Home Posts tagged V4News (Page 564)

ಅಲೋಶಿಯಸ್ ಕಾಲೇಜಿನ ಸ್ಮಿತ ಡಿ.ಕೆ.ರವರಿಗೆ ಪಿಹೆಚ್.ಡಿ. ಪದವಿ

ಸಂತ ಅಲೋಶಿಯಸ್ ಸ್ವಾಯತ್ತಕಾಲೇಜಿನ ವಾಣಿಜ್ಯ ವಿಭಾಗದಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸ್ಮಿತ ಡಿ.ಕೆ. ಅವರ “ಇಂಪ್ಯಾಕ್ಟ್‌ಆಫ್‌ರಿವಾರ್ಡ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಆಂಡ್ ಪ್ರಾಕ್ಟೀಸಸ್ ಔಓ ಎಂಪ್ಲಾಯೀ ಸ್ಯಾಟಿಸ್‌ಫ್ಯಾಕ್ಷನ್: ಎ ಸ್ಟಡಿ ವಿದ್‌ ರೆಫರೆನ್ಸ್‌ ಟುಪ್ರೊಫೆಶನಲ್‌ ಕಾಲೇಜಸ್‌ ಇನ್‌ಕರ್ನಾಟಕ” ಎಂಬ ಮಹಾಪ್ರಬಂಧಕ್ಕೆಮಂಗಳೂರು ವಿಶ್ವವಿದ್ಯಾನಿಲಯವು

ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ‘ನಿತ್ಯ ಸತ್ಯ – ಬಾಳಿಗೆ ಬೆಳಕು’ ಕೃತಿ ಲೋಕಾರ್ಪಣೆ

ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ‘ನಿತ್ಯ ಸತ್ಯ – ಬಾಳಿಗೆ ಬೆಳಕು’ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅವರು ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ

ಫೆ. 17 : ಸಾಮೂಹಿಕ ರಕ್ತದಾನ ಶಿಬಿರ

ಬಹರೈನ್; ರಕ್ತ ದಾನ ಜಗತ್ತಿನಲ್ಲಿಯೇ ಶ್ರೇಷ್ಠ ದಾನ . ನಾವು ನೀಡುವ ಪ್ರತಿ ಹನಿ ರಕ್ತ ಕೂಡ ಅದೆಷ್ಟೋ ಜೀವಗಳ ಮರುಹುಟ್ಟಿಗೆ ಕಾರಣವಾಗಬಲ್ಲುದು ಈ ರಕ್ತದಾನದ ಮಹತ್ವವನ್ನು ಅರಿತಿರುವ ಪಟ್ಲಾ ಪೌಂಡೇಶನ್ ನ ಬಹರೈನ್ ಸೌದಿ ಘಟಕವು ಇದೆ ಫೆಬ್ರವರಿ 17ರಂದು ಸಲ್ಮಾನಿಯ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸಾಮೂಹಿಕ ರಕ್ತ ದಾನ ಶಿಬಿರವನ್ನು ಆಯೋಜಿಸಿದೆ . ಖ್ಯಾತ ಭಾಗವತರಾದ ಯಕ್ಷ ಧ್ರುವ ಪಟ್ಲಾ ಸತೀಶ್ ರವರ ಸಾರಥ್ಯದಲ್ಲಿ ಅಶಕ್ತ ಕಲಾವಿದರ ನೆರವಿಗಾಗಿ ಅಸ್ತಿತ್ವಕ್ಕೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಪಂಚಾಯತ್ ನ ಉಪ ಚುನಾವಣೆ ಗೆ ಭಾಜಪಾ ಕಡೆಯಿಂದ ಯತೀಶ್ ಡಿ.ಬಿ ನಾಮಪತ್ರ ಸಲ್ಲಿಕೆ

ಆರ್ಯಾಪು ಚುನಾವಣೆ ಅಧಿಕಾರಿ ತ್ರಿವೇಣಿ ರಾವ್ ರವರಿಗೆ ನಾಮಪತ್ರ ಸಲ್ಲಿಸಿದರು… ಈ ಸಂದರ್ಭದಲ್ಲಿ ಭಾಜಪಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕುಮಾರ್ ಶಾಂತಿವನ,ಆರ್ಯಾಪು ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಮೇಗಿನ ಪಂಜ,ಜಿಲ್ಲಾ

ಜೈಲರ್’ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್’ ರಜನಿಕಾಂತ್

ತಮಿಳು ಚಿತ್ರರಂಗದ ‘ಸೂಪರ್ ಸ್ಟಾರ್’ ರಜನಿಕಾಂತ್ ಭಾನುವಾರ ರಾತ್ರಿ ಕರಾವಳಿ ನಗರ ಮಂಗಳೂರಿಗೆ ಆಗಮಿಸಿದ್ದಾರೆ. ರಾತ್ರಿ 9ರ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಅಲ್ಲಿಂದ ಅಭಿಮಾನಿಗಳಿಗೆ ಕೈಬೀಸುತ್ತಾ ಖಾಸಗಿ ಕಾರಿನಲ್ಲಿ ತೆರಳಿದ್ದಾರೆ. ‘ಜೈಲರ್’ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿರುವ ಗುತ್ತಿನ ಮನೆಯಲ್ಲಿ

