಮಿಸಿದ ಅಶೋಕ್ ರೈ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.

ಉದ್ಯಾವರ ಗ್ರಾ.ಪಂ ಸದಸ್ಯ ಮಿಥೇಶ್ ಪೂಜಾರಿ ಕಾಂಗ್ರೆಸ್ ನಿಂದ ಬಿಜೆಪಿ ತೆಕ್ಕೆಗೆ

ಕಾಪು ಬಿಜೆಪಿ ಕಚೇರಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ 6ನೇ ವಾರ್ಡನ್ನು 2 ಬಾರಿ ಪ್ರತಿನಿಧಿಸಿರುವ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉದ್ಯಾವರ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥೇಶ್ ಪೂಜಾರಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡರು. ಶಾಸಕ ಲಾಲಾಜಿ ಮೆಂಡನ್ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ

ಕರಾವಳಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ

ಕರಾವಳಿಯಲ್ಲಿ ಇಂದು ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ನಗರದ ಪ್ರಮುಖ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಸಂಭ್ರಮವನ್ನು ವಿನಿಮಯಮಾಡಿಕೊಂಡರು. ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು. ನಗರದ ಬಾವುಟಗುಡ್ಡದ ಈದ್ಗಾ ಜುಮಾ

ಮಂಜೇಶ್ವರದೆಲ್ಲೆಡೆ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಮಂಜೇಶ್ವರ: ಪವಿತ್ರ ರಂಜಾನಿನ 30 ವೃತ್ತಗಳನ್ನು ಆಚರಿಸಿ ಮಂಜೇಶ್ವರದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದ ಈದುಲ್ ಫಿತ್ರ್ ಆಚರಿಸಿದರು. ಮಂಜೇಶ್ವರದ ವಿವಿಧ ಮಸೀದಿ, ಈದ್ಗಾ ಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಷಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಬೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತರಲಾಯ್ತು. ತೂಮಿನಾಡು ಮಸ್ಜಿದ್ ನೂರ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಅಶ್ಪಾಕ್ ಮಚ್ಚಂಪ್ಪಾಡಿ ಹಾಗೂ