ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೊದಲು ಕನಸು ಕಂಡವರೇ ನಾವು ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದು, ಕಾಲೇಜು ಹೋರಾಟ ಅಭಿಯಾನ ಕಾಂಗ್ರೆಸ್ನ ಟೂಲ್ ಕಿಟ್ ಎಂದು ಆಪಾದಿಸಿದ್ದಾರೆ. ಒಂದು ವೇಳೆ ಬಿಜೆಪಿ ಮೆಡಿಕಲ್ ಕಾಲೇಜಿಗೆ ಮೊದಲು ಕನಸು
ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಜಿಲ್ಲಾ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಸುಧಾಕರ್ ಆಚಾರ್ಯ ಉದ್ಘಾಟಿಸಿದರು. ಅವರು ಮಾತನಾಡಿ ನಾವು ಶಕ್ತಿಯುತರಾದಾಗ ಸಂಘಟನೆಯು ಬಲಯುತವಾಗಿರುತ್ತದೆ. ಸಂಘಟನೆಯಲ್ಲಿ ಇರುವ ಜೊತೆಗೆ ಸಮಾಜದ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿ
ಬಹಳಷ್ಟು ಅಮಾಯಕರು ಪ್ರಾಣ ಕಳೆದುಕೊಂಡ ಉಚ್ಚಿಲದ ಪಣಿಯೂರು ತಿರುವು ಬಳಿಯ ಡೈವರ್ಷನ್ ಮುಚ್ಚುವ ಮೂಲಕ ನವಯುಗ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕೆಲ ವರ್ಷಗಳ ಹಿಂದೆ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಮುಂದಿರಿಸಿದ ಸಾರ್ವಜನಿಕರು, ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ವರಗೆ ಪಣಿಯೂರು ಕ್ರಾಸ್ ಬಳಿ ಡೈವರ್ಷನ್ ತೆರೆಯುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅನಧಿಕೃತ ಡೈವರ್ಷನ್ ತೆರೆದುಕೊಂಡಿದ್ದು, ಆ ಬಳಿಕ ಆ ಡೈವರ್ಷನ್ ನಲ್ಲಿ ನಡೆದ ದುರಂತ ಒಂದೆರಡಲ್ಲ. ಕೆಲವರು
ಉಳ್ಳಾಲ : ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ರ ಮನೆಯಲ್ಲಿ ಇಂದು ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಮನೆಯು ಸಂಪೂರ್ಣವಾಗಿ ಕರಕಲವಾಗಿದ್ದು, ಯಾವುದೇ ಪ್ರಾಣ ಹಾನಿ ನೋವು ಸಂಭವಿಸಿರುವುದಿಲ್ಲ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿರುವುದಿಲ್ಲ, ಆದರೆ ಮನೆಯು ಸಂಪೂರ್ಣವಾಗಿ
ಹಾಲಿನಂತೆ ಬಿಳುಪು ಮತ್ತು ಹೊಳಪಿನಿಂದ ಕೂಡಿರುವ ಮಕ್ಕಳ ಮನಸ್ಸಿಗೆ ಸಾಣೆ ಹಿಡಿದು ಸಂಸ್ಕಾರ ಕಲ್ಪಿಸಿಕೊಡುವುದು ಮುಖ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಈ ಶಿಬಿರ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ವೇದ ವಿದ್ವಾಂಸರಾದ ವೇ.ಮೂ ವಿಷ್ಣುಮೂರ್ತಿ ಆಚಾರ್ ಪುನರೂರು ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಹಾಗೂ ಜನ ವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಉಚಿತವಾಗಿ ಆಯೋಜಿಸಿದ
ಕಾರ್ಕಳ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಕಾರ್ಕಳ ತಾಲೂಕಿನ ಗಡಿಭಾಗದಲ್ಲಿ ಅಕ್ರಮವನ್ನು ತಡೆಗಟ್ಟಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಬಂದ ಕಟ್ಟುನಿಟ್ಟಿನ ಆದೇಶದ ಬಂದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಗಡಿಭಾಗವಾದ ಸಾಣೂರಿನಲ್ಲಿ ನಗರ ಠಾಣ ಸಿಬ್ಬಂದಿಗಳಾದ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಕಟ್ಟುನಿಟ್ಟಿನ ತಪಾಸಣೆಯನ್ನು ಮಾಡುತ್ತಿದ್ದರು. ಕಾರ್ಕಳ ನಗರ ಠಾಣಾ
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2023-24ರ ಶೈಕ್ಷಣಿಕ ವರ್ಷ ಮೇ. 29ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ. ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 7ರ ತನಕ ಇರಲಿದ್ದು, ಅಕ್ಟೋಬರ್ 8ರಿಂದ ಅಕ್ಟೋಬರ್ 24ರ ತನಕ ದಸರಾ ರಜೆ ಇರಲಿದೆ.ಇನ್ನು ಎರಡನೇ ಅವಧಿ ಅಕ್ಟೋಬರ್ 25ರಿಂದ 2024ರ ಎಪ್ರಿಲ್ 10ರ ವರೆಗೆ ಇರಲಿದೆ. ಎ.11ರಿಂದ ಬೇಸಗೆ ರಜೆ ಪ್ರಾರಂಭಗೊಳ್ಳಲಿದ್ದು ಮೇ 28ರ ವರೆಗೆ ರಜೆ
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಕಾಂಗ್ರೆಸ್‍ನ 29 ಶಾಸಕರು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದಾರೆ. ಅವರಲ್ಲಿ 13 ಜನರು ಈಗಾಗಲೇ ಕೆಪಿಸಿಸಿ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ. ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ವಕ್ತಾರ ಎಂ.ಜಿ. ಮಹೇಶ್ ಸವಾಲೆಸೆದರು. ನಗರದಲ್ಲಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಿಜ್ಞಾನ ನಿಕಾಯದ ಡೀನ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕುಮಾರ ಹೆಗ್ಡೆ ಬಿ.ಎ. ಅವರು ನೇಮಕಗೊಂಡಿದ್ದಾರೆ. ಪ್ರಾಂಶುಪಾಲರಾಗಿದ್ದ ಡಾ. ಎ. ಜಯ ಕುಮಾರ್ ಶೆಟ್ಟಿ ಅವರು ಮಾ.31ರಂದು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ. ಡಾ. ಕುಮಾರ ಹೆಗ್ಡೆ ಬಿ.ಎ. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ರ್ಯಾಂಕ್
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಳವಡಿಸಲಾಗಿರುವ ಬಂಟಿಂಗ್ಸ್ ಬ್ಯಾನರ್ ಗಳನ್ನು ತೆಗೆಸುವ ಕ್ರಮ ಕೈಗೊಳ್ಳಲಾಗಿದೆ, ಯಾವುದೇ ಕಾರ್ಯಕ್ರಮ ನಡೆಸುವಲ್ಲಿ ಅನುಮತಿ ಪಡೆದುಕೊಂಡೇ ನಡೆಸಬೇಕು, ರಾಜಕಾರಣಿಗಳು, ಚುನಾಯಿತ ಸದಸ್ಯರು ವೇದಿಕೆಯೇರಿ ಭಾಷಣ ಮಾಡುವಂತಿಲ್ಲ. ಯಾವುದೇ ಭರವಸೆ ನೀಡುವುದಾಗಲೀ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡುವು ದಾಗಲೀ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಚುನಾವಣಾ ಅಧಿಕಾರಿಯಾಗಿರುವ ಕೆ.ಮಹೇಶಚಂದ್ರ




