ಶಿವಪಾಡಿಯಲ್ಲಿ ಬಾಲಶಿವ ವೇಷಭೂಷಣ ಸ್ಪರ್ಧೆ

ಅತಿರುದ್ರ ಮಹಾಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 12, 2023 ರಂದು ನಡೆದ ‘ಸಮರ್ಪಣ ದಿವಸ’ದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150ಕ್ಕೂ ಹೆಚ್ಚಿನ ಪುಟಾಣಿ ಬಾಲಶಿವ ವೇಷಭೂಷಣಧಾರಿಗಳು ಭಾಗವಹಿಸಿದ್ದರು. ಶಿವ ದೇವಸ್ಥಾನದ ಪ್ರಾಂಗಣವು ಬಾಲಶಿವರುಗಳಿಂದ ತುಂಬಿ ತುಳುಕಿ ಭಕ್ತ ಸಮೂಹ ಪುಳಕಿತಗೊಂಡಿತು.

ಭಾರತೀಯ ಆಹಾರ ಪದ್ಧತಿ ಶ್ರೇಷ್ಠ: ಸ್ವಾಮಿನಿ ಮಂಗಳಾಮೃತ ಪ್ರಾಣ

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದವತಿಯಿಂದ ಉದಯವಾಣಿ ದಿನಪತ್ರಿಕೆ, ಸಾವಯವ ಕೃಷಿಕ ಗ್ರಾಹಕ ಬಳಗ, ರೋಟರಿ ಕ್ಲಬ್ ಮಂಗಳೂರು ಉತ್ತರ ಹಾಗೂ ಇನ್ನರ್ ವ್ಹೀಲ್ ಮಂಗಳೂರು ಉತ್ತರ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಧ್ವನಿ- ನಮ್ಮ ಕೈತೋಟ, ನಮ್ಮ ಆಹಾರ ಜರುಗಿತು. ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ಭಾರತೀಯ ಜೀವನ ಪದ್ಧತಿಯು ಶ್ರೇಷ್ಠ ಪರಂಪರೆ ಹೊಂದಿದೆ, ಋಷಿ ಮುನಿಗಳಿಂದ

ಬೆಳ್ತಂಗಡಿ: ಎರಡೇ ತಾಸಿನಲ್ಲಿ ಗಡಾಯಿಕಲ್ಲು ಏರಿ ದಾಖಲೆ ನಿರ್ಮಿಸಿದ ಕೋತಿರಾಜ್

ಬೆಳ್ತಂಗಡಿ: ಜ್ಯೋತಿರಾಜ್ ಯಾನೆ ಕೋತಿ ರಾಜ್ ಎಂದೇ ಖ್ಯಾತಿಯಾಗಿರುವ ಮಂಕಿ ಮ್ಯಾನ್ ಎರಡೇ ತಾಸಿನಲ್ಲಿ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಬಂಡೆ ಏರಿ ದಾಖಲೆ ನಿರ್ಮಿಸಿದ್ದಾರೆ. ಕೈ ಮೂಲಕ ಸಮುದ್ರ ಮಟ್ಟದಿಂದ 1700 ಅಡಿಯಿರುವ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಏರುವ ಮೂಲಕ ದಿ ಮಂಕಿ ಮ್ಯಾನ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರವಿವಾರ ಬೆಳಗ್ಗೆ ಇಲ್ಲಿನ ಚಂದ್ರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದನೂತನ ಶಾಖೆ ಶುಭಾರಂಭ

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 10 ನೇ ಕಾವಳಮುಡೂರು – ಎನ್. ಸಿ.ರೋಡು ಶಾಖೆ ಕಾವಳಮೂಡೂರು ಗ್ರಾಮದ ಎನ್.ಸಿ. ರೋಡಿನಲ್ಲಿರುವ ತೌಹೀದ್ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.ನೂತನ ಶಾಖೆಯನ್ನು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರಿಗೆ ಆರ್ಥಿಕ ವ್ಯವಹಾರವನ್ನು ಒದಗಿಸುವ ಕಾರ್ಯವನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮಾಡಿಕೊಂಡು

ಕಡಬ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ : ಮಗು ಮೃತ್ಯು, ನಾಲ್ವರಿಗೆ ಗಾಯ

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಗು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಸೋಮವಾರದಂದು ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಹಾಗೂಕೆ ಎಸ್ ಆರ್ ಟಿ ಸಿ ಬಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು,