Home Posts tagged V4News (Page 511)

ಏ.18ಕ್ಕೆ ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಕಾರ್ಯಕರ್ತರ ಆಶೀರ್ವಾದ, ಮುಖಂಡರ ಬೆಂಬಲದೊಂದಿಗೆ ಕಾಪು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸುವ ಅವಕಾಶ ದೊರಕಿದ್ದು, ಆ ನಿಟ್ಟಿನಲ್ಲಿ ಏ 18ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂಬುದಾಗಿ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಅವರು ಕಾಪು ರಾಜೀವ ಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಏ 18 ರ ಬೆಳಿಗ್ಗೆ 10 ಗಂಟೆಗೆ

ಮಂಗಳೂರು : ಉದ್ಯಮಿ ವಿವೇಕ್ ರಾಜ್ ಮನೆ ಮೇಲೆ ಐ.ಟಿ.ದಾಳಿ

ಮಂಗಳೂರಿನ ಕಾಂಗ್ರೆಸ್‌ ಮುಖಂಡನ ಮನೆ ಮೇಲೆ‌ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಇಂದು ಮುಂಜಾನೆ ಕಾಂಗ್ರೆಸ್‌ ಮುಖಂಡ ವಿವೇಕ್ ರಾಜ್ ಪೂಜಾರಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.  ಬೆಳಗ್ಗೆ ಸುಮಾರು 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ

ಐಸಿಎಸ್ ಐ ನಿಂದ ಕಂಪನಿಗಳ ವ್ಯಾಜ್ಯ ಇತ್ಯರ್ಥಕ್ಕಾಗಿ ಬೆಂಗಳೂರಿನಲ್ಲಿ ಮಧ್ಯಸ್ಥಿಕೆ ಕೇಂದ್ರ ತೆರೆಯಲು ನಿರ್ಧಾರ: ಸಿಎಸ್ ಮನೀಶ್ ಗುಪ್ತಾ

ಬೆಂಗಳೂರು : ಭಾರತೀಯ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯಿಂದ ಕಂಪೆನಿಗಳ ವ್ಯಾಜ್ಯ ಇತ್ಯರ್ಥಕ್ಕಾಗಿ ಬೆಂಗಳೂರಿನಲ್ಲಿ “ಮಧ‍್ಯಸ್ಥಿಕೆ ಕೇಂದ್ರ” ತೆರೆಯಲು ನಿರ್ಧರಿಸಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಕಂಪೆನಿ ಸೆಕ್ರೆಟರೀಸ್ ನ ನೂತನ ಅಧ್ಯಕ್ಷ ಸಿಎಸ್ ಮನೀಶ್ ಗುಪ್ತಾ ಹೇಳಿದ್ದಾರೆ. ಬೆಂಗಳೂರಿನ ಐಸಿಎಸ್ಐ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ನಲ್ಲಿ

ಉಳ್ಳಾಲ: ಪಜೀರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಜನತೆ ಚಿರತೆಯೊಂದನ್ನ ಕಂಡಿದ್ದು ಈ ಕುರಿತು ಅರಣ್ಯ ಇಲಾಖೆಗೆ ನೀಡಿದ ಮಾಹಿತಿ ಮೇರೆಗೆ ಚಿರತೆ ಹಿಡಿಯಲು ಬೋನು ಇಡಲಾಗಿದೆ. ಪಜೀರು ಗ್ರಾಮದ ಅಂಗಡಿಕೆರೆ, ಗುಂಪಕಲ್ಲು, ಉಜ್ಜೊಟ್ಟು, ಮಲಾರ್ ಪರಿಸರದಲ್ಲಿ ಎ.13 ರಂದು ಸಂಜೆ ಹೊತ್ತಿಗೆ  ಚಿರತೆ ಮರಿಗಳನ್ನು ಕಂಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ದೂರಿಕೊಂಡಿದ್ದರು. ಚಿರತೆ ಗುಮ್ಮದಿಂದ ಸ್ಥಳೀಯರು, ಮಕ್ಕಳು, ದೊಡ್ಡವರು ಪ್ರದೇಶದಲ್ಲಿ ಆತಂಕದಿಂದಲೇ ಸುತ್ತಾಡುತ್ತಿದ್ದಾರೆ.

