Home Posts tagged V4News (Page 555)

ನಾವೂರು ಗ್ರಾ.ಪಂ. ಆಡಳಿತ ಅವ್ಯವಸ್ಥೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಬಂಟ್ವಾಳ: ನಾವೂರು ಗ್ರಾಮ ಪಂಚಾಯತಿಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ವಿರುದ್ಧ ಬಿಜೆಪಿ ವತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿಯಿತು.9/11, ಕಟ್ಟಡ ಪರವಾನಿಗೆ , ನಿರಾಕ್ಷೇಪಣಾ ಪತ್ರ, ಕಾಲುದಾರಿ ಸಮಸ್ಯೆ , ಪಂಚಾಯತಿ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ

ಪಣಿಯೂರು ಬಬ್ಬುಸ್ವಾಮಿ ದೈವಸ್ಥಾನ : ಹೊರೆ ಕಾಣಿಕೆ ಸಮರ್ಪಣೆ, ನಗನಾಣ್ಯ ಮೆರವಣಿಗೆ

ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಪುನರ್ ನಿರ್ಮಾಣಗೊಂಡಿರುವ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜರಗಲಿರುವ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಬೃಹತ್ ಹೊರೆಕಾಣಿಕೆ ಸಮರ್ಪಣೆ ಮತ್ತು ನಗನಾಣ್ಯ ಪರಿಕರಗಳ ಮೆರವಣಿಗೆ ನಡೆಯಿತು. ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಗೌರವಾಧ್ಯಕ್ಷ

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವರ್ಗಾವಣೆ

ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿರುವ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆ ಪೊಲೀಸ್ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದ್ದು, ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನಿಯೋಜಿಸಿ ಸರ್ಕಾರ ಆದೇಶಿಸಿದೆ.

ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ

ವಿಟ್ಲ: ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ವಿಟ್ಲ ಕಂಬಳಬೆಟ್ಟು ಮಸೀದಿ ಬಳಿ ನಡೆದಿದೆ.ಕಾರೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದು, ಈ ವೇಳೆ ಕಾರು ಪಲ್ಟಿಯಾಗಿದೆ. ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ಫೆ.25 ಮತ್ತು 26 : ವಿಷನ್-2023 ಮತ್ತು ಸಾನಿಧ್ಯ ಉತ್ಸವ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ವಿಷನ್-2023 ಹಾಗೂ ಸಾನಿಧ್ಯ ಉತ್ಸವ ಕಾರ್ಯಕ್ರಮವು ಫೆ.25 ಮತ್ತು 26ರಂದು ನಗರದ ಕದ್ರಿ ಉದ್ಯಾನದಲ್ಲಿ ನಡೆಯಲಿದೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಾನಸಿಕ ಭಿನ್ನ ಸಾಮಥ್ರ್ಯದ ಮಕ್ಕಳಿಗೂ ವಿಶೇಷ ಶಾಲೆಗಳ ಅವಕಾಶ ದೊರಕಬೇಕು. ಆ

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಜೂಲಿಯಟ್-2 ಸಿನಿಮಾ – ಫೆ.24ರಂದು ಬಿಡುಗಡೆ

ಸಿನಿ ಪ್ರೇಕ್ಷಕರ ಬಹುನಿರೀಕ್ಷೆಯ ಕ್ರೈಮ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮತ್ತು ಹೊಸಬರಿಂದ ಕೂಡಿರುವ ಹಾಗೂ ಉತ್ತಮ ಕಂಟೆಂಟ್ ಹೊಂದಿರುವ ಜೂಲಿಯಟ್-2 ಸಿನಿಮಾ ರಾಜ್ಯಾದ್ಯಂತ ಫೆ.24ರಂದು ಬಿಡುಗಡೆಗೊಳ್ಳಲಿದೆ. ಜೂಲಿಯಟ್-2 ಸಿನಿಮಾ ಹೆಸರೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಈಗಾಗಲೇ ಟೀಸರ್,ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಗೊಂಡಿದ್ದು ಸಿನಿ ಪ್ರೇಕ್ಷರಲ್ಲಿ ಕುತೂಹಲವನ್ನು ಮೂಡಿಸಿದೆ. ಇನ್ನು ನಗರದ ಪ್ರೆಸ್‍ಕ್ಲಬ್‍ನಲ್ಲಿ

