ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಪಂಚಾಯತ್ ನ ಉಪ ಚುನಾವಣೆ ಗೆ ಭಾಜಪಾ ಕಡೆಯಿಂದ ಯತೀಶ್ ಡಿ.ಬಿ ನಾಮಪತ್ರ ಸಲ್ಲಿಕೆ
ಆರ್ಯಾಪು ಚುನಾವಣೆ ಅಧಿಕಾರಿ ತ್ರಿವೇಣಿ ರಾವ್ ರವರಿಗೆ ನಾಮಪತ್ರ ಸಲ್ಲಿಸಿದರು… ಈ ಸಂದರ್ಭದಲ್ಲಿ ಭಾಜಪಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕುಮಾರ್ ಶಾಂತಿವನ,ಆರ್ಯಾಪು ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಮೇಗಿನ ಪಂಜ,ಜಿಲ್ಲಾ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಬಿಜತ್ರೆ, ಸಂತೋಷ್ ಕುಮಾರ್ ಕೈಕಾರ,ಬೂತ್ ಅಧ್ಯಕ್ಷ ಅಜಿತ್ ರೈ ತೊಟ್ಲಾ, ಗಣೇಶ್ ರೈ ಮೂಲೆ, ಆರ್ಯಾಪು ಪಂಚಾಯತ್ ಸದಸ್ಯ ಹರೀಶ್ ವಾಗ್ಲೆ,ಸುಧಾಕರ್ ರಾವ್, ರೇಖಾನಾಥ್ ರೈ ಹಾಗೂ ಅನೇಕ ಭಾಜಪಾ ಮುಖಂಡರು ಉಪಸ್ಥಿತರಿದ್ದರು…
ಆರ್ಯಪು ಪಂಚಾಯತ್ ಭಾಜಪಾ ಸದಸ್ಯರಾಗಿದ್ದ ಗಿರೀಶ್ ಗೌಡ ರವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಎದುರಾಗಿದ್ದು, ಫೆಬ್ರವರಿ 25 ರ ಶನಿವಾರ ಮತದಾನ ನಡೆಯಲಿದೆ. ಮತ್ತು ಫೆಬ್ರವರಿ 28 ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಹೊರ ಬೀಳಲಿದೆ.