Home Posts tagged V4News (Page 586)

ಗಣರಾಜ್ಯೋತ್ಸವ ಪರೇಡ್‌: ನೌಕಾಪಡೆ ತಂಡಕ್ಕೆ ಮಂಗಳೂರಿನ ದಿಶಾ ಅಮೃತ್‌ ನೇತೃತ್ವ

 ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ಮಂಗಳೂರಿನ ದಿಶಾ ಅಮೃತ್‌ ಅವರು ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸುವರು. ಈ ತುಕಡಿಯಲ್ಲಿ ನೌಕಾಪಡೆಯ 144 ಯುವ ಯೋಧರು ಮತ್ತು “ನಾರಿಶಕ್ತಿ’ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ

ರಾಜ್ಯವನ್ನು ಚೋರ ಗುರು ಶಿಷ್ಯರು ಆಳುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸುರತ್ಕಲ್: “ರಾಜ್ಯದಲ್ಲಿ ಬಿಜೆಪಿ ಸರಕಾರ ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಕಂಟ್ರಾಕ್ಟರ್ ಅಸೋಷಿಯೇಷನ್ ಶಾಸಕರು 40% ಕಮಿಷನ್ ತಗೊಳ್ಳೋದನ್ನು ಒಪ್ಪಿಕೊಂಡಿದೆ. ಇವರದ್ದು ಬರೀ ಸುಳ್ಳುಗಳ ಸರಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಳ್ತಾ ಇದ್ದಾರೆ. ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ”

ಮಂಗಳೂರಿನಲ್ಲಿ ಹೊಚ್ಚ ಹೊಸ ಶೋರೂಂ ಆಗಿ ಕಂಗೊಳಿಸುತ್ತಿರುವ ಜೋಸ್ ಆಲುಕ್ಕಾಸ್

ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹೆಸರಾಂತ ಜ್ಯುವೆಲ್ಲರಿ ಗ್ರೂಪ್ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ನವೀಕೃತಗೊಂಡಿದ್ದು, ಹೊಚ್ಚ ಹೊಸ ಶೋರೂಂನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೋಸ್ ಆಲುಕ್ಕಾಸ್ ಬ್ರ್ಯಾಂಡ್ ಕಳೆದ 58 ವರ್ಷಗಳಿಂದ ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥಕವಾಗಿದೆ. ವಿಶಿಷ್ಠವಾದ ಕಾರ್ಯಾಚರಣೆ ವ್ಯವಸ್ಥೆ ಮತ್ತು ದೂರದೃಷ್ಟಿಯೊಂದಿಗೆ ಈ ಬ್ರ್ಯಾಂಡ್ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ಬಲವಾದ ಪರಂಪರೆಯನ್ನು ಸ್ಥಾಪಿಸಿದೆ. ಇದೀಗ ಮಂಗಳೂರು

ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ

ಕಾಂಚನ ಸಮೂಹ ಸಂಸ್ಥೆಯ ಉಡುಪಿಯ ಕಡಿಯಾಳಿ ಶೋರೂಮ್‍ನಲ್ಲಿ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಉಡುಪಿಯ ಕಡಿಯಾಳಿ ಕಾಂಚನ ಸಮೂಹ ಸಂಸ್ಥೆಯ ಶೋರೂಂನಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬಿಗ್‍ಬಾಸ್ ಸೀಸನ್ 9ರ ವಿಜೇತ, ನಟ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಅವರು ನೂತನ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ

ಶಂಕುಸ್ಥಾಪನೆಗೊಂಡು ಸ್ತಬ್ಧಗೊಂಡಿದ್ದ ಹಾರಾಡಿ ಕ್ರಾಸ್ ರೈಲು ನಿಲ್ದಾಣ ರಸ್ತೆ ಮತ್ತೆ ಆರಂಭಗೊಂಡ ಕಾಮಗಾರಿ

ಪುತ್ತೂರು: ಕಳೆದ ನವೆಂಬರ್ 2ರಂದು ಶಂಕುಸ್ಥಾಪನೆಗೊಂಡ ಬಳಿಕ ಎರಡೂವರೆ ತಿಂಗಳು ಸ್ತಬ್ದಗೊಂಡಿದ್ದ ಹಾರಾಡಿ ಕ್ರಾಸ್- ರೈಲು ನಿಲ್ದಾಣ ರಸ್ತೆಯ ಅಭಿವೃದ್ಧಿ ಕಾಮಗಾರಿ ಇದೀಗ ಚಾಲನೆ ಪಡೆದುಕೊಳ್ಳುತ್ತಿದೆ. ಶುಕ್ರವಾರ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ಅಧಿಕಾರಿಗಳ ತಂಡ ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸಿತು. ಕೆಲಸ ಆರಂಭಗೊಳ್ಳುತ್ತಿದೆ ಎಂದು ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು. ನ.2ರಂದು ಶಂಕುಸ್ಥಾಪನೆಯಾದ ಬೆನ್ನಲ್ಲೇ ಕೆಲಸ ಆರಂಭಗೊಳ್ಳಬೇಕಿತ್ತು.

ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಫೆ.2ರಿಂದ ಹೊರೆಕಾಣಿಕೆ ಮೆರವಣಿಗೆ

ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಫೆಬ್ರವರಿ 2ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರಿನ ನಗರದ ಶರವು ದೇವಸ್ಥಾನದಿಂದ ಹೊಣೆಕಾಣಿಕೆ ಹೊರಡಲಿದೆ. ಮಂಜೇಶ್ವರ, ತಲಪಾಡಿ, ತೊಕ್ಕೊಟ್ಟು, ಕುತಾರ್, ಕೊಣಾಜೆ ಮುಡಿಪು ಜಪ್ಪಿನಮೊಗರು ಪಂಪವೆಲ್ ಬಿಕರ್ನಕಟ್ಟೆ, ಕುಲಶೇಖರ, ವಾಮಂಜೂರು, ಗುರುಪುರ ಕೈಕಂಬ ಬೀಬಿಲಚ್ಚಿಲ್ ಬೆಳಿಗ್ಗೆ 10ಗಂಟೆಗೆ ಮಂಜೇಶ್ವರ

ಅನೈತಿಕ ಚಟುವಟಿಕೆಗಳ ನಿರ್ಮೂಲನೆಯಲ್ಲಿ ಜನರ ಸಹಕಾರ ಅಗತ್ಯ

ಉಜಿರೆ: ಮಾನವ ಕಳ್ಳ ಸಾಗಾಣಿಕೆ ಮತ್ತು ವೇಶ್ಯಾವಾಟಿಕೆಯ ವಿವರಗಳು ಗೊತ್ತಾದ ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಮಾಜಕ್ಕೆ ಮಾರಕವಾಗುವ ಇಂತಹ ಚಟುವಟಿಕೆಗಳ ನಿರ್ಮೂಲನೆಯಲ್ಲಿ ಈ ಬಗೆಯ ಜನಸಹಭಾಗಿತ್ವ ಮಹತ್ವದ ಪಾತ್ರವಹಿಸುತ್ತದೆ ಎಂದು ಎಂದು ಬೆಳ್ತಂಗಡಿ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಶಿವಕುಮಾರ್ ಹೇಳಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಮನಃಶಾಸ್ತ್ರ ವಿಭಾಗವು ‘ಅನೈತಿಕ ಮಾನವ ಸಾಗಣೆ

ಜ.22ರಂದು ಪುತ್ತೂರಿನಲ್ಲಿ ಕಾಂಗ್ರೆಸ್‍ನಿಂದ ಜನಧ್ವನಿ ಕಾರ್ಯಕ್ರಮ

ಪುತ್ತೂರು: ಮಂಗಳೂರಿನಲ್ಲಿ ಜ.22ರಂದು ಸಾಯಂಕಾಲ 4 ಗಂಟೆಗೆ ನಡೆಯುವ ಜನಧ್ವನಿ ಕಾರ್ಯಕ್ರಮದಲ್ಲಿ ಒಟ್ಟು 50ಸಾವಿರ ಮಂದಿ ಸೇರುವ ನಿರೀಕ್ಷೆಯನ್ನು ಇಟ್ಟಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಿಂದ 20 ಜನರು ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ 5ಸಾವಿರ ಜನರು ಭಾಗವಹಿಸಲಿದ್ದಾರೆ. ಪಕ್ಷಕ್ಕೆ ಬದ್ದವಾಗಿ ಬರುವವರನ್ನು ಸ್ವಾಗತ ಮಾಡುತ್ತೇವೆ ಮತ್ತು ನಾವು ಪಕ್ಷದ ಚಿಹ್ನೆಯ ಕೆಳಗೆ ಕೆಲಸಮಾಡುತ್ತೇವೆ ಎಂದು ಪುತ್ತೂರು

ಹಂತಕರಿಂದ ಹತ್ಯೆಗೀಡಾದ ಜಲೀಲ್ ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ವಿತರಿಸಿದ ಶಾಸಕ ಪ್ರಿಯಾಂಕ್ ಖರ್ಗೆ

ಸುರತ್ಕಲ್: ಇತ್ತೀಚೆಗೆ ಹಂತಕರಿಂದ ಅಮಾನುಷವಾಗಿ ಹತ್ಯೆಗೀಡಾದ ಜಲೀಲ್ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರು ವೈಯಕ್ತಿಕ ನೆಲೆಯಲ್ಲಿ ಕೊಡಮಾಡಿದ 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿ ಸಾಂತ್ವಾನ ನುಡಿದರು. ಜಲೀಲ್ ಹತ್ಯೆಯ ಬಗ್ಗೆ ಪ್ರಿಯಾಂಕ್‍ಗೆ ಕೂಲಂಕಷ ವಿವರಣೆ ನೀಡಿದ ಮೊಯ್ದೀನ್ ಬಾವಾ ಹತ್ಯೆ ಆರೋಪಿಗಳು ಮೂರೇ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ

ವೀರರಾಣಿ ಅಬ್ಬಕ್ಕ ಪ್ರಶಸ್ತಿ : ಶ್ರೀಮತಿ ಭವಾನಿ, ಡಾ.ಪಾರ್ವತಿ ಜಿ. ಐತಾಳ್ ಆಯ್ಕೆ

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ನೀಡುವ 2022-23ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್ ಮತ್ತು ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ತುಳು ಪಾಡ್ದನದ ಮೇರು ಪ್ರತಿಭೆ ಶ್ರೀಮತಿ ಭವಾನಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಜಯರಾಂ ಶೆಟ್ಟಿ ಹೇಳಿದರು.ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