ಗೊಂದಲದ ಗೂಡಾದ ಟೋಲ್ ಸಂತ್ರಸ್ತರ ಸಭೆ

ಹೆಜಮಾಡಿ ಗ್ರಾ. ಪಂ. ಸನಿಹದಲ್ಲೇ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲುದ್ದೇಶಿಸಿರುವ 14 ಮನೆಗಳ ಅಪೂರ್ಣ ಕಾಮಗಾರಿ ಮುಗಿಸುವ ಸಲುವಾಗಿ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಸೂಚಿಸಿ ಕರೆಯಲಾದ ಸಭೆ ತೀರ್ಮಾನಗಳಿಲ್ಲದೇ ಗದ್ದಲದಲ್ಲೇ ಮುಕ್ತಾಯಗೊಂಡಿದೆ. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಧಾಕರ್ ಕರ್ಕೇರ ತಾವು ತಮ್ಮ ಕೈಲಾದಷ್ಟು ಕಾಮಗಾರಿಯನ್ನು ನಿರ್ವಹಿಸಿದ್ದೇನೆ. ಆದರೆ ಸಂತ್ರಸ್ತರಿಂದ ನಿರ್ಮಿತಿ ಕೇಂದ್ರಕ್ಕೆ ಇನ್ನೂ ಹಲವು ಲಕ್ಷ ರೂ. ಗಳು

ವಿದ್ಯಾರ್ಥಿ ಸೋಮೇಶ್ವರ ಗುರುಮಠ ಬರೆದ ‘ಲವ್ ಇಸ್ ಬ್ಲೈಂಡ್ ಬಟ್ ದ ಲವರ್ಸ್’ ಕೃತಿ ಬಿಡುಗಡೆ

ಉಜಿರೆ, ಫೆ.21: ಎರಡಕ್ಕಿಂತ ಹೆಚ್ಚು ಭಾಷೆಗಳ ಮೇಲೆ ಹಿಡಿತ ಸಾಧಿಸಿಸುವ ದೃಢಸಂಕಲ್ಪ ಮತ್ತು ಅಧ್ಯಯನಶೀಲತೆಯ ನಿರಂತರ ತುಡಿತದೊಂದಿಗೆ ಗುರುತಿಸಿಕೊಂಡಾಗ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳು ಲಭಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಹೇಳಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ

ನಾರಾಯಣ ಗುರು ಅಭಿವೃದ್ಧಿ ನಿಗಮ ಚುನಾವಣೆಯ ಗಿಮಿಕ್ : ಸತ್ಯಜಿತ್ ಸುರತ್ಕಲ್

ಚುನಾವಣೆಗೆ ಎರಡು ತಿಂಗಳು ಇರುವಾಗ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಈಗಲಾದರೂ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಇದಕ್ಕಾಗಿ ಹೋರಾಟ ಮಾಡಿದವರಿಗೆ ಅಭಿನಂದನೆ ಹೇಳುತ್ತೇವೆ. ಆದರೆ ಈ ಹೊತ್ತಿನಲ್ಲಿ ಅಭಿವೃದ್ಧಿ ನಿಗಮ ಘೋಷಿಸಿ ಇದರ ಲಾಭ ಈಗ ಸಮುದಾಯಕ್ಕೆ ಸಿಗಲು ಸಾಧ್ಯವಿಲ್ಲ. ಇದೊಂದು ಚುನಾವಣೆಗೆ ಮೆಟ್ಟಿಲು ಅನ್ನುವ ರೀತಿ ಮಾಡಿದ್ದಾರಷ್ಟೇ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್

ಬಹರೈನ್ : ಫೆ.24ರಂದು ಕೋಟಿ ಚೆನ್ನಯ ತುಳು ಯಕ್ಷಗಾನ ಪ್ರದರ್ಶನ

ಬಹರೈನ್ ಅನಿವಾಸಿ ಬಿಲ್ಲವ ಸಮುದಾಯವಾದ “ಬಹರೈನ್ ಬಿಲ್ಲವಾಸ್ ” ಯಕ್ಷ ದುನಿಪು -2023″ಎನ್ನುವಂತಹ ತುಳು ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಯಕ್ಷಗಾನ ಪ್ರದರ್ಶನ ಫೆಬ್ರವರಿ 24ರ ಶುಕ್ರವಾರದಂದು ಸಂಜೆ 5 ಘಂಟೆಗೆ ಸರಿಯಾಗಿ ಮಾನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿರುವುದು. “ಯಕ್ಷ ದುನಿಪು -2023” ಕಾರ್ಯಕ್ರಮದಲ್ಲಿ ಇಲ್ಲಿನ ಯಕ್ಷ ಕಲಾವಿದರು ಹಾಗು ನಾಡಿನ ಜನಪ್ರಿಯ ಅತಿಥಿ ಕಲಾವಿದರುಗಳ