ಕಾಪುವಿನ ವಿವಿಧೆಡೆ ವಿನಯ ಕುಮಾರ್ ಸೊರಕೆ ಮತಯಾಚನೆ

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಹಿರಿಯಡ್ಕ ಬೊಮ್ಮಾರುಬೆಟ್ಟು ಪಾಪುಜೆ ದರ್ಖಾಸ್ತು ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ ಮತಭೇಟೆ ನಡೆಸಿದರು. ಮತಯಾಚನೆಯ ವೇಳೆ ಪಂಚನಬೆಟ್ಟು, ಬಸ್ತಿ ವ್ಯಾಪ್ತಿಯಲ್ಲಿ ಮತದಾರರು ಕುಡಿಯುವ ನೀರಿನ ಸಮಸ್ಯೆ ಯನ್ನು ತಿಳಿಸಿದ್ದು ಸೊರಕೆಯವರು ಕೂಡಲೇ ಅಧಿಕಾರಿಗಳಿಗೆ ಸ್ಥಳದಲ್ಲೇ ಕಾಲ್ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ರು.ಗುಡ್ಡೆಯಂಗಡಿಯಲ್ಲಿ ಮತ ಪ್ರಚಾರದ ಬಳಿಕ ಕಲ್ಲುಗುಡ್ಡೆ ಪಂಚ ದೈವಿಕ ನಾಗಬ್ರಹ್ಮಸ್ಥಾನ, ಕಾಪು ಕೋಟ್ಯಾನ್ ಮೂಲಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹಿರಿಯಡ್ಕ ಒಂತಿಬೆಟ್ಟು ಬಾಲಾಜಿ ಎಣ್ಣೆ ಮಿಲ್ ಗೆ ಭೇಟಿ ನೀಡಿ, ಮಿಲ್ ಕಾಮಿರ್ಕರ ಸಂಕಷ್ಟಗಳನ್ನು ಆಲಿಸಿ, ಬಿಜೆಪಿ ಸರ್ಕಾರದ ಬೆಲೆ ಏರಿಕೆ ಬಗ್ಗೆ ಖಂಡಿಸಿ ಮಾತಾಡಿದರು. ಬಡವರ ಪರ ಇರುವ ಕಾಂಗ್ರಸ್ ಅನ್ನು ಬೆಂಬಲಿಸುವಂತೆ ವಿನಂತಿಸಿದರು.ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಲಾಲ್, ಚರಣ್ ವಿಠಲ್ ಕುದಿ,ಜಯವಂತರಾವ್, ರವೀಂದ್ರ ಪೂಜಾರಿ, ಮಾಲತಿ ಆಚಾರ್ಯ, ಲತಾ, ಚಂದ್ರಶೇಖರ, ಚಂದ್ರಶೇಖರ್ ಗುಡ್ಡೆಯಂಗಡಿ, ಸರೋಜಿನಿಶೆಟ್ಟಿ, ಗುಣಪಾಲ್, ಸಂದೇಶ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಗುರುದಾಸ ಭಂಡಾರಿ, ಸಹನಾ ಕಾಮತ್, ಪ್ರಕಾಶ್ ಶೆಟ್ಟಿ, ಗಣೇಶ್ ನಾಯಕ್, ದಯಾನಂದ ನಾಯಕ್, ಸುಂದರ ಪೂಜಾರಿ, ರಾಜು ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.