ಉಳ್ಳಾಲ: ನಿದ್ರೆ ಮಂಪರಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಉಳ್ಳಾಲ:  ನಿದ್ರೆ ಮಂಪರಿನಲ್ಲಿದ್ದ ವೃದ್ಧರೋರ್ವರು ಬಾವಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಘಟನೆ ದೃಶ್ಯ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ(65) ಮೃತ ದುರ್ದೈವಿ ವಾಲ್ಟರ್ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು. ರಾತ್ರಿ 7.23 ರ ಹೊತ್ತಿಗೆ ವಾಲ್ಟರ್ ಅವರು ಮನೆಯಂಗಳದ ಬಾವಿಯ

ಶಾಸಕ ಸ್ಥಾನಕ್ಕೆ ಜಗದೀಶ ಶೆಟ್ಟರ್‌ ರಾಜೀನಾಮೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತೀವ್ರ ನೊಂದಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಜಗದೀಶ್ ಶೆಟ್ಟರ್ ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ತಮ್ಮ ಮೂರು ದಶಕಗಳ ಬಿಜೆಪಿಯೊಂದಿಗಿನ ಸಂಬಂಧಕ್ಕೆ ಜಗದೀಶ್ ಶೆಟ್ಟರ್ ವಿದಾಯ ಹಾಡಿದ್ದಾರೆ. ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ

ಕಾಮಿಡಿ ಪ್ರೀಮಿಯರ್‌‌ ಲೀಗ್ ಸೀಸನ್-4 ಪ್ರದರ್ಶನಕ್ಕೆ ಬಿ.ಸಿ.ರೋಡಿನಲ್ಲಿ ಚಾಲನೆ

ಬಂಟ್ವಾಳ: ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಕಾಮಿಡಿ ಪ್ರೀಮಿಯರ್‌ ಲೀಗ್ ಸೀಸನ್- 4 ಫರ್ ಫಾರ್ಮೆನ್ಸ್ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಕರಾವಳಿ ಭಾಗದಲ್ಲಿ ನಗುವಿಗೂ ಸ್ಟ್ಯಾಂಡರ್ಡ್ ಇದೆ. ಆದ್ದರಿಂದ ಹೊರ ಜಿಲ್ಲೆಯ ಹಾಸ್ಯ ಕಲಾವಿದರು ಕರಾವಳಿಯಲ್ಲಿ ಹಾಸ್ಯ ಪ್ರದರ್ಶನ ನೀಡಲು ಹಿಂದು ಮುಂದು ನೋಡುತ್ತಾರೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಿಎಂ ಹೆಚ್‌ ಡಿಕೆ ಭೇಟಿ 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ಮಾಜಿ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಪರವಾಗಿ ಗೌರವಿಸಿದರು. ಶನಿವಾರ ಸಂಜೆ ಅವರು ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ದುರ್ಗಾ ಪೂಜೆ ಸಲ್ಲಿಸಿದರು. ಧಾರ್ಮಿಕ ಹೋಮ ಹವನ ನಡೆದು ಅದರ

ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಟ್ರಸ್ಟಿಗಳ ವಿರುದ್ಧ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಆರೋಪ : ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು

ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಆಡಳಿತ ಮಂಡಳಿ ಟ್ರಸ್ಟಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಮತ್ತು ಆರೋಪ ಹೊರಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಅಡಿಗೆ ಬಾಲಕೃಷ್ಣ ಶೆಣೈ, ಟ್ರಸ್ಟಿಗಳಾದ ಸಾಹುಕಾರ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್ ಮತ್ತು ಜಗನ್ನಾಥ್ ಕಾಮತ್ ಈ ದೂರು

ಶಾಸಕ ರಾಜೇಶ್ ನಾಯ್ಕ್ ಅವರಿಂದ ನಾಮಪತ್ರ ಸಲ್ಲಿಕೆ : 35 ಕಿ.ಮಿ. ನಡೆದು ಬಂದ ದಂಪತಿ

ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ನಾಮಪತ್ರ ಸಲ್ಲಿಸಲು ಪೆÇಳಲಿ ಕ್ಷೇತ್ರದಿಂದ ಪಾದಾಯಾತ್ರೆಯ ಮೂಲಕ ಆಗಮಿಸುವ ಸುದ್ದಿ ತಿಳಿದ ದಂಪತಿ ತಮ್ಮ ಮನೆಯಿಂದ ಸುಮಾರು 35 ಕಿ.ಮಿ.ದೂರದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಪಕ್ಷದ ಅಭ್ಯರ್ಥಿಗೆ ಶುಭಾಶಯ ಕೋರಿದ ಘಟನೆ ಬಂಟ್ವಾಳದಲ್ಲಿ ನಡೆಯಿತು. ಬಡಗಕಜೆಕಾರು ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಪೂಜಾರಿ ತನ್ನ ಪತ್ನಿ ಚಂದ್ರಾವತಿ ಅವರ ಜೊತೆಗೂಡಿ ಕಜೆಕಾರಿನ ಮಹಾದೇಶ್ವರ ದೇವಸ್ಥಾನದಿಂದ